ಹೆದ್ದಾರಿ ಟೋಲ್‌ ಸಂಗ್ರಹ ಖಂಡಿಸಿ ಪ್ರತಿಭಟನೆ

Team Udayavani, Jul 16, 2023, 3:20 PM IST

ಹೆದ್ದಾರಿ ಟೋಲ್‌ ಸಂಗ್ರಹ ಖಂಡಿಸಿ ಪ್ರತಿಭಟನೆ

ರಾಮನಗರ: ಬೆಂ-ಮೈ ದಶಪಥ ಹೆದ್ದಾರಿಯ ಅಪೂರ್ಣ ಕಾಮಗಾರಿಗೆ ದುಬಾರಿ ಟೋಲ್‌ ಸಂಗ್ರಹಣೆ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿ ಕಾರದ ಕ್ರಮವನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಹೋರಾಟಗಾರರು ಕಣಿ ಮಿಣಿಕೆ ಟೋಲ್‌ಪ್ಲಾಜಾ ಬಳಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಯಿತು.

ಕರವೇ ಸ್ವಾಭಿಮಾನಿ ಬಣದ ವತಿಯಿಂದ ಹಮ್ಮಿ ಕೊಂಡಿದ್ದ ಪ್ರತಿಭಟಣೆಯಲ್ಲಿ ಟೋಲ್‌ ದರ ಸಂಗ್ರ ಹಿಸುತ್ತಿರುವ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕನ್ನಡಪರ ಕಾರ್ಯ ಕರ್ತರು, ಕಾಮಗಾರಿಯನ್ನು ಪೂರ್ಣ ಗೊಳಿಸುವುದಕ್ಕೆ ಮುನ್ನಾ ಟೋಲ್‌ ಶುಲ್ಕವನ್ನು ಸಂಗ್ರಹಿಸಲಾಗುತ್ತಿರುವುದು ಅನ್ಯಾಯ. ಕೂಡಲೇ ಟೋಲ್‌ ಸಂಗ್ರಹವನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರು-ಮೈಸೂರು ಮಹಾನಗರಗಳ ನಡುವೆ ಸುಗಮ ಸಂಚಾರ ಕಲ್ಪಿ ಸುವ ಉದ್ದೇಶದಿಂದ ದಶಪಥ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಹೆದ್ದಾ ರಿಗೆ ನಿರ್ಮಾಣ ಕಾಮಗಾರಿಗೆ ಸ್ಥಳೀಯರ ಭೂಮಿಯನ್ನು ನೀಡಲಾಗಿದೆ. ಸಾರ್ವ ಜನಿಕ ತೆರಿಗೆ ಹಣದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಇನ್ನೂ ಸಂಪೂರ್ಣಗೊಂಡಿಲ್ಲ. ಸರ್ವೀಸ್‌ ರಸ್ತೆ ಕಾಮಗಾರಿ ಅಪೂರ್ಣಗೊಂಡಿದೆ. ಇದ ರಿಂದಾಗಿ ಟೋಲ್‌ ಸಂಗ್ರಹಣೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂಲ ಸೌಕರ್ಯ ಕಲ್ಪಿಸಿ: ಹೆದ್ದಾರಿ ಕಾಮಗಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದ್ದು, ಇದರಿಂದಾಗಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ, ನೂರಾರು ಜೀವಗಳು ಬಲಿಯಾಗಿದ್ದು, ಇದರ ಬಗ್ಗೆ ಬೇಜವಾಬ್ದಾರಿಯಿಂದ ಪ್ರಾಧಿಕಾರ ವರ್ತಿಸುತ್ತಿದೆ. ಹೆದ್ದಾರಿಯಲ್ಲಿನ ಅವೈಜ್ಞಾನಿಕ ಅಂಶಗಳನ್ನು ಸರಿಪಡಿಸದ ಹೊರತು ಟೋಲ್‌ ಸಂಗ್ರಹಣೆ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯಲ್ಲಿರುವ ಸರ್ವಿಸ್‌ ರಸ್ತೆ ಗುಣಮಟ್ಟದಿಂದ ನಿರ್ಮಿಸದ ಕಾರಣ ಮೂರೇ ತಿಂಗಳಿಗೆ ಅಲ್ಲಲ್ಲಿ ಕಿತ್ತು ಬಂದಿದೆ. ಸರ್ವಿಸ್‌ ರಸ್ತೆಯಲ್ಲಿ ಬಸ್‌ ತಂಗುದಾಣಗಳನ್ನು ಸ್ಥಾಪಿಸಿಲ್ಲ. ಪ್ರಯಾಣಿಕರಿಗೆ ಆ್ಯಂಬುಲೆನ್ಸ್‌ ಹಾಗೂ ಪ್ರಥಮ ಚಿಕಿತ್ಸೆ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಹೆದ್ದಾರಿ ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಹೋಟೆಲ್‌ ಮತ್ತು ವಿಶ್ರಾಂತಿ ಗೃಹ ನಿರ್ಮಿಸಿಲ್ಲ. ಈ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಿ ತದನಂತರ ಶುಲ್ಕ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಹೆದ್ದಾರಿಯ ಎರಡೂ ಬದಿಯ ಸರ್ವೀಸ್‌ ರಸ್ತೆಯನ್ನು ದುರಸ್ತಿಪಡಿಸಬೇಕು. ರೈತರು, ಮಾಧ್ಯಮದವರು ಮತ್ತು ಹೋರಾಟಗಾರರಿಗೆ ಎಲ್ಲಾ ಟೋಲ್‌ ಪ್ಲಾಜಾ ಗಳಲ್ಲಿ ಉಚಿತ ಪ್ರವೇಶಕ್ಕೆ ಅನುಮತಿ ಕೊಡಬೇಕು. ದುಬಾರಿ ಟೋಲ್‌ ಸಂಗ್ರಹವನ್ನು ಕೈ ಬಿಡಬೇಕು. ಸರ್ಕಾರ ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ತಪ್ಪಿದರೆ ಮುಂದಿನ ದಿನಗಳಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇದೇ ವೇಳೆ ಹೈವೇ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಪ್ರತಿಭಟನಾ ಕಾರರು ಮನವಿ ಪತ್ರವನ್ನು ಸಲ್ಲಿಸಿದರು. ನಂತರ ಹೋರಾಟಗಾರರು ಟೋಲ್‌ ಸಂಗ್ರಹವನ್ನು ತಡೆಯಲು ಮುಂದಾದಾಗ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪ್ರಮುಖರನ್ನು ಬಂಧಿಸಿ ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ನಿಂಗರಾಜಗೌಡ, ಜಿಲ್ಲಾಧ್ಯಕ್ಷ ಸುಜ್ಞಾನಮೂರ್ತಿ, ರಾಜ್ಯ ಉಪಾಧ್ಯಕ್ಷ ಸುರೇಶ್‌ ಗೌಡ್ರು, ಖಜಾಂಚಿ ಶ್ರೀಧರ್‌, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣಮ್ಮ ದಾವಣಗೆರೆ ಇದ್ದರು.

ಟಾಪ್ ನ್ಯೂಸ್

Gundlupete: ಅಪರಿಚಿತ ವಾಹನ‌ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…

Gundlupete: ಅಪರಿಚಿತ ವಾಹನ‌ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…

Zim vs Ind: ಕನಿಷ್ಠ ಮೊತ್ತ ಗರಿಷ್ಠ ಒತ್ತಡ; ಯುವ ಭಾರತಕ್ಕೆ ಶಾಕ್‌ ಕೊಟ್ಟ ಜಿಂಬಾಬ್ಬೆ

Zim vs Ind: ಕನಿಷ್ಠ ಮೊತ್ತ ಗರಿಷ್ಠ ಒತ್ತಡ; ಯುವ ಭಾರತಕ್ಕೆ ಶಾಕ್‌ ಕೊಟ್ಟ ಜಿಂಬಾಬ್ಬೆ

Pune: ಮದ್ಯದ ಮತ್ತಲ್ಲಿ ಪೊಲೀಸರಿಗೇ ಬೆಂಕಿ ಹಚ್ಚಲು ಯತ್ನಿಸಿದಾನ ಸೆರೆ

Pune: ಮದ್ಯದ ಮತ್ತಲ್ಲಿ ಪೊಲೀಸರಿಗೇ ಬೆಂಕಿ ಹಚ್ಚಲು ಯತ್ನಿಸಿದಾನ ಸೆರೆ

Building Collapses: ಕುಸಿದ 6 ಅಂತಸ್ಥಿನ ಕಟ್ಟಡ… 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

Surath: ಕುಸಿದ 6 ಅಂತಸ್ತಿನ ಕಟ್ಟಡ… ಓರ್ವ ಮಹಿಳೆ ರಕ್ಷಣೆ, ಹಲವರು ಸಿಲುಕಿರುವ ಶಂಕೆ

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

1-rewewewe

Monsoon season: ದಕ್ಷಿಣ ಕನ್ನಡದಲ್ಲಿ ಜಲ ಚಟುವಟಿಕೆಗಳು, ಚಾರಣಕ್ಕೆ ನಿಷೇಧ

ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್‌,ದುಬಾರಿ ಕಾರು; ಈತ ಶ್ರೀಮಂತ ಕಳ್ಳ

ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್‌,ದುಬಾರಿ ಕಾರು; ಈತ ಶ್ರೀಮಂತ ಕಳ್ಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna Bypoll; I am the candidate of alliance party…: What did CP Yogeshwar say?

Channapatna Bypoll; ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ…: ಸಿ.ಪಿ ಯೋಗೇಶ್ವರ್ ಹೇಳಿದ್ದೇನು?

Magadi; A bear attacked a man on his way to the farm

Magadi; ಜಮೀನಿಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ; ಗಂಭೀರ ಗಾಯ

DK-Shivakumar

Chennapattana ನನ್ನ ನಾಯಕತ್ವದಲ್ಲೇ ಬೆಂಗಳೂರಿಗೆ ಸೇರಲಿದೆ: ಡಿಕೆಶಿ

JDS-BJP ನಾಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಹೆಸರು ಅಖೈರು?

JDS-BJP ನಾಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಹೆಸರು ಅಖೈರು?

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Gundlupete: ಅಪರಿಚಿತ ವಾಹನ‌ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…

Gundlupete: ಅಪರಿಚಿತ ವಾಹನ‌ ಡಿಕ್ಕಿ ಹೊಡೆದು ಇಬ್ಬರ ಮೃತ್ಯು…

Zim vs Ind: ಕನಿಷ್ಠ ಮೊತ್ತ ಗರಿಷ್ಠ ಒತ್ತಡ; ಯುವ ಭಾರತಕ್ಕೆ ಶಾಕ್‌ ಕೊಟ್ಟ ಜಿಂಬಾಬ್ಬೆ

Zim vs Ind: ಕನಿಷ್ಠ ಮೊತ್ತ ಗರಿಷ್ಠ ಒತ್ತಡ; ಯುವ ಭಾರತಕ್ಕೆ ಶಾಕ್‌ ಕೊಟ್ಟ ಜಿಂಬಾಬ್ಬೆ

Pune: ಮದ್ಯದ ಮತ್ತಲ್ಲಿ ಪೊಲೀಸರಿಗೇ ಬೆಂಕಿ ಹಚ್ಚಲು ಯತ್ನಿಸಿದಾನ ಸೆರೆ

Pune: ಮದ್ಯದ ಮತ್ತಲ್ಲಿ ಪೊಲೀಸರಿಗೇ ಬೆಂಕಿ ಹಚ್ಚಲು ಯತ್ನಿಸಿದಾನ ಸೆರೆ

Building Collapses: ಕುಸಿದ 6 ಅಂತಸ್ಥಿನ ಕಟ್ಟಡ… 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

Surath: ಕುಸಿದ 6 ಅಂತಸ್ತಿನ ಕಟ್ಟಡ… ಓರ್ವ ಮಹಿಳೆ ರಕ್ಷಣೆ, ಹಲವರು ಸಿಲುಕಿರುವ ಶಂಕೆ

Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ

Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.