Movie Review: ‘ಓ ಮನಸೇ’ ಭಾವನೆಗಳ ಮೇಲಿನ ಪಯಣ


Team Udayavani, Jul 15, 2023, 3:00 PM IST

o manase kannada movie review

ಸದಾ ಲವಲವಿಕೆಯಿಂದ ಇರುವ ಹುಡುಗಿಯೊಬ್ಬಳು ಇದ್ದಕ್ಕಿದ್ದಂತೆ ಸಾವಿಗೀಡಾಗುತ್ತಾಳೆ. ಆಕೆಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನದಿಂದ ಸಾವಿನ ತನಿಖೆಗೆ ಇಳಿಯುವ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ನಿಧಾನವಾಗಿ ಅದರ ಹಿಂದಿನ ನಿಗೂಢ ಸತ್ಯದ ದರ್ಶನವಾಗುತ್ತದೆ. ಅಲ್ಲಿಯವರೆಗೂ ಪ್ರೀತಿ, ಪ್ರೇಮದ ಟ್ರ್ಯಾಕ್‌ನಲ್ಲಿ ಸಾಗುತ್ತಿದ್ದ ಚಿತ್ರಕಥೆ, ಕ್ರೈಂ-ಥ್ರಿಲ್ಲರ್‌ನತ್ತ ಹೊರಳುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಓ ಮನಸೇ’ ಸಿನಿಮಾದ ಕಥೆಯ ಎಳೆ.

ಸಿನಿಮಾದ ಹೆಸರೇ ಹೇಳುವಂತೆ, “ಓ ಮನಸೇ’ ಮನಸ್ಸಿನ ಸ್ನೇಹ, ಪ್ರೀತಿ, ಅನುಮಾನ, ಅನುಕಂಪ, ಪಶ್ಚಾತ್ತಾಪ ಹೀಗೆ ಎಲ್ಲದರ ಚಿತ್ರಣವಿರುವ ಚಿತ್ರ. ಅದೆಲ್ಲವನ್ನು ಹಿಡಿದು ಲವ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶರು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಚಿತ್ರಕಥೆ, ನಿರೂಪಣೆ ಮತ್ತು ಕೆಲವೆಡೆ ಅತಿಯೆನಿಸುವ ಪಾತ್ರಗಳು ಪ್ರೇಕ್ಷಕರ ಮನಮುಟ್ಟುವ ಸರಾಗ ಅವಕಾಶಕ್ಕೆ ಅಲ್ಲಲ್ಲಿ ಬ್ರೇಕ್‌ ಹಾಕುವಂತಿದೆ. ಅದನ್ನು ಹೊರತುಪಡಿಸಿದರೆ, ಸುಂದರ ಲೊಕೇಶನ್‌ಗಳು, ಮೆಲೋಡಿ ಹಾಡುಗಳು ಮನಸ್ಸಿಗೆ ಮುದ ನೀಡಿ ನೋಡುಗರನ್ನು ಹಾಗೆಯೇ ಮುಂದಕ್ಕೆ ಕರೆದುಕೊಂಡು ಹೋಗುತ್ತವೆ.

ಇನ್ನು ನಟ ವಿಜಯ ರಾಘವೇಂದ್ರ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಮತ್ತು ಪ್ರೇಮಿಯಾಗಿ ಎರಡು ಶೇಡ್‌ನ‌ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ನಟ ಧರ್ಮ ಕೀರ್ತಿರಾಜ್‌ ಕೂಡ ಎರಡು ಶೇಡ್‌ನ‌ ಪಾತ್ರಗಳನ್ನು ನಿಭಾಯಿಸಿದ್ದಾರೆ. ನಾಯಕಿ ಸಂಚಿತಾ ಪಡುಕೋಣೆ ಹೋಮ್ಲಿಲುಕ್‌ನಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ಸಾಧುಕೋಕಿಲ, ಶೋಭರಾಜ್‌, ಹರೀಶ್‌ ರಾಯ್‌, ಚಿಕ್ಕಹೆಜ್ಜಾಜಿ ಮಹಾದೇವ್‌, ಜಯರಾಮ್‌, ಗಣೇಶ್‌ರಾವ್‌ ಕೇಸರ್ಕರ್‌ ಹೀಗೆ ಬೃಹತ್‌ ಕಲಾವಿದರ ದಂಡೇ ಸಿನಿಮಾದಲ್ಲಿದ್ದು, ಬಹುತೇಕರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ ಮತ್ತು ಸಂಗೀತ ಹೈಲೈಟ್ಸ್‌ ಎನ್ನಬಹುದು. ಕೊಡಗಿನ ಹಸಿರು, ಕಡಲತೀರ, ಬ್ಯಾಂಕಾಕ್‌ ಎಲ್ಲದರ ಚಿತ್ರಣ “ಓ ಮನಸೇ’ ದೃಶ್ಯಗಳನ್ನು ಶ್ರೀಮಂತವಾಗಿ ಕಾಣುವಂತೆ ಮಾಡಿದೆ. ಜೆಸ್ಸಿಗಿಫ್ಟ್ ಸಂಗೀತ ಸಂಯೋಜನೆಯ ಹಾಡುಗಳು ಅಲ್ಲಲ್ಲಿ ಗುನುಗುವಂತೆ ಮಾಡುತ್ತದೆ. ಸ್ನೇಹ, ಪ್ರೀತಿ-ಪ್ರೇಮದ ಜೊತೆಗೆ ಕ್ರೈಂ-ಥ್ರಿಲ್ಲರ್‌ ಶೈಲಿಯನ್ನು ಬಯಸುವವರು ಒಮ್ಮೆ “ಓ ಮನಸೇ’ ಸಿನಿಮಾ ನೋಡಲು ಮನಸ್ಸು ಮಾಡಲು ಅಡ್ಡಿಯಿಲ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Love Reddy Movie Review

Love Reddy Movie Review: ಕಾಡುವ ಪ್ರೀತಿ ಹೊಸ ರೀತಿ

Tenant Movie Review

Tenant Movie Review: ಅಕ್ರಮ-ಸಕ್ರಮದಲ್ಲೊಂದು ಸಂಗ್ರಾಮ!

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.