2.31 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ
Team Udayavani, Jul 16, 2023, 10:21 AM IST
ಬೆಂಗಳೂರು: ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು 2.31 ಕೋಟಿ ರೂ. ಮೌಲ್ಯದ 3.78 ಕೆ.ಜಿ. ತೂಕದ ಚಿನ್ನಾಭರಣ ವಿದ್ದ ಬ್ಯಾಗ್ ದೋಚಿ ಪರಾರಿಯಾಗಿರುವ ಘಟನೆ ಮೈಸೂರು ರಸ್ತೆಯ ಮೇಲು ಸೇತುವೆ ಬಳಿ ನಡೆದಿದೆ. ಈ ಸಂಬಂಧ ನಗರತ್ ಪೇಟೆಯ ಕೇಸರ್ ಜ್ಯೂವೆ ಲ್ಲರಿ ಶಾಪ್ ಮಾಲೀಕ ರಾಜ್ ಜೈನ್ ಎಂಬವರು ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಿನ್ನಿಪೇಟೆಯ ಶಾಪ್ರೋರ್ಜಿ ಪೊಲೊಂಜಿ ಪಾರ್ಕ್ ವೆಸ್ಟ್ ಅಪಾರ್ಟ್‌ಮೆಂಟ್ ನಿವಾಸಿ ಹಾಗೂ ಚಿನ್ನದ ವ್ಯಾಪಾರಿ ರಾಜ್ ಜೈನ್ ನಗರತ್ ಪೇಟೆ ಮುಖ್ಯರಸ್ತೆಯ ರಮೇಶ್ ಧನಲಕ್ಷ್ಮೀ ಮಾರುಕಟ್ಟೆಯಲ್ಲಿ ಕೇಸರ್ ಜ್ಯೂವೆಲ್ಲರಿ ಶಾಪ್ ನಡೆಸುತ್ತಿದ್ದಾರೆ. ಜು. 12ರಂದು ಚಿನ್ನಾಭರಣದ ವ್ಯಾಪಾರ ವಹಿವಾಟು ಮುಗಿಸಿ ಸಂಜೆ 7.30ರ ಸುಮಾರಿನಲ್ಲಿ 3.78 ಕೆ.ಜಿ ತೂಕದ ಚಿನ್ನಾಭರಣವನ್ನು ಎರಡು ಬ್ಯಾಗ್‌ಗಳಲ್ಲಿ ತುಂಬಲಾಗಿತ್ತು. ಆ ಬ್ಯಾಗ್‌ಗಳನ್ನು ಅವರ ಅಕ್ಕನ ಮಗ ಆದಿತ್ಯ ಚೌಪದ ಮತ್ತು ಮನನ್ ಎಂಬವರು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರನ್ನು ಮತ್ತೂಂದು ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ದುಷ್ಕರ್ಮಿಗಳು ಮೈಸೂರು ರಸ್ತೆ ಮೇಲು ಸೇತುವೆ ಬಳಿ ಅಡ್ಡಗಟ್ಟಿದ್ದಾರೆ.
ಬಳಿಕ ಆದಿತ್ಯ ಮತ್ತು ಮನನ್ ನನ್ನು ಬೈಕ್‌ನಿಂದ ಕೆಳಗೆ ತಳ್ಳಿ, ಅವರ ಬಳಿಯಿದ್ದ ಎರಡು ಬ್ಯಾಗ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಸಮೀಪದ ಸಿಸಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ವ್ಯಾಪಾರಸ್ಥರಿಗೆ ಪರಿಚಿತರೇ ಕೃತ್ಯ ಎಸಗಿರುವ ಸಾಧ್ಯತೆಯಿದೆ ಅಥವಾ ರಾಜ್‌ಜೈನ್‌ರ ವ್ಯಾಪಾರ- ವಹಿವಾಟು ತಿಳಿದಿರುವವರೇ ದೋಚಿರಬಹುದು. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ಮತ್ತೂಂದೆಡೆ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಕ್ಕೆ ಬೀಲ್ ಇದೆಯೇ? ಇಲ್ಲವೇ? ಅಥವಾ ಯಾವ ಆಧಾರದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನಾಭರಣ ಕೊಂಡೊಯ್ಯುತ್ತಿದ್ದರು ಎಂಬ ತನಿಖೆ ಪ್ರಾರಂಭವಾಗಿದ್ದು, ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.