Watch viedo: ವಿಗ್ ಹಾಕ್ಕೊಂಡು 2ನೇ ಮದುವೆಯಾಗಲು ಬಂದ ವರ…ವಿವಾಹ ಮಂಟಪದಲ್ಲೇನಾಯ್ತು?
Team Udayavani, Jul 14, 2023, 11:47 AM IST
ಗಯಾ(ಬಿಹಾರ): ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆಯಂತೆ, ಇಂದು ಸಾವಿರಾರು ಸುಳ್ಳು, ಮೋಸ, ವಂಚನೆಯಿಂದ ವಿವಾಹವಾಗುವ ನೂರಾರು ಪ್ರಕರಣಗಳು ನಡೆಯುತ್ತಿರುತ್ತದೆ. ಅದೇ ರೀತಿ ಬಿಹಾರದ ಗಯಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಸುಳ್ಳು ಹೇಳಿ ವಿಗ್ ಧರಿಸಿ ವಿವಾಹವಾಗಲು ಬಂದು ವಿವಾಹ ಮಂಟಪದಲ್ಲೇ ಸಿಕ್ಕಿಬಿದ್ದು ವಧುವಿನ ಕುಟುಂಬಿಕರಿಂದ ಥಳಿತಕ್ಕೊಳಗಾದ ಘಟನೆ ನಡೆದಿದೆ.
ಇದನ್ನೂ ಓದಿ:ವರ್ಷದಲ್ಲಿ 12 ಬಾರಿ ಹಾವಿನ ಕಡಿತಕ್ಕೊಳಗಾದ ಮಹಿಳೆ… ಬದುಕುಳಿದಿದ್ದೇ ವಿಸ್ಮಯ
ವರದಿಯ ಪ್ರಕಾರ, ಗಯಾದ ಇಕ್ಬಾಲ್ ಪುರ ನಿವಾಸಿಯಾಗಿರುವ ವರ ಮೊದಲನೇ ವಿವಾಹದ ಸಂಗತಿಯನ್ನು ಮುಚ್ಚಿಟ್ಟು ವಿಗ್ ಧರಿಸಿ ಬಜೌರಾ ಗ್ರಾಮಕ್ಕೆ ಬಂದಿದ್ದ. ವಿವಾಹ ಮಂಟಪದಲ್ಲಿ ವಧುವಿನ ಸಂಬಂಧಿಕರು ವರನ ಬೋಳು ತಲೆಯ ವಿಚಾರ ಗಮನಕ್ಕೆ ಬಂದ ಕೂಡಲೇ ಆತನಿಗೆ ಥಳಿಸಿದ್ದಾರೆ.
ಈ ಸಂದರ್ಭದಲ್ಲಿ ವರ ಎರಡು ಕೈಮುಗಿದು ವಿಗ್ ತೆಗೆಯದಂತೆ ವಿನಂತಿಸಿಕೊಳ್ಳುತ್ತಿರುವುದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ. ಮೊದಲನೇ ವಿವಾಹದ ಬಗ್ಗೆ ತಿಳಿಸದೇ, ವಿಗ್ ಧರಿಸಿ 2ನೇ ವಿವಾಹವಾಗಲು ಬಂದ ವರನಿಗೆ ವಧುವಿನ ಸಂಬಂಧಿಕರು ಅವಾಚ್ಯ ಶಬ್ದಗಳಿಂದ ಬೈಯುತ್ತಿರುವುದು ವಿಡಿಯೋದಲ್ಲಿದೆ.
#Gaya, #Bihar
Groom was beaten by the bride’s family as they came to know that he wears a wig.Now such kind of information shouldn’t be kept hidden from a partner and that’s absolutely wrong.
BUT for that purpose, the groom can’t be tortured or beaten by the bride’s family. pic.twitter.com/KvB7F3g2gL
— ミ🇮🇳★ 𝙆𝙪𝙘𝙝𝘽𝙖𝙖𝙩𝙃𝙖𝙞 ★🇮🇳彡 (@KyaaBaatHai) July 13, 2023
ವಧುವಿನ ಕಡೆಯವರು ವರನ ವಿಗ್ ತೆಗೆಯಲು ಮುಂದಾದಾಗ ವರ ಎರಡು ಕೈಗಳನ್ನು ವಿಗ್ ಮೇಲೆ ಇಟ್ಟು ದಯವಿಟ್ಟು ತೆಗೆಯಬೇಡಿ ಎಂದು ಗೋಗರೆಯುತ್ತಿದ್ದ. ಆದರೆ ವಧುವಿನ ಸಂಬಂಧಿಕರು ಯಾವುದೇ ಕರುಣೆ ತೋರಿಸದೇ ತರಾಟೆಗೆ ತೆಗೆದುಕೊಂಡಿದ್ದು, ವರನ ಬೋಳು ತಲೆ ವಿಷಯ ಹಾಗೂ 2ನೆ ವಿವಾಹದ ಬಗ್ಗೆ ತಿಳಿಯುತ್ತಿದ್ದಂತೆ ವಧು ವಿವಾಹವನ್ನು ರದ್ದುಪಡಿಸಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.