Daily Horoscope: ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಚರ್ಚೆ, ಧನಾರ್ಜನೆ ಸುಗಮ
Team Udayavani, Jul 21, 2023, 7:15 AM IST
ಮೇಷ: ಆರೋಗ್ಯದ ಕಡೆಗೆ ಗಮನವಿರಲಿ. ಉದ್ಯೋಗ ವ್ಯವಹಾರಗಳಲ್ಲಿ ಆಸಕ್ತಿ. ವಾಕ್‌ಚಾತುರ್ಯದ ಕಾರ್ಯ ವೈಖರಿ. ಅನಿರೀಕ್ಷಿತ ಧನಾಗಮನ. ದೂರದ ಬಂಧುಮಿತ್ರರ ಸಹಾಯ. ಸಂಸಾರ ಸುಖದಲ್ಲಿ ತೃಪ್ತಿ.
ವೃಷಭ: ಪ್ರಯಣದಿಂದ ದೇಹಾಯಾಸ. ದೂರದ ವ್ಯವಹಾರದಲ್ಲಿ ಪ್ರಗತಿ. ಧಾರ್ಮಿಕ ಕಾರ್ಯಗಳಿಗೆ ಕುಟುಂಬದವರಿಂದ ಪ್ರೋತ್ಸಾಹ. ನಿರೀಕ್ಷಿತ ಧನಲಾಭ. ದಾಂಪತ್ಯ ಸುಖ ಮಧ್ಯಮ. ಆರೋಗ್ಯ ಗಮನಿಸಿ.
ಮಿಥುನ: ನೂತನ ಮಿತ್ರರ ಸಹಕಾರ. ಮಾತೃಸಮಾನರಿಂದ ಸಂತೋಷ. ಆಸ್ತಿ ವ್ಯವಹಾರದಲ್ಲಿ ಅಭಿವೃದ್ಧಿ. ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಚರ್ಚೆ. ಧನಾರ್ಜನೆ ಸುಗಮ. ದಾಂಪತ್ಯ ತೃಪ್ತಿಕರ. ಜಲೋತ್ಪನ್ನಗಳಿಂದ ಲಾಭ.
ಕರ್ಕ: ಉದ್ಯೋಗ ವ್ಯವಹಾರ ಸಮರ್ಪಕ ನಿರ್ವಹಣೆಯಿಂದ ಧನ ಗೌರವ ಸಂಪಾದನೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಆಸ್ತಿ, ಗೃಹ ವಾಹನ ಸಂಬಂಧ ಖರ್ಚು. ಸ್ವಾವಲಂಬಿಗಳಾಗಿ ಕಾರ್ಯ ನಿರ್ವಹಿಸಿ.
ಸಿಂಹ: ಕೆಲಸ ಕಾರ್ಯದಲ್ಲಿ ತಲ್ಲೀನತೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಬೇಸರ. ಸಂಪಾದನೆ. ಗೃಹೋಪಯೋಗಿ ವಸ್ತುಗಳ ಖರೀದಿ. ಗುರು ಹಿರಿಯರಿಂದ ಸಹಾಯ ಸಾಧ್ಯ. ವೈರಿಯ ದಮನ. ಸಂಬಂಧಿಕರೊಂದಿಗೆ ಸೌಹಾರ್ದತೆಯಿಂದಿರಿ.
ಕನ್ಯಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ದೂರ ಪ್ರಯಾಣ ಸಂಭವ. ದೂರದ ವ್ಯವಹಾರದಲ್ಲಿ ಪ್ರಗತಿ. ಅಧ್ಯಯನಶೀಲರಿಗೆ ವಿಪುಲ ಅವಕಾಶ. ದಾಂಪತ್ಯ ಸುಖ ಮಧ್ಯಮ. ಹಣಕಾಸಿನ ಬಗ್ಗೆ ಜಾಗೃತೆ ವಹಿಸಿ. ಆರೋಗ್ಯದ ಬಗ್ಗೆ ಗಮನಿಸಿ.
ತುಲಾ: ಉತ್ತಮ ಧನಾರ್ಜನೆ. ಆರೋಗ್ಯದ ಕಡೆಗೆ ಗಮನಹರಿಸಿ. ಸತಿ-ಪತಿ ಸಹಕಾರದಿಂದ ಸಂತೋಷ. ಮಾತಿನಲ್ಲಿ ಸ್ಪಷ್ಟತೆ. ಸಹನೆ ಅಗತ್ಯ. ಮಾನಸಿಕ ಒತ್ತಡಕ್ಕೆ ಅವಕಾಶ ನೀಡದಿರಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ.
ವೃಶ್ಚಿಕ: ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ. ದೂರದ ಮಿತ್ರರೊಂದಿಗೆ ಸಮಾಗಮ. ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಗತಿ. ಯೋಚಿಸಿದಂತೆ ಕಾರ್ಯಸಿದ್ಧಿ. ಹಿರಿಯರಿಂದ ಸೂಕ್ತ ಸಲಹೆ ಮಾರ್ಗದರ್ಶನ.
ಧನು: ಆರೋಗ್ಯವನ್ನು ನಿರ್ಲಕ್ಷಿಸದಿರಿ. ನಿಯಮ ಪಾಲನೆಯಿಂದ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಧೀರ, ಶೂರರಾಗಿ ಮುನ್ನಡೆಯಿರಿ. ನಾಯಕತ್ವ ಗುಣವೃದ್ಧಿ. ಅಧಿಕ ಧನಾರ್ಜನೆ. ಸಂಸಾರ ಸುಖ ತೃಪ್ತಿಕರ.
ಮಕರ: ಧೈರ್ಯದಿಂದ ಮುನ್ನುಗ್ಗುವಿರಿ. ಕಾರ್ಯರಂಗದಲ್ಲಿ ಕೀರ್ತಿ ಸಂಪಾದನೆ. ನಿರೀಕ್ಷೆಯಂತೆ ಮರ್ಯಾದೆಯ ಗಳಿಕೆ ವೃದ್ಧಿ. ಧಾರ್ಮಿಕ ಕ್ಷೇತ್ರ ಸಂದರ್ಶನ. ದೂರದ ಮಿತ್ರರ, ಗುರುಹಿರಿಯರ ಸಹಕಾರ. ದಂಪತಿಗಳ ಅನ್ಯೋನ್ಯತೆ ವೃದ್ಧಿ.
ಕುಂಭ: ಉತ್ತಮ ಆರೋಗ್ಯ. ಬಂಧುಮಿತ್ರರ ಭೇಟಿ. ಗೃಹದಲ್ಲಿ ಸಂಭ್ರಮ. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು. ಸಂತೋಷ ವೃದ್ಧಿ. ದಾಂಪತ್ಯ ತೃಪ್ತಿಕರ. ಮಕ್ಕಳಿಂದ ಅನುರಾಗ ವೃದ್ಧಿ. ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ.
ಮೀನ: ಸಂಸಾರ ಸಹಿತ ದೀರ್ಘ ಪ್ರಯಾಣ ಸಂಭವ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆ ಮೀರಿದ ಯಶಸ್ಸು. ಧನಾದಾಯ ವೃದ್ಧಿ. ವಾಕ್ಚಾತುರ್ಯದಿಂದ ಜನರಂಜನೆ. ಆಸ್ತಿ ವ್ಯವಹಾರದಲ್ಲಿ ಮುನ್ನಡೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.