ಮಲ್ಪೆಯಲ್ಲಿ ನಾಡದೋಣಿ ಮುಳುಗಡೆ: ಐವರ ರಕ್ಷಣೆ
ಎಂಜಿನ್‌ನನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.
Team Udayavani, Jul 18, 2023, 10:15 AM IST
ಮಲ್ಪೆ: ನಾಡದೋಣಿಯೊಂದು ಮಲ್ಪೆ ಬಂದರಿನ ಸಮೀಪ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಕೇರಳ, ತಮಿಳುನಾಡು ಮೂಲದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.
ಮಂಗಳೂರಿನಿಂದ ಸೋಮವಾರ ಬೆಳಗ್ಗೆ ಹೊರಟ ಕ್ವೀನ್ ಮೇರಿ ಹೆಸರಿನ ದೋಣಿಗೆ ಸಮುದ್ರದಲ್ಲಿ ಯಾವುದೋ ವಸ್ತು
ತಗಲಿ ರಂಧ್ರ ಉಂಟಾಗಿ ನೀರು ಒಳಗೆ ಬರಲಾರಂಭಿಸಿತು.
ಮೀನುಗಾರರು ದೋಣಿಯನ್ನು ಮಲ್ಪೆ ಬಂದರಿನ ಒಳಗೆ ತರುವ ಯತ್ನ ಮಾಡಿದರಾದರೂ ಅಳಿವೆ ಬಾಗಿಲು ತಲುಪುವ
ಷ್ಟರಲ್ಲಿ ಮುಳುಗಡೆ ಹಂತಕ್ಕೆ ತಲುಪಿತು. ಸ್ಥಳೀಯರಾದ ರವಿ ಮತ್ತು ಅನಿಲ್ ಇನ್ನೊಂದು ದೋಣಿಯ ಮೂಲಕ ಧಾವಿಸಿ
ಅಪಾಯಕ್ಕೆ ಸಿಲುಕಿದ್ದವರನ್ನು ರಕ್ಷಿಸಿ ದಡ ಸೇರಿಸಿದರು.
ಸಂಜೆ ವೇಳೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ದೋಣಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ನೀರಿನ ಸೆಳೆತದಿಂದ
ಸಾಧ್ಯವಾಗಿಲ್ಲ. ಎಂಜಿನ್‌ನನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ. ಅಪಾರ ಮೌಲ್ಯದ ಮೀನು ಸಮುದ್ರಪಾಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.