ಕಯಾಕಿಂಗ್ ದೋಣಿ ಬಳಸಿ ದುರಸ್ತಿ: ನೀರಿನ ನಡುವೆ ತುಂಡಾಗಿ ಬಿದ್ದ ವಿದ್ಯುತ್ ತಂತಿ
Team Udayavani, Jul 18, 2023, 6:53 AM IST
ಕೋಟ: ಕೋಟ ಬೆಟ್ಲಕ್ಕಿ ಹಡೋಲಿನಲ್ಲಿ ತುಂಬಿದ ನೀರಿನ ನಡುವೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಕೋಟ ಮೆಸ್ಕಾಂ ಸಿಬಂದಿ ಕಯಾಕಿಂಗ್‌ನ ದೋಣಿ ಬಳಸಿ ದುರಸ್ತಿಗೊಳಿಸಿದ ಘಟನೆ ಜು. 17ರಂದು ನಡೆದಿದೆ.
ಪೊದೆಗೆ ತಾಗುತ್ತಿದ್ದ ಕಾರಣ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಸುತ್ತ ನೀರು ತುಂಬಿದ್ದರಿಂದ ದುರಸ್ತಿ ಸುಲಭಸಾಧ್ಯವಾಗಿರಲಿಲ್ಲ. ಆಗ ಪಾರಂಪಳ್ಳಿಯ ದಯಾನಂದ ಸಾಲಿಯಾನ್ ಅವರ ಕಯಾಕಿಂಗ್ ಪಾಯಿಂಟ್‌ನಿಂದ 4 ದೋಣಿಗಳನ್ನು ತರಿಸಿಕೊಂಡು ಅದರ ಮೂಲಕ ನಾಲ್ಕೈದು ಮಂದಿ ಸಿಬಂದಿ ತಂತಿ ಕಡಿದುಬಿದ್ದಿದ್ದ ಸ್ಥಳಕ್ಕೆ ತೆರಳಿ ಅದರಲ್ಲೇ ನಿಂತುಕೊಂಡು ದುರಸ್ತಿ ನಡೆಸಿದರು. ಮೆಸ್ಕಾಂ ಸಿಬಂದಿಯ ಪರಿಶ್ರಮಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.
ಮೆಸ್ಕಾಂ ಸಹಾಯಕ ಎಂಜಿನಿಯರ್ ಪ್ರಶಾಂತ್ ಶೆಟ್ಟಿ, ಸಿಬಂದಿ ಚಂದ್ರಶೇಖರ್, ಹರೀಶ್, ಅರುಣ್, ಉಮರ್, ಸಂತೋಷ್, ಮೆಹಬೂಬ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.