ಚಿಕ್ಕೋಡಿ: “ಜೈನ ಮುನಿ ಸಾವಿನ ಹಿಂದೆ ದೊಡ್ಡ ಸಂಚು’
ಇಷ್ಟೊಂದು ಭೀಕರ ಹತ್ಯೆ ಆಗಿದೆ ಎಂದರೆ ನಂಬಲು ಸಾಧ್ಯವಿಲ್ಲ
Team Udayavani, Jul 19, 2023, 5:25 PM IST
ಚಿಕ್ಕೋಡಿ: ಹಿರೇಕೋಡಿ ನಂದಿ ಪರ್ವತ ಆಶ್ರಮಕ್ಕೆ ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಘಟಕದ ಸ್ವಾಮೀಜಿಗಳ ತಂಡ ಭೇಟಿ ನೀಡಿ ಜೈನಮುನಿ ಸಮಾಧಿಗೆ ನಮಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.
ಅಖೀಲ ಭಾರತ ಸಂತ ಸಮಿತಿ ಅಧ್ಯಕ್ಷ ಮಂಗಳೂರಿನ ಓಂ ಶ್ರೀಮಠದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ,
ಜೈನ ಮುನಿ ಹತ್ಯೆ ಪ್ರಕರಣ ಹಿಂದು ಸನಾತನ ಧರ್ಮಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಇದು ಓರ್ವನಿಂದ ಆಗಿರುವ
ಘಟನೆ ಅಲ್ಲ. ಇದರ ಹಿಂದೆ ದೊಡ್ಡ ಕೈವಾಡ ಇರುವ ಶಂಕೆ ಇದೆ. ಸರ್ಕಾರ ಇದನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು
ಆಗ್ರಹಿಸಿದರು.
ಸನಾತನ ಧರ್ಮ, ಜೈನ ಮಠಗಳು ಮುಂದೆ ಬರಬಾರದು ಎನ್ನುವ ಉದ್ದೇಶದಿಂದ ಈ ರೀತಿ ಮಾಡಿರಬಹುದು. ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕು ಎಂದರೆ ಸಿಬಿಐ ತನಿಖೆ ಆಗಲೇ ಬೇಕು. ಈಗಾಗಲೇ ಗೃಹ ಸಚಿವ, ಮುಖ್ಯಮಂತ್ರಿ,
ಉಪ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಅಖಿಲ ಭಾರತ ಸಂತ ಸಮಿತಿಯಿಂದ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ.
ಈ ಹಿಂದೆ ಮಹಾರಾಷ್ಟ್ರದಲ್ಲೂ ಒಬ್ಬ ಸನ್ಯಾಸಿಯನ್ನು ಹೊಡೆದು ಹತ್ಯೆ ಮಾಡಲಾಗಿತ್ತು. ಅಲ್ಲಿ ಅಂದು ಇದ್ದದ್ದು ಇದೇ ಸರ್ಕಾರ ಎಂದು ಹೆಸರು ಹೇಳದೆ ಕಾಂಗ್ರೆಸ್ ವಿರುದ್ಧ ಸ್ವಾಮೀಜಿ ವಾಗ್ಧಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಮಾತ್ರ ಏಕೆ ಇಂತಹ ಘಟನೆಗಳು ಆಗುತ್ತವೆ. ಸ್ವಾಮೀಜಿ ಹತ್ಯೆ ಬಳಿಕ ನಿರಂತರವಾಗಿ 7 ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ. ಸರ್ಕಾರ
ಅಲ್ಪಸಂಖ್ಯಾತರ ಒಲೆ„ಸುವ ನಿಟ್ಟಿನಲ್ಲಿ ಬಹುಸಂಖ್ಯಾತರ ಕಡೆಗಣನೆ ಮಾಡಲು ಹೋಗಬಾರದು ಎಂದರು.
ರಾಜ್ಯದಲ್ಲಿ ಮಠಗಳಿಗೆ ರಕ್ಷಣೆ ನೀಡಬೇಕಾದ ಜವಾಬಾœರಿ ಸರ್ಕಾರಕ್ಕೆ ಇದೆ. ಸಮಾಜದ ಗುರುಗಳಿಗೆ ರಕ್ಷಣೆ ಇಲ್ಲ ಎಂದರೆ
ಸಂತರು ಹೇಗೆ ಮುಂದೆ ಬರಬೇಕು. ಸಂಜೆ 6 ಗಂಟೆಯ ಬಳಿಕ ಯಾವ ಸಂತರೂ ಹೊರ ಬೀಳದಂತಹ ಪರಿಸ್ಥಿತಿ ಕರ್ನಾಟಕದಲ್ಲಿ
ನಿರ್ಮಾಣ ಆಗಿದೆ. ಅದಕ್ಕೆ ಪ್ರಥಮವಾಗಿ ನಮ್ಮ ಜೈನ ಮುನಿಗಳು ಬಲಿ ಆಗಿದ್ದಾರೆ.
ಬರಿ ಹಣದ ವಿಚಾರಕ್ಕೆ ಇಷ್ಟೊಂದು ಭೀಕರ ಹತ್ಯೆ ಆಗಿದೆ ಎಂದರೆ ನಂಬಲು ಸಾಧ್ಯವಿಲ್ಲ. ಆಗಸ್ಟ್ 31 ರೊಳಗೆ ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲವಾದಲ್ಲಿ ದೊಡ್ಡ ಪ್ರಮಾಣದ ಹೋರಾಟ ಮಾಡಲು ನಾವು ಸಿದ್ದರಾಗುತ್ತೇವೆ ಎಂದ ಅವರು, ಸನಾತನ
ಸಂಸ್ಕೃತಿಯಲ್ಲಿ ಮುಂದಿರುವವರನ್ನು ಹತ್ಯೆ ಮಾಡಲು ಆ್ಯಂಟಿ ನ್ಯಾಶನಲ್ ಟೆರರಿಸ್ಟ್ ಸಂಘಟನೆ ಕೆಲಸ ಮಾಡುತ್ತಿದೆ.
ಇದು ಕರ್ನಾಟದಲ್ಲಿ ಜಾಸ್ತಿಯಾಗಿದೆ ಎಂದರು.
ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಸಾಯಿ ಈಶ್ವರ ಗುರೂಜಿ, ಸಂಘಟನಾ ಕಾರ್ಯದರ್ಶಿ
ಪರಮಾತ್ಮಜೀ ಮಹಾರಾಜ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.