ಎಟಿಎಂನಲ್ಲಿ ಹಣ ದೋಚಿದ್ದ ನಾಲ್ವರ ಬಂಧನ

Team Udayavani, Jul 17, 2023, 2:00 PM IST

ಎಟಿಎಂನಲ್ಲಿ ಹಣ ದೋಚಿದ್ದ ನಾಲ್ವರ ಬಂಧನ

ಬೆಂಗಳೂರು: ಇತ್ತೀಚೆಗೆ ಖಾಸಗಿ ಬ್ಯಾಂಕ್‌ ವೊಂದರ ಎಟಿಎಂ ಕೇಂದ್ರದಲ್ಲಿ ಎಟಿಎಂ ಯಂತ್ರದ ಬಾಗಿಲು ತೆರೆದು 24.17 ಲಕ್ಷ ರೂ. ಕಳವು ಮಾಡಿದ್ದ ಪ್ರಕರಣ ಬೇಧಿಸಿ ರುವ ಪರಪ್ಪನ ಅಗ್ರ ಹಾರ ಪೊಲೀಸರು ಎಟಿಎಂ ಕೇಂದ್ರದ ಯಂತ್ರಗಳಿಗೆ ಹಣ ತುಂಬುವ ಕಸ್ಟೋಡಿ ಯನ್‌ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಟಿಎಂ ಲೇಔಟ್‌ ನಿವಾಸಿ ನದೀಮ್‌(30), ಹುಸ್ಕೂರಿನ ಶ್ರೀರಾಮ್‌ (35), ದೊಡ್ಡನಾಗ ಮಂಗಲದ ಅರುಳ್‌ ಕುಮಾರ್‌ (22) ಹಾಗೂ ಮಾರತ್‌ಹಳ್ಳಿಯ ಮಹೇಶ್‌(30) ಬಂಧಿತರು.

ಆರೋಪಿಗಳು ಜು.5ರಂದು ಪರಪ್ಪನ ಅಗ್ರಹಾರ ರಸ್ತೆ ಕೆ.ಆರ್‌.ನಗರ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಎಟಿಎಂ ಯಂತ್ರದ ಡೋರ್‌ ತೆರೆದು 24.17 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಕೂಡ್ಲುಗೇಟ್‌ ಸಿಎಂಎಸ್‌ ಕಂಪನಿ ಶಾಖಾ ವ್ಯವಸ್ಥಾಪಕ ವೈ.ಎಸ್‌.ಸಿದ್ದರಾಜು ಎಂಬ ವರು ನೀಡಿದ ದೂರಿನ ಮೇರೆಗೆ ಕಾರ್ಯಾ ಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಅರುಳ್‌ ಕುಮಾರ್‌ ಸಿಎಂಎಸ್‌ ಕಂಪನಿಯ ಕಸ್ಟೋಡಿಯನ್‌ ಆಗಿದ್ದಾನೆ. ಹೀಗಾಗಿ ಇತರೆ ಆರೋಪಿಗಳು ಆತನಿಗೆ ಕಮಿಷನ್‌ ಆಮಿಷವೊಡ್ಡಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಎಟಿಎಂ ಕೇಂದ್ರದಲ್ಲಿ ಕಳ್ಳತನಕ್ಕೆ ತೀರ್ಮಾನಿಸಿದ್ದರು. ಸಿಎಂಎಸ್‌ ಕಂಪನಿಯ ವಾಹನದ ಚಾಲಕ ಆರ್ಮುಗಂ, ಭದ್ರತಾ ಸಿಬ್ಬಂದಿ ಪರಮೇಶ್ವರಪ್ಪ, ಕಸ್ಟೊಡಿಯನ್‌ ಆರುಳ್‌ ಕುಮಾರ್‌, ಮಹದೇವ ತಂಡ ಜು.5ರಂದು 32 ಲಕ್ಷ ರೂ. ನಗದು ತೆಗೆದುಕೊಂಡು ಬಂದು ಖಾಸಗಿ ಬ್ಯಾಂಕ್‌ನ ಎಟಿಎಂ ಯಂತ್ರಕ್ಕೆ ತುಂಬಿದ್ದರು. ಈ ವೇಳೆ ಕಸ್ಟೋಡಿಯನ್‌ ಅರುಳ್‌ ಕುಮಾರ್‌ ಪೂರ್ವಸಂಚಿನಂತೆ ಎಟಿಎಂ ಯಂತ್ರದ ಸೇಫ್ಟಿ ಡೋರ್‌ ಲಾಕ್‌ ಮಾಡದೆ ಹೋಗಿದ್ದ. ಎಟಿಎಂ ಯಂತ್ರಕ್ಕೆ ಹಣ ತುಂಬಿ ತೆರಳಿದ ಕೆಲವೇ ನಿಮಿಷಗಳಲ್ಲಿ ಆರೋಪಿಗಳಾದ ನದೀಮ್‌ ಮತ್ತು ಮಹೇಶ್‌ ಹೆಲ್ಮೆಟ್‌ ಧರಿಸಿ ಎಟಿಎಂ ಕೇಂದ್ರ ಪ್ರವೇಶಿ, ಸೇಫ್ಟಿ  ಡೋರ್‌ ತೆರೆದು ಬ್ಯಾಗ್‌ನಲ್ಲಿ ಹಣ ತುಂಬಿಸಿಕೊಂಡು ಪರಾರಿಯಾಗಿದ್ದರು.

ಜು.6ರಂದು ಬೆಳಗ್ಗೆ ಮತ್ತೂಮ್ಮೆ ಎಟಿಎಂ ಯಂತ್ರಕ್ಕೆ ಹಣ ತುಂಬಲು ಬಂದಾಗ ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡಸುವ ಆರಂಭದಲ್ಲಿ ಅರುಳ್‌ ಕುಮಾರ್‌ ಕೃತ್ಯ ಗೊತ್ತಾಗಿರಲಿಲ್ಲ. ಆದರೆ, ಕೇಂದ್ರ ಸಿಸಿ ಕ್ಯಾಮೆರಾ ಶೋಧಿಸಿದಾಗ ಅರುಳ್‌ ಕುಮಾರ್‌ ವರ್ತನೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಜತೆಗೆ ಎಟಿಎಂ ಕೇಂದ್ರದ ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್‌ ಕರೆಗಳ ಜಾಡು ಹಿಡಿದಾಗ ಅರುಳ್‌ ಕುಮಾರ್‌ ಕೃತ್ಯ ಪತ್ತೆಯಾಗಿ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

fake court in gujarat

Gujarat: ನಕಲಿ ಪೊಲೀಸ್‌ ಆಯ್ತು, ಅರೆಸ್ಟ್‌ ಆಯ್ತು.. ಈಗ ನಕಲಿ ಕೋರ್ಟ್‌!

hockey; India playing against Germany

Hockey: ಜರ್ಮನಿ ವಿರುದ್ಧ “ಪ್ಯಾರಿಸ್‌ ಪ್ರತಿಕಾರ’ಕ್ಕೆ ಸಿದ್ಧತೆ

13 thousand recruitment in top 5 IT firms in first half of this year

IT: ಈ ವರ್ಷದ ಮೊದಲಾರ್ಧದಲ್ಲಿ ಅಗ್ರ 5 ಐಟಿ ಸಂಸ್ಥೆಗಳಲ್ಲಿ 13 ಸಾವಿರ ನೇಮಕ

Prime Minister Modi preached peace mantra to Putin again!

Narendra Modi: ಪುತಿನ್‌ಗೆ ಮತ್ತೆ ಶಾಂತಿ ಮಂತ್ರ ಬೋಧಿಸಿದ ಪ್ರಧಾನಿ ಮೋದಿ!

Madhya Pradesh: Three tourists were bitten by a leopard

Madhya Pradesh: ಚಿರತೆ ಕೆಣಕಿ, ಕಚ್ಚಿಸಿಕೊಂಡ ಮೂವರು ಪ್ರವಾಸಿಗರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

fake court in gujarat

Gujarat: ನಕಲಿ ಪೊಲೀಸ್‌ ಆಯ್ತು, ಅರೆಸ್ಟ್‌ ಆಯ್ತು.. ಈಗ ನಕಲಿ ಕೋರ್ಟ್‌!

hockey; India playing against Germany

Hockey: ಜರ್ಮನಿ ವಿರುದ್ಧ “ಪ್ಯಾರಿಸ್‌ ಪ್ರತಿಕಾರ’ಕ್ಕೆ ಸಿದ್ಧತೆ

13 thousand recruitment in top 5 IT firms in first half of this year

IT: ಈ ವರ್ಷದ ಮೊದಲಾರ್ಧದಲ್ಲಿ ಅಗ್ರ 5 ಐಟಿ ಸಂಸ್ಥೆಗಳಲ್ಲಿ 13 ಸಾವಿರ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.