Daily Horoscope: ನಿರಂತರ ಧನಾರ್ಜನೆ, ಉದ್ಯೋಗ ವ್ಯವಹಾರಗಳಲ್ಲಿ ವಾಕ್ಚತುರತೆಯಿಂದ ಪ್ರಗತಿ
Team Udayavani, Jul 18, 2023, 7:17 AM IST
ಮೇಷ: ದೇವತಾನುಗ್ರಹದಿಂದ ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ನೂತನ ಬಂಧು ಮಿತ್ರರ ಸಮಾಗಮ. ಅಧRಯನ ಪ್ರವೃತ್ತರಿಗೆ ಹೆಚ್ಚಿದ ಶ್ರಮ. ಕೆಲಸ ಕಾರ್ಯಗಳಲ್ಲಿ ಸಾಹಸ ಪ್ರವೃತ್ತಿಯಿಂದ ಅಭಿವೃದ್ಧಿ.
ವೃಷಭ: ವಿದೇಶ ಮೂಲದಿಂದ ಧನಾಗಮನ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಪ್ರಯಾಣ ಅಡಚಣೆಗಳ ನಿವಾರಣೆ. ಸ್ಥಾನ ಗೌರವಾದಿ ವಿಚಾರಗಳಲ್ಲಿ ಪ್ರಗತಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ.
ಮಿಥುನ: ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಗುರು ಹಿರಿಯರ ಸಹಕಾರ ಪ್ರೋತ್ಸಾಹದಿಂದ ಸ್ಥಾನ ಗೌರವಾದಿ ವೃದ್ಧಿ. ನಿರಂತರ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ವಾಕ್ಚತುರತೆಯಿಂದ ಪ್ರಗತಿ. ಮಕ್ಕಳಿಂದ ಸಂತೋಷ. ದೂರ ಪ್ರಯಾಣ ಸಂಭವ.
ಕರ್ಕ: ಗೃಹೋಪಕರಣ ವಸ್ತುಗಳಿಗಾಗಿ ಧನವ್ಯಯ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ. ಗುರು ಹಿರಿಯರೊಂದಿಗೆ ಸಂಭ್ರಮದ ಕಾಲ ಕಳೆಯುವಿಕೆ.
ಸಿಂಹ: ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ತಾಳ್ಮೆಯ ನಡೆಯಿಂದ ಸಫಲತೆ. ಗೃಹೋಪ ವಸ್ತುಗಳ ಸಂಗ್ರಹ. ಗುರು ಹಿರಿಯರ ಆರೋಗ್ಯ ಗಮನಿಸಿ.
ಕನ್ಯಾ: ಅತಿಯಾದ ದೇಹಾಯಾಸವಿರುವ ಪ್ರವೃತ್ತಿ ಸಲ್ಲದು. ಹೆಚ್ಚಿದ ಜವಾಬ್ದಾರಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ವೃದ್ಧಿ. ಉತ್ತಮ ಧನಾರ್ಜನೆ. ದಾಂಪತ್ಯ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫಲತೆ. ಧಾರ್ಮಿಕ ಕ್ಯಾರಗಳಲ್ಲಿ ತೃಪ್ತಿ.
ತುಲಾ: ಅನಿರೀಕ್ಷಿತ ಭಾಗ್ಯ ವೃದ್ಧಿ. ಗುರು ಹಿರಿಯರ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ಹೆಚ್ಚಿದ ಸಂತೋಷ. ಭೂಮಿ ವಾಹನ ಆಸ್ತಿ ವಿಚಾರಗಳಲ್ಲಿ ಪ್ರಗತಿ. ಮಿತ್ರರಿಂದ ಸಂತೋಷ ವಾರ್ತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಅವಿವಾಹಿತರಿಗೆ ವಿವಾಹ ಯೋಗ.
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಸ್ಥಾನಮಾನ ಲಭಿಸಿದ ಸಂತೋಷ. ದೂರದ ವ್ಯವಹಾರಗಳಲ್ಲಿ ಧನಾಗಮನ. ಚುರುಕುತನ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯವೈಖರಿ. ಮಿತ್ರರ ಸಹಕಾರ. ಭೂಮಿ ಆಸ್ತಿ ವಿಚಾರಗಳ ಹೆಚ್ಚಿದ ಜವಾಬ್ದಾರಿ.
ಧನು: ಉದ್ಯೋಗ ವ್ಯವಹಾರ ಕೆಲಸ ಕಾರ್ಯಗಳಲ್ಲಿ ತನ್ಮಯತೆ. ನಿರೀಕ್ಷಿತ ಫಲ. ಲಭಿಸಿದ ತೃಪ್ತಿ. ಸ್ಥಾನಮಾನ ಗೌರವ ಪ್ರಾಪ್ತಿ. ಮಕ್ಕಳಿಂದ ಸಂತೋಷ. ವಿದ್ಯೆ ಜ್ಞಾನ ಪ್ರಗತಿ. ಕೀರ್ತಿ ಸಂಪಾದನೆ. ಅನಿರೀಕ್ಷಿತ ಧನ ಸಂಚಯನ.
ಮಕರ: ಆರೋಗ್ಯ ಗಮನಿಸಿ. ದೇಹಕ್ಕೆ ಹೆಚ್ಚು ಶ್ರಮ ನೀಡದಂತೆ ಕಾರೊÂàನ್ಮುಖರಾಗಿರಿ. ಅನಿರೀಕ್ಷಿತ ಬಹು ಉದ್ಯೋಗ ಜವಾಬ್ದಾರಿ. ಸಫಲತೆ. ಜ್ಞಾನಾರ್ಜನೆಯಲ್ಲಿ ತಲ್ಲೀನತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.
ಕುಂಭ: ಮಾನಸಿಕ ನೆಮ್ಮದಿ. ಚುರುಕುತನದಿಂದ ಕೂಡಿದ ಕಾರ್ಯವೈಖರಿ. ವಿದ್ಯೆ ಜ್ಞಾನ ಸಂಬಂಧಿ ವಿಚಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಆರೋಗ್ಯದಲ್ಲಿ ಸುಧಾರಣೆ. ಗೃಹದಲ್ಲಿ ಸಂತಸದ ವಾತಾವರಣ. ಹೊಸ ಕಾರ್ಯಗಳಲ್ಲಿ ಅಭಿವೃದ್ಧಿ.
ಮೀನ: ಸಾಂಸಾರಿಕ ಸುಖ ವೃದ್ಧಿ. ಅವಿವಾಹಿತರಿಗೆ ವಿವಾಹ ಯೋಗ. ದಂಪತಿಗಳಲ್ಲಿ ಅನುರಾಗ ವೃದ್ಧಿ. ದೂರ ಪ್ರಯಾಣ. ಪಾಲುಗಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಗೃಹೋಪ ವಸ್ತುಗಳ ಸಂಗ್ರಹ. ದೂರ ಪ್ರಯಾಣ ಸಂಭವ. ನೂತನ ಮಿತ್ರರ ಸಮಾಗಮ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.