ಇನ್ನೂ 3 ತಿಂಗಳು ಟೊಮೇಟೊ ಬೆಲೆ ಇಳಿಕೆ ಅಸಾಧ್ಯ: ಹೊಸ ಬೆಳೆಗೆ ಕನಿಷ್ಠ 3 ತಿಂಗಳು ಅಗತ್ಯ

 ನಾಸಿಕ್‌ ಟೊಮೇಟೊ ಮಾರುಕಟ್ಟೆ ಈ ಬಾರಿ ಅತಂತ್ರ    

Team Udayavani, Jul 18, 2023, 7:39 AM IST

ಇನ್ನೂ 3 ತಿಂಗಳು ಟೊಮೇಟೊ ಬೆಲೆ ಇಳಿಕೆ ಅಸಾಧ್ಯ: ಹೊಸ ಬೆಳೆಗೆ ಕನಿಷ್ಠ 3 ತಿಂಗಳು ಅಗತ್ಯ

ಕೋಲಾರ: ಕೇಂದ್ರ ಸರಕಾರ ಟೊಮೇಟೊ  ದರವನ್ನು ಪ್ರತಿ ಕೆಜಿಗೆ 80 ರೂ. ನಿಗದಿಪಡಿಸಿ ಮಾರಲು ಮುಂದಾಗಿದ್ದರೂ, ಇನ್ನೂ ಒಂದೆರೆಡು ತಿಂಗಳು ಇದು ಕಷ್ಟ ಸಾಧ್ಯ ಎನ್ನುತ್ತವೆ  ಟೊಮೇಟೊ ತವರಾದ ಕೋಲಾರ ಮಾರುಕಟ್ಟೆ ವರದಿಗಳು.

ಜುಲೈ ಆರಂಭದಿಂದಲೇ ಟೊಮೇಟೊ  ಧಾರಣೆ ಏರುಮುಖದಲ್ಲಿದೆ. ಇದೇ ಪರಿಸ್ಥಿತಿ ಕನಿಷ್ಠ ಇನ್ನೂ  ಒಂದು ತಿಂಗಳವರೆಗೂ ಇರಲಿದೆ. ಟೊಮೇಟೊ ಧಾರಣೆ ಸದ್ಯಕ್ಕೆ ಪ್ರತಿ ಕೆಜಿಗೆ ಕೋಲಾರದ ಮಾರುಕಟ್ಟೆಯಲ್ಲಿಯೇ 120ರಿಂದ 140 ರೂ.ವರೆಗೂ ಇದೆ. ಇಷ್ಟು ಮೊತ್ತದಲ್ಲಿ  ಖರೀದಿಸಿ ಅವುಗಳನ್ನು ದೇಶದ ಮೂಲೆ ಮೂಲೆಗೆ ರವಾನಿಸಿ 80 ರೂ. ಕೆಜಿ ದರದಲ್ಲಿ ಪೂರೈಸುವುದು ಅಸಾಧ್ಯ ಎನ್ನುತ್ತಾರೆ ಟೊಮೇಟೊ ಮಾರುಕಟ್ಟೆ ವರ್ತಕರು.

ಇತ್ತೀಚೆಗೆ ಎನ್‌ಸಿಸಿಎಫ್‌ (ನ್ಯಾಷನಲ್‌ ಕೋ – ಆಪರೇಟಿವ್‌ ಕನ್ಸೂಮರ್‌ ಫೆಡರೇಷನ್‌ ಆಫ್‌ ಇಂಡಿಯಾ ಲಿ.) ಕೋಲಾರ ಮಾರುಕಟ್ಟೆಯಿಂದ ಪ್ರತಿ ಬಾಕ್ಸ್‌ಗೆ 112 ರೂ. ಗಳಿಗೆ ಎನ್‌ಸಿಸಿಎಫ್ ಖರೀದಿಸಿತ್ತು. ಆದರೆ ಸಾಗಣೆಗೆ ಅಣಿಗೊಳಿಸುವಷ್ಟರಲ್ಲಿ ಪ್ರತಿ ಕೆಜಿಗೆ 134 ರೂ. ಗೆ ಏರಿತ್ತು. ಈ ದುಬಾರಿ ಟೊಮೇಟೊವನ್ನು ಬೇರೆ ಮಹಾ ನಗರಗಳಿಗೆ ಸಾಗಿಸಿ ಪ್ರತಿ ಕೆಜಿಗೆ 40ರಿಂದ 50 ರೂ.ನಷ್ಟ ಮಾಡಿಕೊಂಡು 80 ರೂ. ಗೆ ಮಾರುವುದು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೋಲಾರ ಮಾರುಕಟ್ಟೆಯಲ್ಲಿ ಹರಾಜಾಗು ತ್ತಿರುವ ಟೊಮೇಟೊಗೆ ವಿವಿಧ ನಗರಗಳಲ್ಲಿ ಬೇಡಿಕೆ ಇದ್ದು,  ಬಾಂಗ್ಲಾ, ಶ್ರೀಲಂಕಾ, ಪಾಕಿಸ್ಥಾನ ಇತರ ರಾಷ್ಟ್ರಗಳಿಗೆ ಕಳುಹಿಸುತ್ತಿಲ್ಲ.

ಕೋಲಾರ ಮಾರುಕಟ್ಟೆಗೆ ರವಿವಾರ ಕೇವಲ 10,825 ಕ್ವಿಂಟಾಲ್‌ ಟೊಮೇಟೊ ಅವಕವಾಗಿತ್ತು. ಸೋಮವಾರ ಇದರ ಪ್ರಮಾಣ 9500 ಕ್ವಿಂಟಾಲ್‌ಗೆ ಕುಸಿದಿತ್ತು. 2022ರ ಜುಲೈ ನಲ್ಲಿ ಕೋಲಾರ ಮಾರುಕಟ್ಟೆಗೆ 10.50 ಲಕ್ಷ ಕ್ವಿಂಟಾಲ್‌ ಟೊಮೇಟೊಆವಕವಾಗಿತ್ತು. 2021, 2019ರ ಸಾಲಿನಲ್ಲಿ ಆವಕದ ಪ್ರಮಾಣ ಇದರ ಮೂರು ಪಟ್ಟು ಹೆಚ್ಚಾಗಿತ್ತು ಎಂಬುದನ್ನು ಗಮನಿಸಿದರೆ ಟೊಮೇಟೊಗೆ ಐತಿಹಾಸಿಕ ಧಾರಣೆ ಯಾಕೆ ಸಿಗುತ್ತಿದೆ ಎಂಬುದು ಅರಿವಾಗುತ್ತದೆ.

ಮಾರುಕಟ್ಟೆಯಲ್ಲಿನ ಧಾರಣೆಯನ್ನು ಕಂಡು ಹಲವು ರೈತರು ಮತ್ತೆ ಟೊಮೇಟೊ ಬೆಳೆಗೆ ಸಜ್ಜಾಗುತ್ತಿದ್ದಾರೆ. ಈ ಬೆಳೆಗೆ ಸುಮಾರು 3 ತಿಂಗಳು ಬೇಕು. ಈಗಾಗಲೇ ನಾಟಿ ಮಾಡಿರುವ ಬೆಳೆ 15-20 ದಿನಗಳ ಬಳಿಕ ಆರಂಭವಾಗಲಿದೆ. ಹಾಗಾಗಿ ಈಗಿನ ಧಾರಣೆ ಇನ್ನೂ ಒಂದೆರೆಡು ತಿಂಗಳು ಮುಂದುವರಿಯುವ ಸಾಧ್ಯತೆ ಇದೆ. ದೇಶದ ಮತ್ತೂಂದು ದೊಡ್ಡ ಟೊಮೇಟೊ ಮಾರುಕಟ್ಟೆಯಾದ ಮಹಾರಾಷ್ಟ್ರದ ನಾಸಿಕ್‌ ಮಾರುಕಟ್ಟೆ ಆಗಸ್ಟ್‌ನಲ್ಲಿ ಆರಂಭವಾಗುತ್ತಿತ್ತು. ಆದರೆ ಆ ಭಾಗದಲ್ಲಿ ಮಳೆ ಹೆಚ್ಚಾಗಿರುವುದದರಿಂದ ಈ ಬಾರಿ ನಾಸಿಕ್‌ ಮಾರುಕಟ್ಟೆ ವಹಿವಾಟು ನಡೆಸುವುದು ಅನುಮಾನ ಎನ್ನಲಾಗುತ್ತಿದೆ.

ಮುಂದಿನ ದಿನಗಳಲ್ಲೂ ಕೋಲಾರದಲ್ಲಿ ನಗಳಲ್ಲಿಯೂ ಕೋಲಾರ ಜಿಲ್ಲೆಯಲ್ಲಿ ಒಣ ಹವೆಯೇ ಮುಂದುವರಿದು ಈಗ ನಾಟಿ ಮಾಡಿದ ಬೆಳೆ ಭರ್ಜರಿ ಫಸಲು ನೀಡಿದಾಗ ಮಾತ್ರವೇ ಧಾರಣೆ ನಿಯಂತ್ರಣಕ್ಕೆ ಬರಬಹುದು. ಕೇವಲ ಶೇ.25ರಷ್ಟು ರೈತರು ಮಾತ್ರವೇ ಟೊಮೇಟೊ ಬೆಳೆದಿದ್ದು, ಈ ಪೈಕಿ ಶೇ.25ರಿಂದ 30ರಷ್ಟು  ಮಾತ್ರವೇ ಗುಣಮಟ್ಟದ ಫಸಲು ಸಿಗುವಂತಾದರೆ ಈಗಿನ ಪರಿಸ್ಥಿತಿಯೇ ರುವ ಪರಿಸ್ಥಿತಿಯೇ ಮುಂದಿನ ತಿಂಗಳಲ್ಲೂ ಕಾಣಬಹುದು.

ಜುಲೈಯಲ್ಲಿ 10.50 ಲಕ್ಷ ಕ್ವಿಂಟಾಲ್‌ ಆವಕವಾಗುವಲ್ಲಿ ಕೇವಲ 10 ಸಾವಿರ ಕ್ವಿಂಟಾಲ್‌ಗಿಂತಲೂ ಕಡಿಮೆ  ಪ್ರಮಾಣ ಕೋಲಾರ ಮಾರುಕಟ್ಟೆಗೆ ಅವಕವಾಗುತ್ತಿದೆ. ಮಳೆ ಕಾರಣ ನಾಸಿಕ್‌ ಮಾರುಕಟ್ಟೆ ಆರಂಭ ತಡವಾಗುತ್ತಿದೆ. ಬಿಳಿ ನೊಣ ಮತ್ತು ಎಲೆ ಮುದುರು ರೋಗದಿಂದ ಟೊಮೇಟೊ ಉತ್ಪನ್ನ ಕಡಿಮೆಯಾಗಿದ್ದು, ಇನ್ನೂ 2-3 ತಿಂಗಳು ಆವಕದಲ್ಲಿ ಸುಧಾರಣೆ ಕಾಣುವುದು ಕಷ್ಟ.

-ವಿಜಯಲಕ್ಷ್ಮೀ,   ಕಾರ್ಯದರ್ಶಿ,
ಕೋಲಾರ ಎಪಿಎಂಸಿ ಮಾರುಕಟ್ಟೆ

– ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

10

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

High-Court

Kolar: ಬಾಲಕಿಯರ ಖಾಸಗಿ ಫೋಟೋ ತೆಗೆದ ಶಿಕ್ಷಕ; ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.