ಪೂರ್ವದ್ವೇಷದ ಹಿನ್ನಲೆ: ಎರಡು ಗುಂಪುಗಳ ನಡುವೆ ಹಲ್ಲೆ, ದೂರುಗಳು ದಾಖಲು
Team Udayavani, Jul 15, 2023, 6:25 AM IST
ಪಡುಬಿದ್ರಿ: ಪೂರ್ವದ್ವೇಷದ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ 1-45ರ ವೇಳೆಗೆ ಹೆಜಮಾಡಿಯ ಶ್ರೀ ನಾರಾಯಣ ಗುರು ಮಂದಿರದ ಬಳಿ ಸೂರಜ್ ಸಾಲ್ಯಾನ್ ಹಾಗೂ ಸಂದೇಶ್ ಶೆಟ್ಟಿ ಎಂಬವರ ಎರಡು ಗುಂಪುಗಳ ಮಧ್ಯೆ ಪರಸ್ಪರ ಹಲ್ಲೆ, ಕೊಲೆ ಯತ್ನಗಳು ನಡೆದಿದ್ದು, ಪರ ಹಾಗೂ ವಿರುದ್ಧದ ಎರಡು ದೂರುಗಳು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಸೂರಜ್ ಸಾಲ್ಯಾನ್, ಶರತ್ ಶೆಟ್ಟಿ, ಸಚಿನ್ ಕಾರಿನಲ್ಲಿ ಹೋಗುತ್ತಿದ್ದಾಗ ಸ್ವಿಫ್ಟ್ ಕಾರೊಂದು ಫಾಲೋ ಮಾಡಿಕೊಂಡು ಬಂದು ಸೂರಜ್ ಕಾರಿಗೆ ಅಡ್ಡ ಹಾಕಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳಾದ ಸಂದೇಶ್ ಶೆಟ್ಟಿ, ಶರತ್ ಭಂಡಾರಿ, ವಿಘ್ನೇಶ್, ಗೋಕುಲ್, ನಿಶಾನ್, ಮುನ್ನ ಸಂತೆಕಟ್ಟೆ ಮತ್ತಿತರ 6 ಮಂದಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹಲ್ಲೆ ನಡೆಸಿದ್ದಾರೆ. ಸೂರಜ್ ಸಾಲ್ಯಾನ್ ಹಾಗೂ ಶರತ್ ಶೆಟ್ಟಿ ಅವರು ಆರೋಪಿಗಳತ್ತ ಕಲ್ಲುಗಳನ್ನು ಎಸೆದಿದ್ದಾರೆ. ಕೊಲ್ಲುವುದಾಗಿಯೂ ಬೆದರಿಕೆ ಒಡ್ಡಿದ್ದ ವೇಳೆ ಸಂದೇಶ್ ಶೆಟ್ಟಿ ಕಾರಿನಿಂದ ರಿವಾಲ್ವರ್ ಹೊರ ತೆಗೆದಾಗ ಸೂರಜ್ ಸಾಲ್ಯಾನ್ ಹಾಗೂ ಶರತ್ ಶೆಟ್ಟಿ ಓಡಲು ಮುಂದಾಗಿದ್ದಾರೆ. ಬಳಿಕ ಸಚಿನ್ ತೀವ್ರತರ ಗಾಯಗೊಂಡಿದ್ದ ಅವರೀರ್ವರನ್ನೂ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರತಿದೂರು: ಸಂದೇಶ್ ಶೆಟ್ಟಿ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಣಿಪಾಲದಿಂದ ಹಿಂದಿರುಗುತ್ತಿದ್ದ ವೇಳೆ ತಡರಾತ್ರಿಯಲ್ಲಿ ಆರೋಪಿಗಳಾದ ಸೂರಜ್, ತನುಜ್, ಶರತ್ ಶೆಟ್ಟಿ, ಸಚಿನ್ ಶೆಟ್ಟಿ, ನಿರಂಜನ್ ಅವರು ಕಾರಿನ ಕಿಟಕಿ ಗಾಜನ್ನು ಕೆಳಗಿಳಿಸಿ ಸಂದೇಶ್ ಶೆಟ್ಟಿ ಹಾಗೂ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಸಂದೇಶ್ ಶೆಟ್ಟಿ, ಶರತ್ ಭಂಡಾರಿ, ನಿಶಾನ್ ವಿಘ್ನೇಶ್ ಮತ್ತು ಗೋಕುಲ್ ಅವರಿಗೂ ಚೂರಿಯಿಂದ ಇರಿದ ಗಾಯಗಳಾಗಿದ್ದು ಆರೋಪಿಗಳು ಜೀವ ಬೆದರಿಕೆ ಒಡ್ಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಾಳುಗಳು ಉಡುಪಿ ಸರಕಾರಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಕರಣವನ್ನು ದಾಖಲಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.