ಅತ್ತಿಗೆಯನ್ನು ಕೊಂದು ಶವ ವಿಲೇವಾರಿಗೆ ಕ್ಯಾಬ್ ಬುಕ್ ಮಾಡಿದ ಮೈದುನ… ಮುಂದೆ ನಡೆದದ್ದೇ ಬೇರೆ
Team Udayavani, Jul 17, 2023, 2:36 PM IST
ಕಾನ್ಪುರ: ನಲ್ವತ್ತು ಕೋಟಿ ರೂಪಾಯಿ ಆಸ್ತಿ ಆಸೆಗಾಗಿ ಮೈದುನನೊಬ್ಬ ತನ್ನ ಸಂಬಂಧಿಕರ ಜೊತೆಗೂಡಿ ಅತ್ತಿಗೆಯನ್ನೇ ಕೊಲೆಗೈದು ಮೃತದೇಹ ವಿಲೇವಾರಿಗೆ ಬಾಡಿಗೆ ಕಾರು ಬುಕ್ ಮಾಡಿದ್ದು ಬಾಡಿಗೆ ಕಾರು ಚಾಲಕ ಮಾಡಿದ ಈ ಒಂದು ಕೆಲಸದಿಂದ ನಲ್ವತ್ತು ಕೋಟಿ ರುಪಾಯಿಗೆ ಆಸೆ ಪಟ್ಟ ಮೈದುನ ಇದೀಗ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಏನಿದು ಪ್ರಕರಣ:
ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಮೈದುನನೊಬ್ಬ ತನ್ನ ಅತ್ತಿಗೆಯನ್ನೇ ಕೊಲೆಗೈದಿದ್ದಾನೆ. ಇದಾದ ಬಳಿಕ ಮೃತ ದೇಹವನ್ನು ವಿಲೇವಾರಿ ಮಾಡಲು ವಾಹನ ಬೇಕಾಗಿರುವುದರಿಂದ ಓಲಾ ಕ್ಯಾಬ್ ಬುಕ್ ಮಾಡಿದ್ದಾನೆ. ಕಾರು ಬುಕ್ ಮಾಡಿದ ಜಾಗಕ್ಕೆ ಓಲಾ ಕಾರು ಬಂದಿದೆ ಈ ವೇಳೆ ಆರೋಪಿ ಮೈದುನ ತನ್ನ ಅತ್ತಿಗೆಯ ಮೃತ ದೇಹವನ್ನು ಒಂದು ಗೋಣಿ ಚೀಲದಲ್ಲಿ ತುಂಬಿಸಿ ಕಾರಿನಲ್ಲಿ ಸಾಗಿಸುವ ಯೋಚನೆ ಮಾಡಿದ್ದಾನೆ ಅದರಂತೆ ಕಾರು ಬರುವ ಮೊದಲು ತನ್ನ ಇನ್ನೋರ್ವ ಸಂಬಂಧಿಯ ಜೊತೆಗೂಡಿ ಮೃತದೇಹವನ್ನು ಚೀಲಕ್ಕೆ ತುಂಬಿಸಿ ವಿಲೇವಾರಿಗೆ ತಯಾರು ಮಾಡಿ ಇಟ್ಟಿದ್ದಾರೆ. ಕಾರು ಚಾಲಕ ಬಂದ ವೇಳೆ ಕಾರಿನ ಡಿಕ್ಕಿ ತೆರೆದು ಅದರೊಳಗೆ ಮೃತದೇಹವಿದ್ದ ಚೀಲವನ್ನು ತುಂಬಿಸಿದ್ದಾನೆ ಇದನ್ನು ಕಂಡ ಚಾಲಕನಿಗೆ ಏನೋ ಅನುಮಾನವಾಗಿದೆ ಅಲ್ಲದೆ ಇಬ್ಬರೂ ಯುವಕರ ಮುಖದಲ್ಲಿ ಬೆವರು ಸುರಿಯುತ್ತಿತ್ತು ಅಲ್ಲದೆ ಗಾಬರಿಗೊಂಡಿದ್ದರು, ಅಷ್ಟರಲ್ಲೇ ಚಾಲಕನಿಗೆ ಡಿಕ್ಕಿಗೆ ತುಂಬಿಸಿದ ಚೀಲದಲ್ಲಿ ರಕ್ತದ ಕಲೆ ಕಾಣಿಸಿದೆ. ಇದರಿಂದ ಎಚ್ಚೆತ್ತುಕೊಂಡ ಚಾಲಕ ಬಾಡಿಗೆಯನ್ನು ಆಪ್ ಮೂಲಕ ಕ್ಯಾನ್ಸಲ್ ಮಾಡಿ ಡಿಕ್ಕಿಯಲ್ಲಿದ್ದ ಚೀಲವನ್ನು ತೆಗೆಯುವಂತೆ ಹೇಳಿದ್ದಾನೆ ಇದಕ್ಕೆ ಒಪ್ಪದಿದ್ದ ಯುವಕರು ಹೆಚ್ಚು ದುಡ್ಡು ನೀಡುವುದಾಗಿ ಚಾಲಕನಿಗೆ ಆಮಿಷ ಒಡ್ಡಿದ್ದಾರೆ ಆದರೆ ಇದ್ಯಾವುದಕ್ಕೂ ಜಗ್ಗದ ಚಾಲಕ ಡಿಕ್ಕಿಯಲ್ಲಿದ್ದ ಚೀಲವನ್ನು ತೆಗೆಯುವಂತೆ ಹೇಳಿ ಅಲ್ಲಿಂದ ತೆರಳಿದ್ದಾನೆ. ಅಲ್ಲೇ ಸ್ವಲ್ಪ ಮುಂದೆ ಹೋದ ಚಾಲಕ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ ಅಷ್ಟು ಮಾತ್ರವಲ್ಲದೆ ಗಸ್ತು ತಿರುಗುತ್ತಿದ್ದ ಪೊಲೀಸರಿಗೂ ಮಾಹಿತಿ ನೀಡಿದ್ದಾನೆ.
ಚಾಲಕನ ಮಾಹಿತಿಯಿಂದ ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಚಾಲಕ ಹೇಳಿದ ವಿಳಾಸಕ್ಕೆ ತೆರಳಿ ಯುವಕರನ್ನು ವಿಚಾರಣೆ ನಡೆಸಿದ್ದಾರೆ ಈ ವೇಳೆ ಗಾಬರಿಗೊಂಡ ಯುವಕರು ತಾವು ಮಾಡಿದ ಕೃತ್ಯವನ್ನು ಬಾಯಿ ಬಿಟ್ಟಿದ್ದಾರೆ. ಕೂಡಲೇ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಮಹಿಳೆಯ ಮೃತದೇಹವನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಸಾಗಿಸಿದ್ದಾರೆ.
ಜುಲೈ 11 ರಂದು ಈ ಘಟನೆ ನಡೆದಿದ್ದು ನೋಯ್ಡಾದಿಂದ ಕಾನ್ಪುರದ ಮಹಾರಾಜಪುರಕ್ಕೆ ತೆರಳಲು ಕಾರು ಬುಕ್ ಮಾಡಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಸಧ್ಯ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರೆದಿದೆ.
ಇದನ್ನೂ ಓದಿ: Chikkamagaluru; ಮಹಿಳೆಯ ಅನುಮಾನಾಸ್ಪದ ಸಾವು: ಎಸ್ಪಿ ಕಚೇರಿಯ ಮುಂದೆ ಗೋಳಾಡಿದ ಕುಟುಂಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.