ಕಾಶ್ಮೀರಿ ಹಿಂದೂಗಳ ನರಮೇಧ: ಕರಾಳ ಸತ್ಯವನ್ನು ಹೇಳಲಿದೆ ‘The Kashmir Files Unreported’
Team Udayavani, Jul 19, 2023, 3:07 PM IST
ಮುಂಬಯಿ: ಭಾರತೀಯ ಸಿನಿಮಾರಂಗದಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ ಒಂದಷ್ಟು ವಿವಾದದಿಂದಲೇ ಸದ್ದು ಮಾಡಿ ಕೋಟಿಗಟ್ಟಲೇ ಕಮಾಯಿ ಮಾಡಿತ್ತು.
ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ, ಅನಾಚಾರ, ಅತ್ಯಾಚಾರದ ಭೀಕರ ಘಟನೆಗಳ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಸಿನಿಮಾ ರಾಜಕೀಯವಾಗಿಯೂ ಸದ್ದು ಮಾಡಿದ್ದು, ಕೆಲ ವರ್ಗದ ಜನರಿಂದ ಪ್ರಶಂಸೆಗೆ ಒಳಗಾದರೆ, ಇನ್ನು ಕೆಲವರು ಸಿನಿಮಾವನ್ನು ಟೀಕಿಸಿದ್ದರು. ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮೇಲೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಸಿನಿಮಾಕ್ಕೆ ಬೆಂಬಲವಾಗಿ ಕೆಲ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು.
ಇದೀಗ “ಕಾಶ್ಮೀರ್ ಫೈಲ್ಸ್” ಸಿನಿಮಾದ ಚಿತ್ರೀಕರಣ ರೀಸರ್ಚ್ ವೇಳೆ ಸಿನಿಮಾ ತಂಡಕ್ಕೆ ಸಿಕ್ಕ ಕೆಲವೊಂದು ಸತ್ಯಾ ಘಟನೆ ಆಧಾರಿತ ಅಂಶಗಳನ್ನು ಹಾಗೂ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಗಳ ಅನುಭವಗಳನ್ನು ಹೇಳಿರುವ ಸಾಕ್ಷ್ಯಚಿತ್ರವನ್ನು ರಿಲೀಸ್ ಮಾಡಲು ವಿವೇಕ್ ಅಗ್ನಿಹೋತ್ರಿ ರೆಡಿಯಾಗಿದ್ದಾರೆ.
ಇದನ್ನೂ ಓದಿ: ಅನುಮತಿಯಿಲ್ಲದೆ ದೃಶ್ಯ ಬಳಕೆ: “ಹಾಸ್ಟೆಲ್ ಹುಡುಗರಿ”ಗೆ ಲೀಗಲ್ ನೋಟಿಸ್ ಕೊಟ್ಟ ರಮ್ಯಾ
‘The Kashmir Files Unreported’ ಎಂದು ಸಾಕ್ಷ್ಯ ಚಿತ್ರಕ್ಕೆ ಹೆಸರಿಡಲಾಗಿದೆ. ಇದು ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದ ವೇಳೆ ಚಿತ್ರತಂಡ ಸಂಗ್ರಹಿಸಿದ ಕೆಲ ಅಂಶಗಳನ್ನು ಒಳಗೊಂಡಿದೆ. ಈ ಸಂಬಂಧ ನಿರ್ದೇಶಕ ವಿವೇಕ್ ಅವರು ಟ್ರೇಲರ್ ವೊಂದನ್ನು ರಿಲೀಸ್ ಮಾಡಿದ್ದಾರೆ.
“ಹಲವಾರು ನರಮೇಧವನ್ನು ಒಪ್ಪದವರು, ಭಯೋತ್ಪಾದನೆಗೆ ಬೆಂಬಲಿಸಿದವರು ಮತ್ತು ಭಾರತದ ಶತ್ರುಗಳು ʼಕಾಶ್ಮೀರ್ ಫೈಲ್ಸ್ʼ ನ್ನು ಪ್ರಶ್ನಿಸಿದರು. ಕಾಶ್ಮೀರ ಹಿಂದೂಗಳ ಹತ್ಯಾಕಾಂಡದ ಕರಾಳ ಸತ್ಯವನ್ನು ಈಗ ನಿಮ್ಮ ಮುಂದಿಡುತ್ತಿದ್ದೇನೆ ಇದನ್ನು ಪಿಶಾಚಿಗಳು ಮಾತ್ರ ಪ್ರಶ್ನೆ ಮಾಡಬಹುದು” ಎಂದು ಟ್ವೀಟ್ ಮಾಡಿದ್ದಾರೆ.
‘The Kashmir Files Unreported’ ಡಾಕ್ಯುಮೆಂಟರಿ ಜೀ5 ನಲ್ಲಿ ಪ್ರಿಮಿಯರ್ ಆಗಲಿದೆ. ರಿಲೀಸ್ ಡೇಟ್ ಇನ್ನು ಅನೌನ್ಸ್ ಆಗಿಲ್ಲ.
ಸದ್ಯ ವಿವೇಕ್ ಅಗ್ನಿಹೋತ್ರಿ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.