‘ಹಾಸ್ಟೆಲ್ ಹುಡುಗ’ರ ಹಾಜರಿಗೆ ನೋ ಪ್ರಾಬ್ಲೆಮ್: ನಟಿ ರಮ್ಯಾ ಅರ್ಜಿ ವಜಾ ಮಾಡಿದ ಕೋರ್ಟ್
Team Udayavani, Jul 20, 2023, 4:23 PM IST
ಬೆಂಗಳೂರು: ಹೊಸಬರ ತಂಡ ನಿರ್ಮಾಣ ಮಾಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ನಟಿ ರಮ್ಯಾಗೆ ಇದೀಗ ಹಿನ್ನಡೆಯಾಗಿದೆ. ಬೆಂಗಳೂರಿನ ವಾಣಿಜ್ಯ ನ್ಯಾಯಾಲಯವು ರಮ್ಯಾ ಪರ ಅರ್ಜಿ ವಜಾ ಮಾಡಿದೆ.
‘ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಸೆಟ್ಟೇರಿದ ದಿನದಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್ ಪ್ರಸ್ತುತಪಡಿಸುತ್ತಿದೆ. ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಪ್ರಮೋಟ್ ಮಾಡಿ, ಟೀಸರ್, ಟ್ರೇಲರ್ ನಿಂದ ಗಮನ ಸೆಳೆದ ಸಿನಿಮಾ ತಂಡಕ್ಕೆ ರಮ್ಯಾ ಕೋರ್ಟ್ ವಿಚಾರ ಹಿನ್ನೆಡೆಯಾಗಿತ್ತು.
ಇದನ್ನೂ ಓದಿ:ಚಿತ್ರೋತ್ಸವಗಳಲ್ಲಿ ‘ಕೋಳಿ ಎಸ್ರು’ ಮಿಂಚು
ಆದರೆ ಇದೀಗ ಕೋರ್ಟ್ ರಮ್ಯಾ ಅರ್ಜಿಯನ್ನು ವಜಾ ಮಾಡಿದ್ದು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತಂಡಕ್ಕೆ ಗೆಲುವಾಗಿದೆ. ಹೀಗಾಗಿ ಚಿತ್ರವು ನಿಗದಿಯಂತೆ ಜುಲೈ 21ರಂದು ಬಿಡುಗಡೆಯಾಗಲಿದೆ.
ಏನಿದು ವಿವಾದ: ಮೋಹಕ ತಾರೆ ರಮ್ಯಾ ಬಹು ಸಮಯದ ಬಳಿಕ ಶೂಟಿಂಗ್ ಗೆ ಈ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಮೂಲಕ ಭಾಗಿಯಾಗಿದ್ದರು. ಈ ಚಿತ್ರದ ಪ್ರೋಮೋದಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಟ್ರೇಲರ್ ನಟಿ ರಮ್ಯಾ ಅವರನ್ನು ತೋರಿಸಲಾಗಿದೆ. ಇದೇ ಕಾರಣಕ್ಕೆ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರೋಮೋ ಶೂಟ್ ನಲ್ಲಿ ಮಾತ್ರ ನನ್ನ ದೃಶ್ಯ ಬಳಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಟ್ರೇಲರ್ ನಲ್ಲಿ ನನ್ನ ದೃಶ್ಯವನ್ನು ಅನುಮತಿಯಿಲ್ಲದೆ ಬಳಸಲಾಗಿದೆ. ಸಿನಿಮಾದಲ್ಲಿ ನನ್ನ ದೃಶ್ಯವನ್ನು ಬಳಸಬಾರದು. ಯೂಟ್ಯೂಬ್ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಈಗಾಗಲೇ ಪ್ರಸಾರವಾಗಿರುವ ವಿಡಿಯೋವನ್ನು ತೆಗೆದುಹಾಕಬೇಕು. ನನಗೆ ಇದರಿಂದ ನಷ್ಟವಾಗಿದೆ. ಇದರಿಂದ 1 ಕೋಟಿ ರೂ. ಪರಿಹಾರವನ್ನು ನೀಡುವಂತೆ ನೋಟಿಸ್ ನಲ್ಲಿ ಒತ್ತಾಯಿಸಿದ್ದು, ತನ್ನ ದೃಶ್ಯವನ್ನು ಸಿನಿಮಾದಲ್ಲಿ ಬಳಸಬಾರದು ಎಂದು ರಮ್ಯಾ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.