ಗೊರಕೆ: ಒಂದು ಕಿರಿಕಿರಿ ಮಾತ್ರವೇ ಅಥವಾ ಗಂಭೀರ ಆರೋಗ್ಯ ಸಮಸ್ಯೆಯೇ?


Team Udayavani, Jul 16, 2023, 3:53 PM IST

7-snoring

“ನೀವು ನಕ್ಕರೆ ಇಡೀ ಜಗತ್ತೇ ನಿಮ್ಮ ಜತೆಗೆ ನಗುತ್ತದೆ; ಗೊರಕೆ ಹೊಡೆಯುವಿರಾದರೆ ನೀವು ಏಕಾಂಗಿಯಾಗಿ ಮಲಗಬೇಕು’ ಎಂಬ ಒಂದು ಉಕ್ತಿ ಇದೆ.

ಗೊರಕೆ ಹೊಡೆಯುವವನ ಜತೆಗೆ ವಾಸಿಸುವವರು ಎಷ್ಟು ಕಿರಿಕಿರಿ ಅನುಭವಿಸಬೇಕಾಗುತ್ತದೆ ಎಂಬುದನ್ನು ವರ್ಣಿಸಲು ಈ ಉಕ್ತಿ ಸಶಕ್ತವಾಗಿದೆ. ಪ್ರತೀ ಮನೆಯಲ್ಲಿಯೂ ಗೊರಕೆ ಸರ್ವೇಸಾಮಾನ್ಯ, ನಿಮ್ಮ ಗೊರಕೆಯನ್ನು ಕೇಳುವುದು ಇತರರಿಗೆ ಕಿರಿಕಿರಿ ಎಂದಷ್ಟೇ ಅಲ್ಲ; ಜತೆಗೆ ಅದು ನಿಮ್ಮ ಆರೋಗ್ಯಕ್ಕೂ ಅದು ಹಾನಿಕಾರಕವಾಗಬಹುದು.

ಸಾಮಾನ್ಯವಾಗಿ ಗೊರಕೆ ಹೊಡೆಯುವ ವ್ಯಕ್ತಿ ಹಲವಾರು ಕಾರಣಗಳಿಂದಾಗಿ ತಾನು ಗೊರಕೆ ಹೊಡೆಯುವುದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಗೊರಕೆಯು ನಿದ್ದೆಗೆ ಸಂಬಂಧಿಸಿದ ತೊಂದರೆಗಳ ಜತೆಗೆ ಸಂಬಂಧ ಹೊಂದಿರಬಹುದು ಮತ್ತು ಅದಕ್ಕೆ ವೈದ್ಯಕೀಯ ಆರೈಕೆ ಅಗತ್ಯವಾಗಿರಬಹುದು.

ವಯಸ್ಕರಿರಲಿ, ಮಕ್ಕಳಿರಲಿ- ಯಾವಾಗಾದರೊಮ್ಮೆ ಗೊರಕೆ ಹೊಡೆದೇ ಇರುತ್ತಾರೆ. ಗೊರಕೆಯು ತೀವ್ರವಾಗಿದ್ದು, ನಿದ್ದೆಗೆ ತೊಂದರೆ ಮಾಡುತ್ತದೆಯಾಗಿದ್ದರೆ ಅದು ನಿದ್ದೆಯ ಸಂದರ್ಭ ಅಸಹಜ ಉಸಿರಾಟದ ಸೂಚನೆಯಾಗಿರಬಹುದು.

ನಿದ್ದೆಯ ಸಂದರ್ಭ ಅಸಹಜ ಉಸಿರಾಟದ ಗಂಭೀರತೆಯಲ್ಲಿ ಒಂದು ಮಾತ್ರವೇ ಅಥವಾ ಗಂಭೀರ ಆರೋಗ್ಯ ಗೊರಕೆ ಹೆಚ್ಚು-ಕಡಿಮೆ ಇರಬಹುದಾಗಿದೆ. ಕೆಲವರಿಗೆ ಗೊರಕೆ ಇದ್ದರೂ ನಿದ್ದೆಗೆ ಅದು ತೊಂದರೆ ಉಂಟುಮಾಡದ ಕಾರಣ ತಾವು ಗೊರಕೆ ಹೊಡೆಯುವುದೇ ಅವರಿಗೆ ತಿಳಿದಿರಲಾರದು.

ಕೆಲವರಲ್ಲಿ ಕಂಡುಬರುವ ತೀವ್ರ ಗೊರಕೆಯು “ಸ್ಲೀಪ್‌ ಆ್ಯಪ್ನಿಯಾ’ ಎಂಬ ನಿದ್ದೆಗೆ ಸಂಬಂಧಿಸಿದ ಉಸಿರಾಟ ಸಮಸ್ಯೆಯ ಸೂಚನೆಯಾಗಿರಬಹುದು. ಸ್ಲೀಪ್‌ ಆಪ್ನಿಯಾದಿಂದ ವ್ಯಕ್ತಿ ನಿದ್ದೆಯಲ್ಲಿ ಬೆಚ್ಚಿಬೀಳುತ್ತಾರೆ ಅಥವಾ ಉಸಿರಾಟಕ್ಕೆ ಕಷ್ಟಪಡುತ್ತಾರೆ.

ಗೊರಕೆ ಹೊಡೆಯುವಾಗ ಏನಾಗುತ್ತದೆ?

ವ್ಯಕ್ತಿಯು ನಿದ್ದೆ ಮಾಡುತ್ತಿರುವಾಗ, ಸಾಮಾನ್ಯವಾಗಿ ಉಸಿರನ್ನು ಒಳಕ್ಕೆ ಎಳೆದುಕೊಳ್ಳುವಾಗ ಉಸಿರಾಟ ವ್ಯೂಹದಲ್ಲಿ ಉಸಿರುವ ಮುಕ್ತವಾಗಿ ಸಂಚರಿಸಲು ಸಾಧ್ಯವಾಗದೆ ಇದ್ದಾಗ ಗೊರಕೆ ಉಂಟಾಗುತ್ತದೆ. ನಿದ್ದೆ ಮಾಡುತ್ತಿರುವಾಗ ನಮ್ಮ ಉಸಿರಾಟ ವ್ಯೂಹದ ಸ್ನಾಯುಗಳು ವಿಶ್ರಮಿಸುತ್ತವೆ; ಇದರಿಂದಾಗಿ ಉಸಿರಿನ ಮಾರ್ಗ ಕೊಂಚ ಸಂಕುಚನಗೊಳ್ಳುತ್ತದೆ.

ಉಸಿರಾಡುವಾಗ ಗಾಳಿಯು ನಾಲಗೆ, ಮೃದುವಾದ ಗಂಟಲಿನ ಮೇಲ್ಭಾಗ (ಅಂಗುಳ) ಮತ್ತು ಕಿರಿದಾದ ಉಸಿರಾಟ ಮಾರ್ಗದ ಮೂಲಕ ಸಂಚರಿಸುವ ಸಂದರ್ಭದಲ್ಲಿ ಕಂಪನವನ್ನು ಉಂಟು ಮಾಡುತ್ತದೆ; ಇದರಿಂದಾಗಿ ಸದ್ದು ಉಂಟಾಗುತ್ತದೆ. ಕೆಲವೊಮ್ಮೆ ನಿದ್ದೆಯಲ್ಲಿದ್ದಾಗ ಉಸಿರಾಟವು 10 ಸೆಕೆಂಡ್‌ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿಂತು ಇದರಿಂದಾಗಿ ವ್ಯಕ್ತಿಯು ಉಸಿಗಾಗಿ ಕಷ್ಟಪಡಬೇಕಾಗುತ್ತದೆ. ಇದು ಸ್ಲೀಪ್‌ ಅಪ್ನಿಯಾದ ಲಕ್ಷಣವಾಗಿದ್ದು, ಚಿಕಿತ್ಸೆ ಒದಗಿಸದೆ ಇದ್ದಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟು ಮಾಡಬಲ್ಲುದು.

ದೇಹದ ಸಹಜ ಕಾರ್ಯಚಟುವಟಿಕೆಗಳಿಗೆ ಉತ್ತಮ ಗುಣಮಟ್ಟದ ನಿದ್ದೆ ಅತ್ಯವಶ್ಯವಾಗಿದೆ. ಆದರೆ ಗೊರಕೆ ಮತ್ತು ಸ್ಲೀಪ್‌ ಅಪ್ನಿಯಾಗಳಿಂದಾಗಿ ನಿದ್ದೆಯಿಂದ ಸೂಕ್ಷ್ಮ ಎಚ್ಚರವಾಗುವಿಕೆ (ಮೈಕ್ರೊ ಅರೌಸಲ್‌), ತುಣುಕು ತುಣುಕಾದ ನಿದ್ದೆ (ಸ್ಲೀಪ್‌ ಫ್ರಾಗ್ಮೆಂಟೇಶನ್‌) ಉಂಟಾಗುತ್ತವೆ; ಇವುಗಳಿಂದಾಗಿ ನಿದ್ದೆಯ ಗುಣಮಟ್ಟ ಕೆಡುವುದಷ್ಟೇ ಅಲ್ಲದೆ ಹಗಲಿನಲ್ಲಿ ನಿದ್ದೆ ತೂಗುವಿಕೆಗೆ ಕಾರಣವಾಗುತ್ತದೆ.

ಬೆಳವಣಿಗೆಯ ಹಾರ್ಮೋನ್‌, ಮೆಲಟಾನಿನ್‌ ಮತ್ತು ಕಾರ್ಟಿಸಾಲ್‌ಗ‌ಳಂತಹ ಅತ್ಯವಶ್ಯಕ ಹಾರ್ಮೋನ್‌ಗಳ ಸ್ರಾವಕ್ಕೆ ಗುಣಮಟ್ಟದ ನಿದ್ದೆ ಅಗತ್ಯವಾಗಿದೆ.

ನಿದ್ದೆಯ ಗುಣಮಟ್ಟ ಕಡಿಮೆಯಾಗಿ ಹಾರ್ಮೋನ್‌ ಕಾರ್ಯಚಟುವಟಿಕೆಗಳಿಗೆ ತೊಂದರೆ ಉಂಟಾದಾಗ ಅದರಿಂದಾಗಿ ಅನಿಯಂತ್ರಿತ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ತೊಂದರೆಗಳು, ಚಯಾಪಚಯ ಕ್ರಿಯೆಯ ಕಾಯಿಲೆಗಳು, ಮನಶಾÏಸ್ತ್ರೀಯ ತೊಂದರೆಗಳು, ಬೇಗನೆ ವಯಸ್ಸಾಗುವಿಕೆ, ಜಡತ್ವ, ಕಿರಿಕಿರಿಗೊಳ್ಳುವ ಪ್ರವೃತ್ತಿ, ಉದ್ಯೋಗದ ಕಳಪೆ ನಿರ್ವಹಣೆ ಮತ್ತು ಒಟ್ಟಾರೆಯಾಗಿ ಜೀವನ ಗುಣಮಟ್ಟ ಕುಸಿತದಂತಹ ಗಂಭೀರ ಸಮಸ್ಯೆಗಳು ಎದುರಾಗುತ್ತವೆ.

ಮಗು ಗೊರಕೆ ಹೊಡೆಯುವುದು ಸಹಜವೇ?

ಮಕ್ಕಳ ಪೈಕಿ ಶೇ. 27ರಷ್ಟು ಮಕ್ಕಳಿಗೆ ಸಣ್ಣ ಪ್ರಮಾಣದಲ್ಲಿ, ಕೆಲವೊಮ್ಮೆ ಗೊರಕೆ ಉಂಟಾಗುತ್ತದೆ. ಇಂತಹ ಲಘು ಸ್ವರೂಪದ, ತಾತ್ಕಾಲಿಕ ಗೊರಕೆಯಿಂದ ಸಾಮಾನ್ಯವಾಗಿ ಆರೋಗ್ಯ ತೊಂದರೆಗಳು ಉಂಟಾಗುವುದಿಲ್ಲ. ಆದರೆ ನಿಯಮಿತವಾಗಿ ಅಥವಾ ತೀವ್ರ ತರಹದ ಗೊರಕೆ ಇದ್ದರೆ ಅದು ನಿದ್ದೆಯ ಸಮಸ್ಯೆಯ ಲಕ್ಷಣವಾಗಿರಬಹುದು ಮತ್ತು ಗಂಭೀರ ಆರೋಗ್ಯ ಪರಿಣಾಮಗಳಿಗೆ ಎಡೆ ಮಾಡಿಕೊಡಬಹುದು.

ಇಂತಹ ಪ್ರಕರಣಗಳಲ್ಲಿ ತೀವ್ರ ಕಳವಳದಾಯಕ ಸಮಸ್ಯೆ “ಒಬ್‌ಸ್ಟ್ರಕ್ಟಿವ್‌ ಸ್ಲೀಪ್‌ ಅಪ್ನಿಯಾ’. ಇದಕ್ಕೂ ಮಿದುಳಿನ ಬೆಳವಣಿಗೆ, ಶೈಕ್ಷಣಿಕ ಕಾರ್ಯ ಸಾಮರ್ಥ್ಯ ಕುಸಿತ, ಅಧಿಕ ರಕ್ತದೊತ್ತಡದಂತಹ ಹೃದಯ-ರಕ್ತನಾಳ ಸಂಬಂಧಿ ತೊಂದರೆಗಳು, ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಮತ್ತು ವರ್ತನಾತ್ಮಕ ಸಮಸ್ಯೆಗಳಿಗೂ ಸಂಬಂಧವಿದೆ.

ಯಾವಾಗ ಕಾಳಜಿ ವಹಿಸಬೇಕು?

ನಿದ್ದೆಯಲ್ಲಿ ತೊಂದರೆಯುಕ್ತ ಉಸಿರಾಟ ಹೊಂದಿರುವ ಮಕ್ಕಳು ಗೊರಕೆ ಹೊಡೆಯುತ್ತಾರೆ ಮತ್ತು ಪದೇಪದೆ ಕಡಿಮೆ ಆಳವಾದ ಉಸಿರಾಟ (ಹೈಪೊಪ್ನಿಯಾ) ನಡೆಸುತ್ತಾರೆ ಮತ್ತು/ಅಥವಾ ನಿದ್ದೆ ಮಾಡಿರುವ ಸಂದರ್ಭದಲ್ಲಿ ತಾತ್ಕಾಲಿಕವಾದ ಸಂಪೂರ್ಣ ಉಸಿರಾಟ ಸ್ಥಗಿತ (ಅಪ್ನಿಯಾ) ಉಂಟಾಗುತ್ತದೆ. ಇಂತಹ ಮಕ್ಕಳು ಉಸಿರಿಗಾಗಿ ಬೆಚ್ಚುವುದು, ಶಾಂತವಲ್ಲದ ನಿದ್ದೆ, ರಾತ್ರಿ ಆಗಾಗ ಎಚ್ಚರಗೊಳ್ಳುವುದು, ಹಲ್ಲು ಕಟೆಯುವುದು, ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಮತ್ತು ಅಸಹಜ ಭಂಗಿಗಳಲ್ಲಿ ನಿದ್ದೆ ಮಾಡುವುದನ್ನು ಹೆತ್ತವರು ಗಮನಿಸಬಹುದು.

ವೈದ್ಯರನ್ನು ಯಾವಾಗ ಕಾಣಬೇಕು?

ಗೊರಕೆಯ ತೊಂದರೆ ಹೊಂದಿರುವ ರೋಗಿಯನ್ನು ತಪಾಸಕ ಪರೀಕ್ಷೆಗಳಿಗೆ ಒಳಪಡಿಸುವ ಪ್ರಧಾನ ಉದ್ದೇಶವೆಂದರೆ ನಿದ್ದೆಗೆ ಸಂಬಂಧಿಸಿದ ಉಸಿರಾಟ ತೊಂದರೆಗಳನ್ನು ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ದೃಢಪಡಿಸುವುದಾಗಿದೆ. ಈ ಕೆಳಗಿನ ಅಪಾಯಾಂಶಗಳನ್ನು ನೀವು ಹೊಂದಿದ್ದರೆ ವೈದ್ಯರನ್ನು ಕಾಣುವುದು ಉತ್ತಮ:

„ ಉಸಿರಿಗೆ ಕಷ್ಟಪಡುವುದು, ಬೆಚ್ಚಿಬೀಳುವುದನ್ನು ಹೋಲುವ ಗೊರಕೆ

„ ಹಗಲಿನಲ್ಲಿ ಗಮನಾರ್ಹವಾದ ನಿದ್ದೆ ಅಥವಾ ದಣಿವು

„ ಭಾವನಾತ್ಮ ಬದಲಾವಣೆಗಳು. ಆಲೋಚನೆಗಳು ನಿಧಾನಗೊಳ್ಳುವುದು ಅಥವಾ ಏಕಾಗ್ರತೆಯ ಸಮಯ ಕಡಿಮೆಯಾಗಿರುವುದು

„ ಬೆಳಗ್ಗೆ ತಲೆನೋವು

„ ಬೊಜ್ಜು ಅಥವಾ ಇತ್ತೀಚೆಗೆ ತೂಕ ಹೆಚ್ಚಿಸಿಕೊಂಡಿರುವುದು

ಗೊರಕೆಯ ನಿರ್ವಹಣೆ ಹೇಗೆ?

ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ಸರಳ ಬದಲಾವಣೆಗಳು ಗೊರಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಲ್ಲವು:

„ ದೇಹತೂಕ ಕಳೆದುಕೊಳ್ಳುವುದು, ಧೂಮಪಾನ, ಮದ್ಯಪಾನ ಮತ್ತು ರಾತ್ರಿಯ ಹೊತ್ತು ಭರ್ಜರಿಯಾಗಿ ಊಟ ಮಾಡುವುದನ್ನು ನಿಲ್ಲಿಸುವುದು.

„ ಪಾರ್ಶ್ವಕ್ಕೆ ಮಲಗುವುದರಿಂದ ಗೊರಕೆ ಕಡಿಮೆಯಾಗುತ್ತದೆ.

„ ತಲೆಯ ಅಡಿಗೆ ದಿಂಬುಗಳನ್ನು ಇರಿಸಿ ತಲೆಯನ್ನು ಎತ್ತರಿಸಿ ಮಲಗುವುದರಿಂದ ಗಂಟಲಿನಲ್ಲಿ ಉಸಿರಾಟ ಮಾರ್ಗ ಸಂಕುಚನಗೊಳ್ಳುವುದು ಕಡಿಮೆಯಾಗುತ್ತದೆ.

„ ಉಸಿರಾಟಕ್ಕೆ ಸಹಾಯ ಮಾಡುವ ನೇಸಲ್‌ ಸ್ಟ್ರಿಪ್‌ಗ್ಳು ಅಥವಾ ಮೃದು ಅಂಗಾಂಶಗಳನ್ನು ಮೃದುಗೊಳಿಸುವ ತ್ರೋಟ್‌ ಸ್ಪ್ರೆàಗಳನ್ನು ಉಪಯೋಗಿಸಿನೋಡಬಹುದು.

„ ವೈದ್ಯಕೀಯ ಚಿಕಿತ್ಸೆಗಳ ಪ್ರಕಾರ, ಬಾಯಿಯಲ್ಲಿ ಉಪಯೋಗಿಸುವ ಸಲಕರಣೆಗಳು ಮತ್ತು ದವಡೆಗಳನ್ನು ಸೂಕ್ತ ಸ್ಥಾನದಲ್ಲಿರಿಸುವ ಸಲಕರಣೆಗಳಿಂದ ಗಾಳಿಯಾಟದ ಮಾರ್ಗ ಸರಾಗವಾಗಲು ಸಹಾಯವಾಗುತ್ತದೆ.

„ ತೀವ್ರ ತರಹದ ಗೊರಕೆಯ ಸಮಸ್ಯೆ ಹೊಂದಿರುವವರು ವೈದ್ಯರ ಶಿಫಾರಸಿನೊಂದಿಗೆ ಕಂಟಿನ್ಯುಯಸ್‌ ಪಾಸಿಟಿವ್‌ ಏರ್‌ವೇ ಪ್ರೆಶರ್‌ (ಸಿಪಿಎಪಿ) ಬಳಸಿ ನೋಡಬಹುದು. ಇದೊಂದು ಉಪಕರಣವಾಗಿದ್ದು, ನೀವು ನಿಮ್ಮ ಮೂಗು ಅಥವಾ ಮುಖಕ್ಕೆ ಧರಿಸುವ ಮಾಸ್ಕ್ಗೆ ಒತ್ತಡಯುಕ್ತ ಗಾಳಿಯನ್ನು ಊದುತ್ತದೆ. ಇದರಿಂದ ನಿದ್ದೆಯಲ್ಲಿರುವಾಗ ಗಾಳಿಯಾಟ ಮಾರ್ಗ ತೆರೆದಿರುತ್ತದೆ.

„ ತೀವ್ರ ಸ್ವರೂಪದ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾಗಿದೆ.

„ ಓರೊ-ಫಾರಿಂಜಿಯಲ್‌ ವ್ಯಾಯಾಮ (ನಾಲಗೆಯನ್ನು ಸೆಳೆಯುವುದು, ಉದ್ದ ಮಾಡುವುದು ಮತ್ತು ತಿರುಚುವುದು) ಗಳನ್ನು ಗಂಟಲಿನ ಸುತ್ತಲಿನ ಸ್ನಾಯುಗಳ ಬಲವರ್ಧನೆಗಾಗಿ ಮಾಡಬಹುದಾಗಿದೆ.

ಗೊರಕೆ ಆ್ಯಪ್‌

ಈಗಿನ ಇಂಟರ್‌ನೆಟ್‌ ಯುಗದಲ್ಲಿ ಸ್ನೋರ್‌ ಲ್ಯಾಬ್‌ನಂತಹ ಆ್ಯಪ್‌ಗಳಿಂದ ಗೊರಕೆಯನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಇದು ಗೊರಕೆಯನ್ನು ದಾಖಲಿಸುತ್ತದೆ, ಅಳೆಯುತ್ತದೆ ಮತ್ತು ನಿಗಾ ಇರಿಸುತ್ತದೆ. ವ್ಯಕ್ತಿ ನಿದ್ದೆ ಮಾಡುತ್ತಿರುವಾಗ ಈ ಆ್ಯಪ್‌ನ್ನು ಅಲಾರಂನಂತೆ ಹಾಸಿಗೆ ಪಕ್ಕ ಇರಿಸಬಹುದಾಗಿದೆ. ಈ ಆ್ಯಪ್‌ ಗೊರಕೆ ಮಾಪನವನ್ನು ಪ್ರದರ್ಶಿಸುತ್ತದೆಯಾಗಿದ್ದು, ಇದರ ಮೂಲಕ ಯಾವಾಗ ಮತ್ತು ಗೊರಕೆ ಎಷ್ಟು ದೊಡ್ಡ ಸದ್ದಿನೊಂದಿಗೆ ಆಗಿದೆ ಎಂಬುದನ್ನು ತಿಳಿಯಬಹುದು.

ಮೇಘನಾ ಅಸಿಸ್ಟೆಂಟ್‌ ಪ್ರೊಫೆಸರ್‌

ಮುಫೀದ್‌ ಹಸನ್‌, ಕ್ಲಿನಿಕಲ್‌ ಸೂಪರ್‌ವೈಸರ್‌, ರೆಸ್ಪಿರೇಟರಿ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಲ್ಮನರಿ ಮೆಡಿಸಿನ್‌ ವಿಭಾಗ, ಕೆಎಂಸಿ, ಅತ್ತಾವರ, ಮಂಗಳೂರು)

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.