ಮಹಾಲಿಂಗಪುರ: ಅಮರನಾಥ ಯಾತ್ರಿಕರಿಗೆ ತಾಯ್ನಾಡಿನಲ್ಲಿ ಭವ್ಯ ಸ್ವಾಗತ
Team Udayavani, Jul 15, 2023, 7:55 PM IST
ಮಹಾಲಿಂಗಪುರ : ಇದೇ ಜುಲೈ 3 ರಂದುಮಹಾಲಿಂಗಪುರ ದಿಂದ ಇದೇ ಪ್ರಥಮ ಬಾರಿಗೆ ಅಮರನಾಥ ಯಾತ್ರೆಗೆ ತೆರಳಿದ್ದ ಪಟ್ಟಣದ 6 ಜನ ಯಾತ್ರಿಕರು ಯಶಸ್ವಿಯಾಗಿ ಯಾತ್ರೆಯನ್ನು ಮುಗಿಸಿಕೊಂಡು ಸುರಕ್ಷಿತವಾಗಿ ಮರಳಿದ್ದಾರೆ.
ಶನಿವಾರ ಮಹಾಲಿಂಗಪುರಕ್ಕೆ ಬಂದ ಯಾತ್ರಿಕರನ್ನು ಅವರ ಗೆಳೆಯರ ಬಳಗದವರು ಬಸ್ ನಿಲ್ದಾಣದಲ್ಲಿ ಹೂಮಾಲೆ ಹಾಕಿ , ಸಿಹಿತಿನ್ನಿಸಿ ಭವ್ಯವಾಗಿ ಸ್ವಾಗತ ಕೋರಿದರು. ಮಹಾಲಿಂಗಪುರದ ಮಲ್ಲಪ್ಪ ಭಾವಿಕಟ್ಟಿ, ಬಸವರಾಜ ಬಂಡಿವಡ್ಡರ, ಸಂಜು ಜಮಖಂಡಿ, ಶಂಕರ ಪಾತ್ರೋಟ, ಬೆಳಗಾವಿ ಹತ್ತಿರದ ಸುಳೆಭಾಂವಿಯ ಮಹಾಲಿಂಗ ನೀಲನ್ನವರ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯೋಧ ಮಹಾದೇವಪ್ಪ ತಳ್ಳಿ ಸೇರಿದಂತೆ ಒಟ್ಟು 6 ಜನರು ಜುಲೈ 3 ರಂದು ಸಂಜೆ ಕುಡಚಿಯಿಂದ ರೈಲ್ವೆ ಮೂಲಕ ಮುಂಬೈಗೆ ತೆರಳಿ, ಜುಲೈ 5 ರಂದು ಮುಂಬೈಯಿಂದ ಜಮ್ಮು ಕಾಶ್ಮೀರದ ಶ್ರೀನಗರವರೆಗೆ ವಿಮಾನ ಮೂಲಕ ಅಮರನಾಥ ಯಾತ್ರೆಗೆ ತೆರಳಿದ್ದರು.
ಭಾರಿ ಮಳೆ ಮತ್ತು ಅಮರನಾಥ ಯಾತ್ರೆಯ ಮಾರ್ಗ ಮಧ್ಯೆ ಭೂಕುಸಿತ ಹಿನ್ನೆಲೆಯಲ್ಲಿ ಮೂರು ದಿನ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಮರನಾಥ ಯಾತ್ರೆಯ ಮಧ್ಯದಲ್ಲಿರುವ ಡೊಮಾಲ್ ದ ವಿಶಾಲ ಭಂಡಾರ ಶಿವ ಆಶ್ರಯದಲ್ಲಿ 3 ದಿನ ವಾಸ್ತವ್ಯ ಇದ್ದರು. ಜುಲೈ 10 ರಂದು ಅಮರನಾಥ ದರ್ಶನ ಪಡೆದು ಜುಲೈ 11 ರಂದು ಸಂಜೆ ಶ್ರೀನಗರ ವಿಮಾನ ನಿಲ್ದಾಣಕ್ಕೆ ಮರಳಿ ಬಂದಿದ್ದರು. ಮಳೆ ಮತ್ತು ಭೂಕುಸಿತ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ದರ್ಶನ ಇಲ್ಲದೇ, ಇನ್ನು ಸಾವಿರಾರು ಜನರು ದರ್ಶನ ಪಡೆದು ಏಕಕಾಲಕ್ಕೆ ಶ್ರೀನಗರಕ್ಕೆ ವಾಪಸ ಆದ ಕಾರಣ ಸಕಾಲದಲ್ಲಿ ವಿಮಾನ ಟಿಕೆಟ್ ಸಿಗದೇ ಜುಲೈ 11 ರಿಂದ 14 ರ ಮಧ್ಯಾಹ್ನದವರೆಗೂ ಶ್ರೀನಗರದಲ್ಲಿದ್ದು, 14 ರಂದು ಮಧ್ಯಾಹ್ನ ಶ್ರೀನಗರದಿಂದ ವಿಮಾನ ಮೂಲಕ ಮುಂಬೈಗೆ ಬಂದು, ಮುಂಬೈನಿಂದ ಬಸ್ ಮೂಲಕ ಮಹಾಲಿಂಗಪುರಕ್ಕೆ ಬಂದೆವು.
ಭಗವಂತನ ಕೃಪೆಯಿಂದ ಯಾವುದೇ ತೊಂದರೆ ಇಲ್ಲದೇ ಅಮರನಾಥ ಯಾತ್ರೆ ಮುಗಿಸಿ ತಾಯ್ನಾಡಿಗೆ ಬಂದಿದ್ದೇವೆ ಎಂದು ಯಾತ್ರೀಕರು ತಮ್ಮ ಯಾತ್ರಾ ಅನುಭವ ಹಂಚಿಕೊಂಡರು. ಮಹಾದೇವ ಹುಣಶ್ಯಾಳ, ಅಶೋಕ ಬಾಣಕಾರ, ಸುನೀಲ ಜಮಖಂಡಿ, ಶ್ರೀಶೈಲ ಕಿರಗಟಗಿ, ವಿನೋದ ಚಮಕೇರಿ, ಪ್ರಕಾಶ ಬಾಡನವರ, ಚಂದು ಕಾಗಿ, ಬಸವರಾಜ ಹುಲ್ಯಾಳ, ಮಹಾಲಿಂಗ ಹಾವನಳ್ಳಿ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.