ಜು.29ರಿಂದ ಬೆಂಗಳೂರಿನಿಂದ ಕಾಶಿಯಾತ್ರೆಗಾಗಿ ವಿಶೇಷ ರೈಲು
Team Udayavani, Jul 20, 2023, 1:06 PM IST
ಬೆಂಗಳೂರು: ಉತ್ತರ ಭಾರತದ ಹೆಸರಾಂತ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವ ರೀತಿಯಲ್ಲಿ ರಾಜ್ಯದ ಯಾತ್ರಿಕರಿಗೆ ಸರ್ಕಾರ ಯೋಜನೆ ರೂಪಿಸಿದೆ.
ನಾಲ್ಕನೇ ಟ್ರಿಪ್ಪಿನ ವಿಶೇಷ ರೈಲು ಜು.29ರಂದು ಬೆಂಗಳೂರಿನಿಂದ ಹೊರಡಲಿದೆ. 2022-23ನೇ ಸಾಲಿನಿಂದ ಜಾರಿಗೆ ಬರುವಂತೆ ರಾಜ್ಯದಿಂದ ಕಾಶಿಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪ್ಯಾಕೇಜ್ ರೂಪಿಸಿ” ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ ಯೋಜನೆಯನ್ನು ಐಆರ್ ಸಿಟಿಸಿ ಮತ್ತು ಭಾರತೀಯ ರೈಲ್ವೇ ಇಲಾಖೆಯ ಸಹಯೋಗದೊಂದಿಗೆ ವಿಶೇಷ ರೈಲಿನ ಮೂಲಕ ಕೈಗೊಳ್ಳಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಯೋಜನೆಯಡಿ ಯಾತ್ರಾರ್ಥಿಗಳಿಗೆ ರೂ.20,000 ರೂ.ಗಳಂತೆ ಪ್ಯಾಕೇಜ್ ರೂಪಿಸಲಾಗಿದೆ. ಈ ಮೊತ್ತದಲ್ಲಿ ತಲಾ ರೂ.5,000 ರೂ. ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಲಿದೆ. ಉಳಿದ ಮೊತ್ತ ರೂ.15,000 ರೂ.ಗಳನ್ನು ಯಾತ್ರಾರ್ಥಿಗಳು ಪಾವತಿ ಸ ಬೇಕಾಗಿರುತ್ತದೆ. ಈ ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾ ರ್ಥಿಗಳಿಗೆ ಉಪಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಿದ್ದು, ಇದು ಒಟ್ಟು 7 ದಿನಗಳ ಪ್ರವಾಸವಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈವರೆಗೂ ಒಟ್ಟು 3 ಟ್ರಿಪ್‌ಗಳನ್ನು ಪೂರೈಸಲಾಗಿದೆ. ಸದರಿ ವಿಶೇಷ ರೈಲಿನಲ್ಲಿ ಒಟ್ಟು 1644 ಯಾತ್ರಾರ್ಥಿಗಳು ಯಾತ್ರೆ ಪೂರೈಸಿದ್ದು, ಯಾತ್ರಾರ್ಥಿಗಳಿಗೆ ಪ್ರಯಾಣದ ಒಟ್ಟು ಪ್ಯಾಕೇಜ್‌ದರ 20 ಸಾವಿರ ರೂ.ಗಳ ಪೈಕಿ ಸರ್ಕಾರದಿಂದ ತಲಾ ರೂ. 5,000 ರೂ.ಗಳಂತೆ 82.20 ರೂ.ಲಕ್ಷ ಸಹಾಯ ಧನವನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಲ್ಕನೇ ಟ್ರಿಪ್ಪಿನ ವಿಶೇಷ ರೈಲು ಜು.29ರಂದು ಬೆಂಗಳೂರಿನಿಂದ ಹೊರಡಲಿದ್ದು, ಸದರಿ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ಅಥವಾ ಐ.ಆರ್.ಸಿ.ಟಿ.ಸಿ ಪೋರ್ಟಲ್ ಮೂಲಕ ತಮ್ಮ ಟಿಕೇಟ್ ಅನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.
ಈಗ ಹೊಸದಾಗಿ ಸುಸಜ್ಜಿತ ಕೋಚ್‌ಗಳನ್ನು ಅಳವಡಿಸಲಾಗಿದೆ. ಸ್ಥಳದಲ್ಲಿಯೇ ಅಡುಗೆ ತಯಾರು ಮಾಡುವ ಅಡುಗೆ ಮನೆ ಒಳಗೊಂಡಿರುತ್ತದೆ ಹಾಗೂ ಯಾತ್ರಾರ್ಥಿಗಳ ಹಿತ ದೃಷ್ಟಿಯಿಂದ ಇಬ್ಬರು ವೈದ್ಯರು ಸಹ ಪ್ರಯಾಣಿಸಲಿದ್ದಾರೆ.ಈ ಸೌಲಭ್ಯವನ್ನು ರಾಜ್ಯದ ಎಲ್ಲಾ ಭಕ್ತಾಧಿಗಳು ಸದುಪಯೋಗ ಪಡಿಸಿಕೊಂಡು, ಕಾಶಿ ವಿಶ್ವನಾಥ ದರ್ಶನ ಪಡೆಯುವಂತೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.