Rajasthan; 6 ತಿಂಗಳ ಮಗು ಸೇರಿ ನಾಲ್ವರ ಭೀಕರ ಹತ್ಯೆ; ಕತ್ತು ಸೀಳಿ ಬೆಂಕಿ ಹಚ್ಚಲಾಗಿದೆ!
ಕಾನೂನು ಸುವ್ಯವಸ್ಥೆಯ ಕುರಿತು ಪ್ರಶ್ನೆ ಮಾಡಿದ ಬಿಜೆಪಿ
Team Udayavani, Jul 19, 2023, 4:00 PM IST
ಜೈಪುರ: ಜೋಧಪುರ ನಗರದಿಂದ 50 ಕಿ.ಮೀ.ದೂರದಲ್ಲಿರುವ ಓಶಿಯಾನ್ ಎಂಬ ಹಳ್ಳಿಯಲ್ಲಿ ಮಂಗಳವಾರ ರಾತ್ರಿ ಆರು ತಿಂಗಳ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದು ಶವಗಳಿಗೆ ಬೆಂಕಿ ಹಚ್ಚಿದ ಬೆಚ್ಚಿ ಬೀಳುವ ಘಟನೆ ನಡೆದಿದೆ. ಘಟನೆಯ ಬಳಿಕ ಶಂಕಿತ ಆರೋಪಿ ಕುಟುಂಬದ ಸಂಬಂಧಿಯಾಗಿರುವ 19 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಘಾತಕಾರಿ ಘಟನೆ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಪ್ರತಿಪಕ್ಷ ಬಿಜೆಪಿಯಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮುಖ್ಯಮಂತ್ರಿ ತವರು ಜಿಲ್ಲೆ ಜೋಧ್ಪುರದಲ್ಲಿ ಈ ಅಪರಾಧ ನಡೆದಿದೆ ಎಂದು ಬಿಜೆಪಿ ಒತ್ತಿ ಹೇಳಿದೆ.
ಪೊಲೀಸರ ಪ್ರಕಾರ, ಚೌರೈ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಪುನರಾಮ್ (55) ಎಂಬುವವರ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಮನೆಗೆ ಪ್ರವೇಶಿಸಿದಾಗ, ಪುನರಾಮ್, ಅವರ ಪತ್ನಿ ಭನ್ವ್ರಿ (50) ಮತ್ತು ಸೊಸೆ ಧಾಪು ಅವರ ಶವಗಳು ಸುಟ್ಟ ಸ್ಥಿತಿಯಲ್ಲಿ ಅಂಗಳದಲ್ಲಿ ಕಂಡುಬಂದವು. ಧಾಪು ದೇಹದ ಪಕ್ಕದಲ್ಲಿ ಭಯಾನಕ ಸ್ಥಿತಿಯಲ್ಲಿ ಆಕೆಯ ಆರು ತಿಂಗಳ ಮಗಳ ಅವಶೇಷಗಳಿದ್ದವು. ಈ ಕುಟುಂಬದ ಆದಾಯದ ಮೂಲ ಕೃಷಿಯಾಗಿತ್ತು ಎಂದು ತಿಳಿದುಬಂದಿದೆ.
ಹಂತಕ ನಾಲ್ವರ ಕತ್ತು ಸೀಳಿ ಕೊಲೆ ಮಾಡಿ, ನಂತರ ಶವಗಳನ್ನು ಅಂಗಳಕ್ಕೆ ಎಳೆದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೊಲೆಗಳು ವೈಯಕ್ತಿಕ ದ್ವೇಷದ ಪರಿಣಾಮವಾಗಿರಬಹುದು, ಅವರು ತಮ್ಮ ತನಿಖೆಯಲ್ಲಿ ಪ್ರತಿಯೊಂದು ಕೋನವನ್ನು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.