Merry Christmas ಲೀಡ್ ರೋಲ್‌ಗೆ ಸೇತುಪತಿ,ಕತ್ರಿನಾ ಆಯ್ಕೆ ಯಾಕೆ? ಕಾರಣ ತಿಳಿಸಿದ ನಿರ್ದೇಶಕ
Team Udayavani, Jul 20, 2023, 3:19 PM IST
ಮುಂಬಯಿ: ವರ್ಷಾಂತ್ಯಕ್ಕೆ ರಿಲೀಸ್ ಆಗಲಿರುವ ಬಿಟೌನ್ ನ ಬಹು ನಿರೀಕ್ಷಿತ ʼಮೇರಿ ಕ್ರಿಸ್ಮಸ್ʼ ಸಿನಿಮಾದ ಪೋಸ್ಟರ್ ಇತ್ತೀಚೆಗೆ ರಿಲೀಸ್ ಆಗಿದೆ. ಸಿನಿಮಾದ ಪ್ರಮುಖ ಪಾತ್ರ ವರ್ಗದ ಆಯ್ಕೆಯೇ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಮತ್ತು ಸೌತ್ ಸ್ಟಾರ್ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ. ಇದುವರೆಗೂ ಈ ಇಬ್ಬರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಮೊದಲ ಬಾರಿಗೆ ಸೌತ್ ಸ್ಟಾರ್ ಜೊತೆ ಕತ್ರಿನಾ ಕಾಣಿಸಿಕೊಳ್ಳಲಿದ್ದಾರೆ. ಲೀಡ್ ರೋಲ್ ನಲ್ಲಿ ಕತ್ರಿನಾ ಜೊತೆ ಸೇತುಪತಿ ಅವರನ್ನುಆಯ್ದುಕೊಂಡಿದ್ದರ ಬಗ್ಗೆ ಸ್ವತಃ ಶ್ರೀರಾಮ್ ರಾಘವನ್ ಅವರು ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಸಿನಿಮಾದ ಪೋಸ್ಟರ್ ನ್ನು ಚಿತ್ರ ತಂಡ ರಿವೀಲ್ ಮಾಡಿದೆ. ವಿಂಟೇಜ್ ಸ್ಟೈಲ್ ಪೋಸ್ಟರ್ ನಲ್ಲಿ ಸೇತುಪತಿ ಹಾಗೂ ಕತ್ರಿನಾ ಕಾಣಿಸಿಕೊಂಡಿದ್ದಾರೆ. ಕುತೂಹಲಕಾರಿ ಪಾತ್ರವರ್ಗದ ಆಯ್ಕೆ ಬಗ್ಗೆ ನಿರ್ದೇಶಕ ಶ್ರೀರಾಮ್ ರಾಘವನ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
“ಇದು ಕಥೆಯ ಬೇಡಿಕೆಯಾಗಿದೆ. ನೀವು ಸಿನಿಮಾವನ್ನು ನೋಡಿದರೆ, ಈ ಸಿನಿಮಾದಲ್ಲಿ ಈ ರೀತಿಯ ಆಫ್ ಬೀಟ್ ಜೋಡಿಯನ್ನು ಯಾಕೆ ಆಯ್ಕೆ ಮಾಡಲಾಗಿದೆ ಎನ್ನುವುದು ನಿಮಗೆ ತಿಳಿಯುತ್ತದೆ. ಈ ಕಥೆಗಾಗಿ ಈ ರೀತಿಯ ಆಪ್ ಬೀಟ್ ಜೋಡಿಯ ಬಗ್ಗೆ ಯೋಚನೆ ಮಾಡುತ್ತಿದ್ದೆ. ಮೆಲ್ಬೋರ್ನ್‌ನಲ್ಲಿ ನಡೆದ ಫೆಸ್ಟ್ ವೆಲ್ ನಲ್ಲಿ ನಾನು ವಿಜಯ್ ಸೇತುಪತಿ ಅವರನ್ನು ಭೇಟಿಯಾದೆ. ಈ ಹಿಂದೆ ನಾನು ಅವರ ಕೆಲ ಸಿನಿಮಾಗಳನ್ನು ನೋಡಿದ್ದೇನೆ. ಆಗಲೇ ನಾನು ಇವರನ್ನು ನನ್ನ ಸಿನಿಮಾದ ಕಥೆಗೆ ಆಯ್ಕೆ ಮಾಡಿದರೆ ಹೇಗೆಂದು ಯೋಚಿಸಿ ಮುಂದುವರಿದೆ” ಎಂದು ಹೇಳಿದರು.
ಸಿನಿಮಾದಲ್ಲಿ ಇಬ್ಬರ ಪಾತ್ರವೂ ತುಂಬಾ ಆಸಕ್ತಿದಾಯಕವಾಗಿದೆ. ಈ ಹಿಂದೆ ಇವರಿಬ್ಬರು ಜೊತೆಯಾಗಿ ನಟಿಸಿಲ್ಲ. ಹಾಗಾಗಿ ಸಿನಿಮಾದಲ್ಲಿ ಹೊಸ ಜೋಡಿಯನ್ನು ನೋಡಿದಂತಾಗುತ್ತದೆ ಎಂದು ಹೇಳಿದರು.
ಇನ್ನು ಮೂಲತಃ ತಮಿಳಿನವರು ಆಗಿರುವ ನಿರ್ದೇಶಕ ರಾಘವನ್ ಈ ಸಿನಿಮಾವನ್ನು ತಮಿಳು ಭಾಷೆಯಲ್ಲೂ ಮಾಡಲಿದ್ದಾರೆ. ಕತ್ರಿನಾ ಹಾಗೂ ಸೇತುಪತಿ ಅವರ ಪಾತ್ರಗಳು ಬದಲಾಗುವುದಿಲ್ಲ. ಸಹ ಕಲಾವಿದರು ತಮಿಳು ವರ್ಷನ್ ನಲ್ಲಿ ಬದಲಾಗಲಿದ್ದಾರೆ. ಶೇ.95 ರಷ್ಟು ಸಿನಿಮಾ ಒಂದೇ ಆಗಲಿದೆ. ಕೆಲ ಪಾತ್ರ ಹಾಗೂ ಭಾಷೆಯ ಬದಲಾವಣೆ ಇರಲಿದೆ ಅಷ್ಟೇ ಎಂದು ನಿರ್ದೇಕರು ಹೇಳುತ್ತಾರೆ.
ಅಂದಹಾಗೆ ಇದೇ ವರ್ಷದ ಡಿಸೆಂಬರ್ 15 ರಂದು ʼʼಮೇರಿ ಕ್ರಿಸ್ಮಸ್” ತೆರೆಗೆ ಬರಲಿದೆ. ಅದೇ ದಿನ ಬಾಲಿವುಡ್ ನಲ್ಲಿ ಕರಣ್ ಜೋಹರ್ ಅವರ “ಯೋಧ” ಸಿನಿಮಾ ತೆರೆ ಕಾಣಲಿದ್ದು, ಎರಡೂ ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ ದಂಗಲ್ ಉಂಟಾಗುವ ಸಾಧ್ಯತೆಯಿದೆ.
“ಮೇರಿ ಕ್ರಿಸ್ಮಸ್” ಬಳಿಕ ಧರ್ಮೇಂದ್ರ ಹಾಗೂ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರೊಂದಿಗೆ “ಇಕ್ಕಿಸ್” ಎಂಬ ಚಿತ್ರವೊಂದನ್ನು ರಾಘವನ್ ಮಾಡಲಿದ್ದಾರೆ. ಈ ಕಥೆ ಎರಡನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಅವರ ಜೀವನಚರಿತ್ರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫಲ
Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.