ಅಯೋಧ್ಯೆಯಲ್ಲಿ ಈಗಲೇ ಹೋಟೆಲ್ಗಳು ಭರ್ತಿ!
Team Udayavani, Jul 21, 2023, 8:06 AM IST
ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಿರುಸುಗೊಂಡಿರುವ ನಡುವೆಯೇ, ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಭಕ್ತಾದಿಗಳು ಸಜ್ಜುಗೊಂಡಿದ್ದಾರೆ. ಸಮಾರಂಭಕ್ಕೆ ಇನ್ನೂ 6 ತಿಂಗಳು ಇರುವಾಗಲೇ ಅಯೋಧ್ಯೆಯ ಹೋಟೆಲ್ಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.
ಇತ್ತೀಚೆಗಷ್ಟೇ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಮಂದಿರ ಕಾಮಗಾರಿ ಪ್ರಗತಿಯ ಬಗ್ಗೆ ವಿಚಾರ ಹಂಚಿಕೊಂಡಿತ್ತು. ಅಲ್ಲದೇ, 2024ರ ಜನವರಿ 15 ರಿಂದ 24ರವರೆಗೆ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ ಎಂದೂ ತಿಳಿಸಿತ್ತು. ಈ ವಿಚಾರ ಖಚಿತವಾಗುತ್ತಿದ್ದಂತೆ ಲಕ್ನೋ, ಅಯೋಧ್ಯೆಗಳಲ್ಲಿ ರೆಸ್ಟೋರೆಂಟ್ ಮತ್ತು ಹೋಟೆಲ್ಗಳಲ್ಲಿ 10-12 ದಿನಗಳ ಅವಧಿಗೆ ಅಡ್ವಾನ್ಸ್ ಬುಕ್ಕಿಂಗ್ ಮಾಡಲಾಗುತ್ತಿದೆ ಎಂದು ಹೋಟೆಲ್ಗಳ ಮಾಲೀಕರು ತಿಳಿಸಿದ್ದಾರೆ.
ದೆಹಲಿ, ಮುಂಬೈ ಸೇರಿದಂತೆ ಹಲವೆಡೆಗಳಿಂದ ಟ್ರಾವೆಲ್ ಏಜೆನ್ಸಿಗಳು ವಾರಕ್ಕೆ 1,500 ರೂಂ ಬುಕ್ಕಿಂಗ್ಗಾಗಿ ಕರೆ ಮಾಡುತ್ತಿವೆ ಎಂದೂ ತಿಳಿಸಿದ್ದಾರೆ. ಇನ್ನು ಬುಧವಾರವಷ್ಟೇ ನಗರದ ವಿಭಾಗೀಯ ಕಮಿಷನರ್ ಹೋಟೆಲ್ ಮಾಲೀಕರ ಜತೆಗೆ ಸಭೆ ನಡೆಸಿದ್ದಾರೆ. ಸಮಾರಂಭದ ಸಂದರ್ಭದಲ್ಲಿ ಹೋಟೆಲ್ಗಳನ್ನು ಸಿಂಗರಿಸಿ, ಭಕ್ತಾದಿಗಳನ್ನು ಸ್ವಾಗತಿಸುವಂತೆ ನಿರ್ದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.