ವಿದ್ಯುತ್‌, ತಾಂತ್ರಿಕ ದೋಷ: ಕಾರ್ಖಾನೆ ಸ್ಥಗಿತ


Team Udayavani, Jul 17, 2023, 2:54 PM IST

ವಿದ್ಯುತ್‌, ತಾಂತ್ರಿಕ ದೋಷ: ಕಾರ್ಖಾನೆ ಸ್ಥಗಿತ

ಮಂಡ್ಯ: ಪ್ರಸ್ತುತ ಸಾಲಿನಲ್ಲಿ ಮೈಷುಗರ್‌ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗಿದೆ. ಆದರೆ, ಆರಂಭಗೊಂಡು ಒಂದು ವಾರದೊಳಗೆ ತಾಂತ್ರಿಕ ದೋಷ ಹಾಗೂ ವಿದ್ಯುತ್‌ ಸಮಸ್ಯೆಯಿಂದ ಕಬ್ಬು ಅರೆಯುವಿಕೆಯನ್ನು ಶನಿವಾರ ರಾತ್ರಿ ಸ್ಥಗಿತಗೊಳಿಸಿದ್ದರಿಂದ ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಕಬ್ಬು ಅರೆಯಲು ಒಂದೇ ಕಂತಿನಲ್ಲಿ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು. ಇದರಿಂದ ಜೂನ್‌ನಲ್ಲಿ ಬಾಯ್ಲರ್‌ಗೆ ಬೆಂಕಿ ಹಾಗೂ ಜು.6ರಂದು ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಗಿತ್ತು. ಆದರೆ, ವಾರದೊಳಗೆ ಕಾರ್ಖಾನೆಯ ಯಂತ್ರದಲ್ಲಿ ದೋಷ ಹಾಗೂ ವಿದ್ಯುತ್‌ ಕಡಿತಗೊಂಡಿದ್ದರಿಂದ ಕಬ್ಬು ಅರೆಯುವಿಕೆ ಯನ್ನು ಭಾನುವಾರ ಸಂಜೆವರೆಗೂ ಸ್ಥಗಿತಗೊಳಿಸಲಾಗಿತ್ತು.

ಯಾರ್ಡ್‌ನಲ್ಲೇ ನಿಂತ ಕಬ್ಬು: ಕಳೆದ ಒಂದು ವಾರದಿಂದ ಮೈಷುಗರ್‌ ಕಾರ್ಖಾನೆಗೆ ಕಬ್ಬು ಬೆಳೆಗಾರರು ಎತ್ತಿನಗಾಡಿ, ಟ್ರ್ಯಾಕ್ಟರ್‌ ಹಾಗೂ ಲಾರಿಗಳಲ್ಲಿ ಕಬ್ಬು ಸರಬ ರಾಜು ಮಾಡಿದ್ದರು. ಆದರೆ, ಕಾರ್ಖಾನೆ ಸ್ಥಗಿತಗೊಂಡಿ ದ್ದರಿಂದ ಮೈಷುಗರ್‌ ಕಬ್ಬು ತೂಕ ಮಾಡುವ ಯಾರ್ಡ್‌ನಲ್ಲೇ ನಿಂತಿವೆ. ಮಳೆ, ಗಾಳಿ, ಬಿಸಿಲು ಎನ್ನದೆ ಕಾಯುವಂತಾಗಿದೆ. ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಕಬ್ಬು ತೂಕ ಮಾಡಿಕೊಳ್ಳುತ್ತಿಲ್ಲ. ಹೆಚ್ಚು ದಿನ ಬಿಸಿಲಿನಲ್ಲಿ ಕಬ್ಬು ಒಣಗಿದರೆ ಇಳುವರಿ ಕಡಿಮೆಯಾಗಲಿದೆ ಎಂಬ ಆತಂಕ ರೈತರಿಗೆ ಎದುರಾಗಿದೆ.

ಸಮರ್ಪಕವಾಗಿ ಅರೆಯದಿದ್ದರೆ ಕಬ್ಬಿನ ಕೊರತೆ: ಮೈಷುಗರ್‌ ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ಟನ್‌ ಕಬ್ಬು ಬೆಳೆದು ನಿಂತಿದೆ. ಕಾರ್ಖಾ ನೆಗೆ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಟನ್‌ ಕಬ್ಬು ಒಪ್ಪಿಗೆಯಾಗಿದೆ. ಒಪ್ಪಿಗೆಯಾಗಿರುವ ಕಬ್ಬನ್ನು ಅರೆಯ ಬೇಕಾದರೆ ಕಾರ್ಖಾನೆಯು ನಿರಂತರವಾಗಿ ಚಾಲನೆ ಮಾಡಬೇಕಾಗಿದೆ. ಆದರೆ, ತಾಂತ್ರಿಕ ದೋಷದಿಂದ ಆಗಾಗ್ಗೆ ಸ್ಥಗಿತಗೊಂಡರೆ ರೈತರು ತಮ್ಮ ಕಬ್ಬನ್ನು ಬೇರೆ ಕಾರ್ಖಾನೆಗೆ ಸಾಗಿಸಲು ಮುಂದಾಗುತ್ತಾರೆ. ಇದರಿಂದ ಮುಂದೆ ಕಳೆದ ವರ್ಷದಂತೆ ಈ ವರ್ಷವೂ ಕಬ್ಬಿನ ಕೊರತೆ ಕಾಡುವ ಸಾಧ್ಯತೆಯೇ ಹೆಚ್ಚಿದೆ.

ಕಾರ್ಮಿಕರಿಂದ ಕಬ್ಬು ಕಟಾವು: ಈಗಾಗಲೇ ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಮಾಡಲು 3 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ಆಗಮಿಸಿದ್ದಾರೆ. ಅವರಿಗೆ ಮುಂಗಡ ಹಣ ಪಾವತಿಸಲಾಗಿದೆ. ಕಬ್ಬಿನ ಗದ್ದೆಗಳಲ್ಲಿ ಟೆಂಟ್‌ ಹಾಕಿಕೊಂಡು ಕಬ್ಬು ಕಟಾವಿನಲ್ಲಿ ತೊಡಗಿದ್ದಾರೆ. ಅಲ್ಲದೆ, ಇನ್ನಷ್ಟು ಮಂದಿ ಕಾರ್ಮಿಕರು ಆಗಮಿಸುತ್ತಿದ್ದಾರೆ. ಆದರೆ, ಕಾರ್ಖಾನೆಯನ್ನು ಸರಿಯಾಗಿ ಚಾಲನೆ ಮಾಡದಿದ್ದರೆ ತೊಂದರೆಯಾಗಲಿದೆ. ಶನಿವಾರ ರಾತ್ರಿ ಕಾರ್ಖಾನೆ ನಿಂತಿರುವುದರಿಂದ ಕಬ್ಬು ಕಟಾವು ಮಾಡದಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಅಧಿಕಾರಿಗಳೇ ಇಲ್ಲ : ಶನಿವಾರ ರಾತ್ರಿ ತಾಂತ್ರಿಕ ಕಾರಣದಿಂದ ಕಾರ್ಖಾನೆ ಸ್ಥಗಿತಗೊಂಡಿದೆ. ಆದರೆ, ಅದನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ತಾಂತ್ರಿಕ ತಂತ್ರಜ್ಞರ ಕೊರತೆಯಿಂದ ಭಾನುವಾರ ಮಧ್ಯಾಹ್ನದವರೆಗೂ ಕಾರ್ಖಾನೆ ಸ್ಥಗಿತಗೊಂಡಿತ್ತು. ನಂತರ ಕೆಲವು ಗಂಟೆಗಳು ಚಾಲನೆಗೊಂಡ ಕಾರ್ಖಾನೆ ಮತ್ತೆ ಸ್ಥಗಿತಗೊಂಡಿದೆ. ಕಾರ್ಖಾನೆಯಲ್ಲಿ ಈ ರೀತಿಯ ಬೆಳವಣಿಗೆಗಳು ಆಗುತ್ತಿದ್ದರೂ ಯಾವ ಅಧಿಕಾರಿಗಳು ಕಾರ್ಖಾನೆಯಲ್ಲಿಲ್ಲ. ವ್ಯವಸ್ಥಾಪಕ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ತಂತ್ರಜ್ಞರು ಸೇರಿದಂತೆ ಇತರೆ ವಿಭಾಗದ ಅಧಿಕಾರಿಗಳು ರಜೆಯಲ್ಲಿದ್ದರು.

ಕಳೆದ ವರ್ಷವೂ ಇದೇ ಪರಿಸ್ಥಿತಿ : ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇದೇ ಪರಿಸ್ಥಿತಿ ಇತ್ತು. ಈಗ ಮತ್ತೆ ಅದೇ ಮರು ಕಳುಹಿಸಿದೆ. ಕಳೆದ ವರ್ಷವೇ ಕಾರ್ಖಾನೆ ದುರಸ್ತಿ ಮಾಡಿದ್ದರು. ಅಲ್ಲದೆ, ಈ ವರ್ಷವೂ ದುರಸ್ತಿ ಕಾರ್ಯ ನಡೆದಿತ್ತು. ಅದಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ. ಆದರೂ, ಸಮಸ್ಯೆ ತಲೆದೋರುತ್ತಿದೆ. ಇದರಿಂದ ಮತ್ತೆ ರೈತರಿಗೆ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.

ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು : ಮೈಷುಗರ್‌ ಕಾರ್ಖಾನೆ ಆಗಾಗ್ಗೆ ವಿದ್ಯುತ್‌ ಹಾಗೂ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳಿಸುತ್ತಿದ್ದರೆ, ರೈತರು ಬೇರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಲು ಮುಂದಾಗುತ್ತಾರೆ. ಈಗಾಗಲೇ ಮೈಷುಗರ್‌ ವ್ಯಾಪ್ತಿಯ ಸಾಕಷ್ಟು ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಸಾಗಾಣಿಕೆ ಮಾಡಲಾಗಿದೆ. ಇದು ಹೀಗೆ ಮುಂದುವರೆದರೆ ಕಬ್ಬು ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ. ಕಳೆದ ರಾತ್ರಿಯಿಂದಲೂ ಯಾರ್ಡ್‌ನಲ್ಲೇ ಸುಮಾರು 5 ಸಾವಿರ ಟನ್‌ ಕಬ್ಬಿದ್ದರೆ, ಕಬ್ಬಿನ ಗದ್ದೆಗಳಲ್ಲಿ ಕಟಾವು ಮಾಡಿರುವ ಸುಮಾರು 8 ಸಾವಿರಕ್ಕೂ ಹೆಚ್ಚು ಟನ್‌ ಕಬ್ಬು ಇದೆ. ಬೆಳೆದು ನಿಂತಿರುವ ಕಬ್ಬನ್ನು ಸರಿಯಾದ ಸಮಯಕ್ಕೆ ಕಟಾವು ಮಾಡದಿದ್ದರೆ ಇಳುವರಿ ಕಡಿಮೆಯಾಗಲಿದೆ ಎಂಬ ಆತಂಕದಲ್ಲಿ ಇರುವ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ರೈತರು ಸರಬರಾಜು ಮಾಡುತ್ತಾರೆ. ಮೈಷುಗರ್‌ಗೆ ಮುಂದಿನ ದಿನಗಳಲ್ಲಿ ಕಬ್ಬಿನ ಕೊರತೆ ಎದುರಾಗಲಿದೆ ಎಂದು ಕಬ್ಬು ತುಂಬಿಕೊಂಡು ಬಂದಿದ್ದ ಕಾರ್ಮಿಕರು, ರೈತರು ಹೇಳಿದ್ದಾರೆ.

ಬಾಕಿ ಬಿಲ್‌ ಕಟ್ಟದೆ ವಿದ್ಯುತ್‌ ಸಮಸ್ಯೆ?: ಮೈಷುಗರ್‌ ಕಾರ್ಖಾನೆಯು ಸೆಸ್ಕಾಂಗೆ ಸುಮಾರು 41 ಕೋಟಿ ರೂ. ಹೆಚ್ಚು ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದೆ. ಶನಿವಾರ ರಾತ್ರಿ ಕಾರ್ಖಾನೆ ಸ್ಥಗಿತಗೊಳ್ಳಲು ವಿದ್ಯುತ್‌ ಕಾರಣವಾಗಿದೆ ಎನ್ನಲಾಗುತ್ತಿದೆ. ಶನಿವಾರ ರಾತ್ರಿ 12 ಗಂಟೆಗೆ ವಿದ್ಯುತ್‌ ಕಡಿತಗೊಂಡಿದೆ. ಇದರಿಂದ ಕಾರ್ಖಾನೆ ಕಬ್ಬು ಅರೆಯುವಿಕೆ ನಿಲ್ಲಿಸಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ವಿದ್ಯುತ್‌ ಬಂದರೂ ಸಂಜೆವರೆಗೂ ಕಾರ್ಖಾನೆ ಚಾಲನೆ ಮಾಡಿರಲಿಲ್ಲ ಎಂದು ಕಬ್ಬು ತುಂಬಿಕೊಂಡು ಬಂದಿದ್ದ ರೈತರು ಆರೋಪಿಸಿದ್ದಾರೆ.

ಟಾಪ್ ನ್ಯೂಸ್

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

hdk-office

Congress Government 11 ಲಕ್ಷ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳುತ್ತಿದೆ: ಎಚ್‌ಡಿಕೆ

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

hdk-office

Congress Government 11 ಲಕ್ಷ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳುತ್ತಿದೆ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.