ಬೇಲಿ ನಾಶ, ಜಾತಿನಿಂದನೆ: ಪೆರುವಾಜೆ ಗ್ರಾ. ಪಂ. ಸದಸ್ಯನ ವಿರುದ್ದ ಪ್ರಕರಣ ದಾಖಲು
Team Udayavani, Jul 20, 2023, 6:24 AM IST
ಸವಣೂರು: ಪೆರುವಾಜೆ ಗ್ರಾಮದ ಪೆಲತಡ್ಕ ಎಂಬಲ್ಲಿ ಬೇಲಿ ನಾಶ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿರುವುದಾಗಿ ಪೆರುವಾಜೆ ಗ್ರಾ. ಪಂ. ಸದಸ್ಯನ ವಿರುದ್ಧ ದಾಮೋದರ ನಾಯ್ಕ ಎಂಬವರು ಜು. 18ರಂದು ದೂರು ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆಲತಡ್ಕ ನಿವಾಸಿ ದಾಮೋದರ ನಾಯ್ಕ ಅವರ ಮನೆ ಸಮೀಪ ಸಾರ್ವಜನಿಕ ರಸ್ತೆ ಕಾಮಗಾರಿ ನಡೆಯುತ್ತಿದ್ದು , ಮನೆಯ ಜಮೀನಿನ ಬೇಲಿಯು ಅರ್ಧದಷ್ಟು ನಾಶವಾಗಿದ್ದರ ಬಗ್ಗೆ ವಾರ್ಡ್ ಸದಸ್ಯ ಸಚಿನ್ ರಾಜ್ ಶೆಟ್ಟಿಯವರಲ್ಲಿ ತಿಳಿಸಿದರೆನ್ನಲಾಗಿದೆ.
ಆಗ ಸಚಿನ್ ರಾಜ್ ಶೆಟ್ಟಿಯವರು ಇದನ್ನು ನಾನು ಸರಿಪಡಿಸುವುದಿಲ್ಲ ಎಂದು ಹೇಳಿದ ಬಳಿಕ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಅನಂತರ ಸಚಿನ್ ರಾಜ್ ಶೆಟ್ಟಿ ಅವರು ಜಾತಿ ನಿಂದನೆಗೈದಿದ್ದಲ್ಲದೇ ಬೆದರಿಕೆ ಹಾಕಿದ ಎಂದು ದಾಮೋದರ ನಾಯ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.