ಹೈವೇ ಹೆದ್ದಾರಿಯತ್ತ ತಿರುಗಿದ ಟಾರ್ಗೆಟ್!
Team Udayavani, Jul 19, 2023, 3:45 PM IST
ರಾಮನಗರ: ಟಾರ್ಗೆಟ್ ಹೆಸರಿನಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ದಂಡ ವಿಧಿಸುತ್ತಿದ್ದ ಪೊಲೀಸ್ ಇಲಾಖೆ, ಇದೀಗ ಎಕ್ಸ್‌ಪ್ರೆಸ್ ವೇನಲ್ಲಿ ಸಂಚಾರ ನಿಯಮ ಪಾಲನೆ ಮಾಡಲು ದಂಡಾಸ್ತ್ರ ಹಿಡಿದು ನಿಂತಿದ್ದು, ನಮ್ಮ ಟಾರ್ಗೆಟ್ ಮಿಸ್ ಆಯಿತಲ್ಲ ಎಂದು ಸ್ಥಳೀಯ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ದಂಡ ಹಾಕುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬ್ಯುಜಿಯಾಗಿದೆ. ಇನ್ನು ಇಲಾಖೆ ಹಿರಿಯ ಅಧಿಕಾರಿಗಳು ಟಾರ್ಗೆಟ್ ನೀಡಿದ್ದಾರೆ ಎಂಬ ಕಾರಣ ನೀಡಿ, ರಸ್ತೆಯಲ್ಲಿ ಸಂಚರಿಸುವ ವಾಹನ ಅಡ್ಡಹಾಕಿ ದಂಡ ವಿಧಿಸುವ ಪ್ರಕ್ರಿಯೆ ನಗರ ಪ್ರದೇಶದಲ್ಲಿ ಕಡಿಮೆಯಾಗಿದ್ದು, ರಾಮನಗರ, ಚನ್ನಪಟ್ಟಣದ ಸ್ಥಳೀಯ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಇದುವರೆಗೆ ಹಳೆ ಬೆಂ-ಮೈ ಹೆದ್ದಾರಿ, ರಾಮನಗರ ಮತ್ತು ಚನ್ನಪಟ್ಟಣ ನಗರ ಪ್ರದೇಶದ ಪ್ರಮುಖ ವೃತ್ತಗಳಲ್ಲಿ ನಿಂತು ಪೊಲೀಸರು ವಾಹನ ಸವಾರರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿ ಯಾವುದಾದರೂ ಒಂದು ಕಾರಣ ಹುಡುಕಿ ದಂಡ ವಿಧಿಸುತ್ತಿದ್ದರು. ಇದನ್ನು ಪ್ರಶ್ನಿಸಿದರೆ ನಮಗೆ ಟಾರ್ಗೆಟ್‌ನೀಡಿದ್ದಾರೆ. ಮೇಲಧಿಕಾರಿಗಳ ಮಾತನ್ನು ನಾವು ಕೇಳಲೇ ಬೇಕು ಎಂದು ಪೊಲೀಸ್ ಸಿಬ್ಬಂದಿ ಪ್ರತಿಕ್ರಿಯಿಸುತ್ತಿದ್ದರು.
ದಂಡಾಸ್ತ್ರ ಪ್ರಯೋಗ: ಎಕ್ಸ್‌ಪ್ರೆಸ್ ಹೈವೇನಲ್ಲಿ ಅಪಘಾತ ಗಳ ಸಂಖ್ಯೆ ತೀವ್ರವಾಗಿರುವ ಹಿನ್ನೆಲೆ ಎಚ್ಚೆತ್ತ ಪೊಲೀಸ್ ಇಲಾಖೆ, ಹೆದ್ದಾರಿಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಹೈವೇ ಮೇಲೆ ಪೊಲೀ ಸರು ಗಮನಹರಿಸಿರುವುದು ಸ್ಥಳೀಯ ಪ್ರಯಾಣಿಕರ ಮೇಲಿನ ದಂಡದ ಟಾರ್ಗೆಟ್ ಮಿಸ್ ಆಗಿದೆ.
ಭರಪೂರಾ ಟಾರ್ಗೆಟ್: ರಸ್ತೆ ಸುರಕ್ಷತೆ ನೆಪದಲ್ಲಿ ಪೊಲೀಸ್ ಇಲಾಖೆ ಪ್ರತಿ ಪೊಲೀಸ್ ಠಾಣೆಯೂ ಭಾರತೀಯ ಮೋಟರ್ ವಾಹನ ಕಾಯಿದೆಯಡಿ ಪ್ರತಿ ತಿಂಗಳು ಇಂತಿಷ್ಟು ಪ್ರಕರಣ ದಾಖಲಿಸಬೇಕು ಎಂದು ಟಾರ್ಗೆಟ್ ನೀಡಿರುವುದು ಗುಟ್ಟಾಗಿರುವ ವಿಷಯವಲ್ಲ. ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುತ್ತದೆ ಆದರೂ ಸಾರ್ವಜನಿಕವಾಗಿ ಯಾವುದೇ ದಾಖಲೆ ಬಹಿರಂಗಗೊಳ್ಳುವುದಿಲ್ಲ. ಆದರೆ, ಆಫ್ ದಿ ರೆಕಾರ್ಡ್‌ನಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳು ಇದನ್ನು ಖಚಿತ ಪಡಿಸುತ್ತಾರೆ. ಇತ್ತೀಚಿಗೆ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಪೊಲೀಸರು ಟಾರ್ಗೆಟ್ ರೀಚ್ ಮಾಡಲು ದಂಡ ಹಾಕುತ್ತೀರಾ ಎಂದು ಬಹಿರಂಗವಾಗಿ ಹೇಳಿದ್ದರು.
ಪೊಲೀಸ್ ಇಲಾಖೆ ಮೂಲಗಳ ಪ್ರಕಾರ ಪ್ರತಿ ಪೊಲೀಸ್ ಠಾಣೆ ಪ್ರತಿದಿನ ಕನಿಷ್ಠ 10, ವಾರಕ್ಕೆ ನೂರು ಐಎಂವಿ ಪ್ರಕರಣ ದಾಖಲಿಸಬೇಕು. ಇದಕ್ಕಾಗಿ ಇಡೀ ಪೊಲೀಸ್ ಇಲಾಖೆ ರಸ್ತೆಗೆ ಇಳಿಯುತ್ತಿದೆ. ಆದರೆ, ಇದೀಗ ಹೈವೇನಲ್ಲಿ ಇಡೀ ಪೊಲೀಸ್ ತಂಡ ನಿಂತಿದ್ದು, ಎಕ್ಸ್‌ಪ್ರೆಸ್ ವೇನಲ್ಲಿ ಹೆಚ್ಚಿನ ದಂಡ ವಸೂಲಿಯಾಗುತ್ತಿದೆ. ಐಎಂವಿ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಇಲಾಖೆ ನೀಡಿರುವ ಟಾರ್ಗೆಟ್ ತಲುಪುತ್ತಿರುವ ಹಿನ್ನೆಲೆ ಪೊಲೀಸರು ಸ್ಥಳೀಯವಾಗಿ ಪ್ರಕರಣ ದಾಖಲಿಸುವುದನ್ನು ಕಡಿಮೆ ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಪೊಲೀಸರು ದಂಡದ ರಶೀದಿ ಪುಸ್ತಕ ಹಿಡಿದು ನಿಲ್ಲುತ್ತಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ.
11 ದಿನ, 2261 ಕೇಸ್, 16.50 ಲಕ್ಷ ರೂ. ದಂಡ: ರಾಮನಗರ ಜಿಲ್ಲೆಯ ಚನ್ನಪಟ್ಟಣ ಸಂಚಾರ, ರಾಮನಗರ ಸಂಚಾರ, ಬಿಡದಿ ಮತ್ತು ಕುಂಬಳ ಗೋಡು ಪೊಲೀಸ್ ಠಾಣೆ ಅಧಿಕಾರಿಗಳು ಬೆಂ-ಮೈ ಹೆದ್ದಾರಿಯಲ್ಲಿ ದಂಡ ವಿಧಿಸುತ್ತಿದ್ದಾರೆ. ಕಳೆದ 11 ದಿನಗಳಿಂದ 2261 ಪ್ರಕರಣ ದಾಖ ಲಾಗಿದ್ದು ಇದುವರೆಗೆ 16.50ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಸ್ಥಳೀಯ ಪ್ರಯಾಣಿಕರಿಂದ 2-3 ತಿಂಗಳಾದರೂ ಈ ಮೊತ್ತ ಸಂಗ್ರಹಿಸಲು ಹೆಣಗಾಡುತ್ತಿದ್ದ ಪೊಲೀಸರು ಇದೀಗ 10 ದಿನಗಳಲ್ಲಿ ಭರಪೂರ ಪ್ರಕರಣ ದಾಖಲಿಸಿ ದಂಡ ಸಂಗ್ರಹಿಸಿದ್ದಾರೆ. ಹೆದ್ದಾರಿಯತ್ತ ಪೊಲೀಸರು ಗಮನ ಕೇಂದ್ರೀಕರಿಸಿರುವ ಹಿನ್ನೆಲೆ ಸ್ಥಳೀಯ ಪ್ರಯಾಣಿಕರು ಪೊಲೀಸರು ಸಮಸ್ಯೆ ತಪ್ಪಿತು ಎಂದು ನೆಮ್ಮದಿಯಾಗಿ ತಿರುಗಾಡುತ್ತಿದ್ದಾರೆ.
ಚನ್ನಪಟ್ಟಣ ನಗರದಲ್ಲಿ 4-5 ಕಡೆ ಪೊಲೀಸರು ದಂಡ ಹಾಕುತ್ತಿದ್ದರು. ಇದೀಗ ಎಲ್ಲರ ಗಮನ ಹೆದ್ದಾರಿಯತ್ತ ಹರಿದಿದೆ. ಹೀಗಾಗಿ ನಾವು ನೆಮ್ಮದಿಯಾಗಿ ತಿರುಗಾಡುವಂತಾಗಿದೆ. ಸ್ಥಳೀಯ ಪ್ರಯಾಣಿಕರು ಪೊಲೀಸರ ದಂಡದಿಂದ ಪಾರಾಗುವಂತಾಗಿದೆ. ●ಯೋಗೀಶ್ ರಾಂಪುರ, ಸಾರ್ವಜನಿಕ
●ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.