ಹೀಗಿದೆ Samsung Galaxy F54 5G ಫೋನಿನ ಅಂತರಂಗ ಬಹಿರಂಗ


Team Udayavani, Jul 14, 2023, 11:38 AM IST

4-samsung

ಭಾರತದಲ್ಲಿ 30,000 ರೂ.ಗಳೊಳಗಿನ ಸ್ಮಾರ್ಟ್‌ಫೋನ್ ವಿಭಾಗ ಹಿಂದಿಗಿಂತ ಹೆಚ್ಚು ಗಮನ ಸೆಳೆಯುತ್ತಿದೆ. ಅನೇಕ ಬ್ರಾಂಡ್ ಗಳು ಕಳೆದ ಎರಡು ತಿಂಗಳ ಅವಧಿಯಲ್ಲಿ ವಿವಿಧ ಮಾಡೆಲ್ ಗಳನ್ನು ಈ ವಿಭಾಗದಲ್ಲಿ ಬಿಡುಗಡೆ ಮಾಡಿವೆ.

ಇದಕ್ಕೆ ಇತ್ತೀಚಿನ ಸೇರ್ಪಡೆಯೆಂದರೆ Samsung Galaxy F54 5G. ಇದು ದೀರ್ಘ ಕಾಲದ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾ ಹೊಂದಿದೆ. ಸ್ಯಾಮ್‌ಸಂಗ್‌ನ ಎಫ್ ಸರಣಿ ಬ್ಯಾಟರಿ ಬಾಳಿಕೆಗೆ ಹೆಸರಾಗಿದೆ. ಈ ಹೊಸ ಫೋನ್ ಒಂದೇ  ಆವೃತ್ತಿಯದಾಗಿದ್ದು, 8 ಜಿಬಿ ರ್ಯಾಮ್ ಮತ್ತು 256 ಜಿಬಿಯಷ್ಟು ಭರ್ಜರಿ ಆಂತರಿಕ ಸಂಗ್ರಹ ಹೊಂದಿದೆ.

ವಿನ್ಯಾಸ: ಹಿಂಭಾಗದಲ್ಲಿ  Samsung Galaxy F54 5G ಅದರ A- ಸರಣಿಯ ಇತರ ಫೋನ್ ಗಳಂತೆಯೇ ಕಾಣುತ್ತದೆ. ನೀಲಿ ಮತ್ತು  ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.  ಹಿಂದಿನ ಕ್ಯಾಮೆರಾಗಳ ವಿನ್ಯಾಸವು ಸ್ಯಾಮ್‌ಸಂಗ್‌ನ ದುಬಾರಿ S23 ಸರಣಿಯ ಶೈಲಿಯಂತಿದೆ.  199 ಗ್ರಾಂ ತೂಕವಿದ್ದು. ಪ್ಲಾಸ್ಟಿಕ್ ಫ್ರೇಂ ಹೊಂದಿದ್ದು, ಪರದೆ ಮತ್ತು ಹಿಂಭಾಗದ ಪ್ಯಾನೆಲ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಹೊಂದಿವೆ.

Samsung Galaxy F54 5G ಸ್ಟೀರಿಯೋ ಸ್ಪೀಕರ್‌ಗಳಿಲ್ಲ. ಪವರ್ ಬಟನ್ ಸಮತಟ್ಟಾಗಿದ್ದು ಬಟನ್ ನಲ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಇದು ವೇಗವಾಗಿ ಕಾರ್ಯನಿರ್ವಹಿಸುತ್ತದೆ.  ಹೈಬ್ರಿಡ್ ಡ್ಯುಯಲ್-ಸಿಮ್ ಟ್ರೇ ಇದ್ದು, ಎಸ್ ಡಿ ಕಾರ್ಡ್ ಹಾಕಿಕೊಂಡು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. 256 ಜಿಬಿ ಇರುವುದರಿಂದ ಕಾರ್ಡ್ ನ ಅಗತ್ಯ ಬೀಳುವುದಿಲ್ಲ.

ಪರದೆ: ಇದರ ಪರದೆ  ಫುಲ್ HD+ ರೆಸಲ್ಯೂಶನ್ ಹೊಂದಿದೆ. 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ AMOLED ಪರದೆ ನೀಡಲಾಗಿದೆ. 120Hz ಅಥವಾ 60Hz ನಲ್ಲಿ ರಿಫ್ರೆಶ್ ರೇಟ್ ಗೆ ಹೊಂದಿಸಿಕೊಳ್ಳಬಹುದಾಗಿದೆ. ಪರದೆ ಸಾಕಷ್ಟು ಪ್ರಕಾಶಮಾನವಾಗಿದ್ದು, ಬಣ್ಣಗಳು ಎದ್ದು ಕಾಣುತ್ತವೆ. ಪರದೆಯು 120 Hz ನಲ್ಲಿ ಯಾವುದೇ ಅಡೆತಡೆ ಇಲ್ಲದೇ  ಸರಾಗವಾಗಿ ಚಲಿಸುತ್ತದೆ.

ಪ್ರೊಸೆಸರ್ ಮತ್ತು ಕಾರ್ಯಾಚರಣೆ: ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G Exynos 1380 ಪ್ರೊಸೆಸರ್ ಹೊಂದಿದೆ. ಇದು 10 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. Wi-Fi 6, ಬ್ಲೂಟೂತ್ 5.3, NFC ಹೊಂದಿದೆ.  ಈ ಫೋನ್ ಗೆ ನಾಲ್ಕು ವರ್ಷಗಳ ಆಂಡ್ರಾಯ್ಡ್ ಅಪ್ ಡೇಟ್ ಮತ್ತು ಐದು ವರ್ಷಗಳ ಸೆಕ್ಯುರಿಟಿ ಪ್ಯಾಚ್ ನೀಡುವ ಭರವಸೆಯನ್ನು ಸ್ಯಾಮ್ ಸಂಗ್ ನೀಡಿದೆ.  Android 13 ಆಧಾರಿತ One UI 5.1 ಇದ್ದು, Samsung ಫೋನ್‌ಗಳಲ್ಲಿ ಇರುವ ಎಲ್ಲಾ ಸಾಮಾನ್ಯ ಶಾರ್ಟ್‌ಕಟ್‌ಗಳು, ಗೆಸ್ಚರ್‌ಗಳು ಮತ್ತು ಸೆಟಿಂಗ್ ಆಯ್ಕೆಗಳನ್ನು ಒಳಗೊಂಡಿದೆ.

ಇದು ಒಂದು ಮಧ್ಯಮ ವಿಭಾಗದ ಫೋನ್ ನಲ್ಲಿರಬಹುದಾದ ವೇಗದ ಕಾರ್ಯಾಚರಣೆ ಹೊಂದಿದೆ. ಆಪ್ ಗಳೇ ಇರಬಹುದು, ಮೇಲ್, ಫೇಸ್ ಬುಕ್, ಗ್ಯಾಲರಿ ತೆರೆಯುವಿಕೆ ವೇಗವಾಗಿ ಸರಾಗವಾಗಿ ಆಗುತ್ತದೆ.  ಗೇಮಿಂಗ್ ಗೂ ಸೂಕ್ತವಾಗಿದೆ.

ಬ್ಯಾಟರಿ: Samsung Galaxy F54 5G ಭರ್ಜರಿ 6,000mAh ಬ್ಯಾಟರಿ ಹೊಂದಿದೆ. 25W ವೇಗದ ಚಾರ್ಜ್ ಅನ್ನು ಬೆಂಬಲಿಸುತ್ತದೆ. ಆದರೆ, ಎಂದಿನಂತೆ ಬಾಕ್ಸ್ ನಲ್ಲಿ ಚಾರ್ಜರ್ ನೀಡಿಲ್ಲ. ಬ್ಯಾಟರಿ ಬಾಳಿಕೆ ಹೆಚ್ಚು ಬಯಸುವವರಿಗೆ ಇದು ಸೂಕ್ತವಾಗಿದೆ.

ಒಂದು ಪೂರ್ಣ ಚಾರ್ಜ್‌ನೊಂದಿಗೆ ಸುಮಾರು ಎರಡು ದಿನ ಬಳಸಬಹುದು.  ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು ಒಂದೂವರೆ ಗಂಟೆ ಕಾಲ ತೆಗೆದುಕೊಳ್ಳುತ್ತದೆ.

ಕ್ಯಾಮರಾ:

Samsung Galaxy F54 5G, ಆಪ್ಟಿಕಲ್ ಸ್ಟೆಬಿಲೈಸೇಶನ್ (OIS) ಜೊತೆಗೆ ಪ್ರಾಥಮಿಕ 108-ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಇದರೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದ್ದು, ಅದು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುವುದು ವಿಶೇಷ.

ಹಗಲಿನ ವೇಳೆಯಲ್ಲಿ, ನೈಸರ್ಗಿಕ ಬಣ್ಣಗಳು, HDR ಮತ್ತು ಉತ್ತಮ ವಿವರಗಳೊಂದಿಗೆ ಲ್ಯಾಂಡ್‌ಸ್ಕೇಪ್ ಶಾಟ್‌ಗಳು ಉತ್ತಮವಾಗಿ ಕಾಣುತ್ತವೆ. ಡಿಜಿಟಲ್ ಜೂಮ್ 10X ವರೆಗೆ ಮಾತ್ರ  ಇದೆ. ಕಡಿಮೆ ಬೆಳಕಿನಲ್ಲಿ ಸಹ ಮುಖ್ಯ ಕ್ಯಾಮರಾ ಉತ್ತಮವಾಗಿ ದೃಶ್ಯಗಳನ್ನು ಸೆರೆ ಹಿಡಿಯುತ್ತದೆ.  ನೈಟ್ ಮೋಡ್ ನಲ್ಲಿ ಲಾಂಗ್ ಶಾಟ್ ಗಳಲ್ಲಿ ಸಹ ಸಬ್ಜೆಕ್ಟ್ ಮಸುಕಾಗದೇ ಉತ್ತಮವಾಗಿ ಮೂಡಿ ಬರುತ್ತದೆ. 32 ಮೆ. ಪಿ. ಸೆಲ್ಫಿ ಕ್ಯಾಮೆರಾ ಸಹ ಉತ್ತಮ ಚಿತ್ರಗಳನ್ನು ನೀಡುತ್ತದೆ.

ಈ ಫೋನಿನಲ್ಲಿ 4K ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. ಕಡಿಮೆ ಬೆಳಕಿನಲ್ಲಿಯೂ ಸಹ ಉತ್ತಮ ವಿಡಿಯೋ ದೊರಕುತ್ತದೆ. ಆದರೆ 4ಕೆ ವಿಡಿಯೋ  ಚಿತ್ರೀಕರಣಕ್ಕೆ ಇಮೇಜ್ ಸ್ಟೆಬಿಲೈಸೇಷನ್ ಇಲ್ಲ.  1080p 30fps ಗೆ ಬದಲಿಸಿಕೊಂಡರೆ ಸ್ಟೆಬಿಲೈಸೇಷನ್ (ಅಲುಗಾಟವಿಲ್ಲದ ವಿಡಿಯೋ) ಸೌಲಭ್ಯ ದೊರಕುತ್ತದೆ.

ಒಟ್ಟಾರೆ, ದೀರ್ಘಾವಧಿ ಬ್ಯಾಟರಿ ಇರಬೇಕು. ಕ್ಯಾಮರಾ ಚೆನ್ನಾಗಿರಬೇಕು ಎಂದು ಬಯಸುವವರು Samsung Galaxy F54 5G ಯನ್ನು ಪರಿಗಣಿಸಬಹುದು.

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್-‌ ಚೆನ್ನೈ ಘಟಕ ಪುನರಾರಂಭ

Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್-‌ ಚೆನ್ನೈ ಘಟಕ ಪುನರಾರಂಭ

iPhone series: ಹೊಸ ಐಫೋನ್ 16 ಸರಣಿ- ಇದರಲ್ಲಿ ಏನೇನು ವೈಶಿಷ್ಟ್ಯಗಳಿವೆ ?

iPhone series: ಹೊಸ ಐಫೋನ್ 16 ಸರಣಿ- ಇದರಲ್ಲಿ ಏನೇನು ವೈಶಿಷ್ಟ್ಯಗಳಿವೆ ?

Big screen, low price iPhone-16 launch

iPhone-16: ಭಾರತದಲ್ಲೇ ಉತ್ಪಾದನೆ ಕಾರಣ ಐಫೋನ್‌-16 ಬೆಲೆಯಲ್ಲಿ ಇಳಿಕೆ

Hyundai Alcazar 2024: ಭಾರತದ ಮಾರುಕಟ್ಟೆಗೆ ಹುಂಡೈ ಅಲ್ಕಜಾರ್‌ ಬಿಡುಗಡೆ

Hyundai Alcazar 2024: ಭಾರತದ ಮಾರುಕಟ್ಟೆಗೆ ಹುಂಡೈ ಅಲ್ಕಜಾರ್‌ ಬಿಡುಗಡೆ

Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್‌ನಲ್ಲಿ “ಎಕ್ಸ್‌’ ಬಳಕೆಗೆ ತಡೆ

Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್‌ನಲ್ಲಿ “ಎಕ್ಸ್‌’ ಬಳಕೆಗೆ ತಡೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.