Daily Horoscope: ದೀರ್ಘ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗೌರವ ಆದರಾದಿ ಲಭ್ಯ
Team Udayavani, Jul 17, 2023, 7:12 AM IST
ಮೇಷ: ಗುರುಹಿರಿಯರ ಆಶೀರ್ವಾದ ಸಹಕಾರ. ನಿರೀಕ್ಷಿತ ಸ್ಥಾನ ಮಾನ ಗೌರವ ಪ್ರಾಪ್ತಿ. ದೀರ್ಘ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳಿಂದ ಪ್ರೋತ್ಸಾಹ. ದಾಂಪತ್ಯ ತೃಪ್ತಿಕರ.
ವೃಷಭ: ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಜನಮನ್ನಣೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಧನಲಾಭ. ದಾಂಪತ್ಯ ತೃಪ್ತಿಕರ. ಗುರುಹಿರಿಯರಿಂದ ಸಂತೋಷ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.
ಮಿಥುನ: ದೀರ್ಘ ಪ್ರಯಾಣ. ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ದಾಂಪತ್ಯ ಸುಖ ವೃದ್ಧಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗೌರವ ಆದರಾದಿ ಲಭ್ಯ. ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು. ಮಿತ್ರರಿಂದ ಸಾಮಾನ್ಯ ಪ್ರೋತ್ಸಾಹ.
ಕರ್ಕ: ದೈಹಿಕ ಆರೋಗ್ಯ ಉತ್ತಮವಿದ್ದರೂ ಮಾನಸಿಕ ಒತ್ತಡ ಎದುರಾದೀತು. ಆಸ್ತಿ ವಿಚಾರದಲ್ಲಿ ಅಡೆತಡೆಗಳು ಕಂಡು ಬಂದಾವು. ದಾಂಪತ್ಯ ಸುಖ ಮಧ್ಯಮ. ಗುರುಹಿರಿಯರ ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು.
ಸಿಂಹ: ದೂರ ಸಂಚಾರ. ಪರಿಸ್ಥಿತಿಗೆ ಸರಿಯಾಗಿ ಕಾರ್ಯವೈಖರಿ. ಕೆಲವೊಮ್ಮೆ ಕುಚೇಷ್ಠೆ ನಡೆದೀತು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಗುರುಹಿರಿಯರ ಆರೋಗ್ಯ ಗಮನಿಸಿ. ದಾಂಪತ್ಯ ತೃಪ್ತಿಕರ. ದೇವತಾ ಕಾರ್ಯದಿಂದ ಮನಃ ಸಂತೃಪ್ತಿ.
ಕನ್ಯಾ: ಆರೋಗ್ಯ ಗಮನಿಸಿ. ಅನಾವಶ್ಯಕ ಸ್ಪರ್ಧೆಗೆ ಆಸ್ಪದ ನೀಡದಿರಿ. ಬಂಧು ಮಿತ್ರರಲ್ಲಿ ಸಂಯಮದ ನಡೆ ಅಗತ್ಯ. ದಾಂಪತ್ಯ ಸುಖ ಉತ್ತಮ. ವಿದ್ಯಾರ್ಥಿಗಳಿಗೆ ಹೆಚ್ಚಿದ ಅವಕಾಶ. ನಿರೀಕ್ಷೆಗೂ ಮೀರಿದ ಧನಾಗಮ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಿಸಿ.
ತುಲಾ: ಧಾರ್ಮಿಕ ಚಟುವಟಿಕೆಗಳಲ್ಲಿ ನೇತೃತ್ವ. ವೈಭವದಿಂದ ಕೂಡಿದ ದಿನಚರಿ. ದೂರ ಪ್ರಯಾಣ. ಗುರುಹಿರಿಯರೊಂದಿಗೆ ಸಮಾಲೋಚನೆ. ನಿರೀಕ್ಷೆಗೂ ಮೀರಿದ ಧನ ವ್ಯಯ. ಗೃಹೋಪ ವಸ್ತುಗಳ ಬಂಧುಮಿತ್ರರೊಂದಿಗೆ ಕಾಲ ಕಳೆಯುವಿಕೆ. ವಿಚಾರ ವಿನಿಮಯ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಯೋಚಿತ ವಿಷಯಗಳಲ್ಲಿ ಸಫಲತೆಯಿಂದ ಮನಃ ಸಂತೋಷ. ಗೌರವ ಅಭಿವೃದ್ಧಿ. ಉತ್ತಮ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಅನುಕೂಲಕರ.
ಧನು: ಆರೋಗ್ಯ ಗಮನಿಸಿ. ಮಾಡುವ ಕಾರ್ಯದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ಯಾವುದೇ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗದಿರಿ. ದೂರ ಪ್ರಯಾಣ ಸಂಭವ. ನಿರೀಕ್ಷಿತ ಸ್ಥಾನಮಾನಕ್ಕಾಗಿ ಹೆಚ್ಚಿದ ಪರಿಶ್ರಮ.
ಮಕರ: ಗುರುಹಿರಿಯರ ಉತ್ತಮ ಸಹಕಾರ ಮಾರ್ಗದರ್ಶನದ ಲಾಭ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ದೇವತಾ ಸ್ಥಳ ಸಂದರ್ಶನ. ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹ. ಪಾಲುಗಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ.
ಕುಂಭ: ಆರೋಗ್ಯ ಗಮನಿಸಿ. ದೇಹಕ್ಕೆ ಅತಿಯಾದ ಶ್ರಮ ನೀಡದೇ ಕಾರ್ಯ ನಿರ್ವಹಿಸಿ. ದಂಪತಿಗಳಲ್ಲಿ ಪರಸ್ಪರ ಸಹಕಾರ ಪ್ರೀತಿ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ. ಪ್ರಯಾಣ ಸಂಭವ. ಹಿರಿಯರ ಆರೋಗ್ಯ ಗಮನಿಸಿ.
ಮೀನ: ಗೃಹೋಪ ವಸ್ತುಗಳ ಸಂಗ್ರಹ. ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ತೃಪ್ತಿ. ನಿದಾನಗತಿಯಲ್ಲಿ ಧನ ಸಂಚಯನ. ದಾಂಪತ್ಯದಲ್ಲಿ ಸಂತೋಷ ವೃದ್ಧಿ. ಮಕ್ಕಳಿಂದ ಸುಖ ಇತ್ಯಾದಿ ಶುಭ ಫಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.