Goa: ಸಮುದ್ರ ತಟದ ರಾಜ್ಯದಲ್ಲಿ ಜಲಪಾತ ಸೊಬಗು


Team Udayavani, Jul 21, 2023, 10:23 AM IST

4-panaji

ಪಣಜಿ: ಗೋವಾ ರಾಜ್ಯ ಕೇವಲ ಬೀಚ್‌ ಪ್ರವಾಸೋದ್ಯಮ ಅಲ್ಲದೇ ಸುಂದರ ಜಲಪಾತಗಳ ಮೂಲಕವೂ ಜಗತ್ಪ್ರಸಿದ್ಧ ಪಡೆದಿದೆ. ಮಳೆಗಾಲದ ಸಂದರ್ಭದಲ್ಲಂತೂ ಇಲ್ಲಿಯ ಅತ್ಯಾಕರ್ಷಣೀಯ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಕೆಲ ದಿನಗಳ ಹಿಂದೆ ಗೋವಾದ ಕೆಲ ಜಲಪಾತಗಳಲ್ಲಿ ಪ್ರವಾಸಿಗರು ಬಿದ್ದು ಮೃತಪಟ್ಟ  ಘಟನೆಗಳ ನಂತರ ಗೋವಾ ಸರ್ಕಾರ ಅಭಯಾರಣ್ಯ ಪ್ರದೇಶ ವ್ಯಾಪ್ತಿಯ ಎಲ್ಲ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಿತ್ತು. ಆದರೆ ಇದೀಗ ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಸೇರಿದಂತೆ ಇನ್ನೂ ಕೆಲ ಜಲಪಾತಗಳನ್ನು ಹೊರತು ಪಡಿಸಿ ಕೇವಲ 14 ಜಲಪಾತಗಳಿಗೆ ಪ್ರವಾಸಿಗರು ಪ್ರವೇಶಿಸಲು ಮುಕ್ತಗೊಳಿಸಲಾಗಿದೆ. ದೂಧಸಾಗರ ಜಲಪಾತಕ್ಕೆ ನಿರ್ಬಂಧ ಮುಂದುವರೆದಿದೆ.

ಮಹದಾಯಿ ಅಭಯಾರಣ್ಯದಲ್ಲಿ ಬರುವ ಸತ್ತರಿ, ಪಾಳಿ, ಚರಾಯಣೆ, ಗೋಳಾಲಿ, ಚಿದಂಬರ, ನಾನೇಲಿ, ಉಕೀಚೆಕಡೆ ಕುಮಠಳ, ಚೋರ್ಲಾ ಘಾಟ್‌ ಮಾರ್ಗದಲ್ಲಿನ ಮಾಡಯಾನಿ ಮತ್ತು ಖಾಡೆ ಈ ಜಲಪಾತಗಳ ವೀಕ್ಷಣೆ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.ಅಂತೆಯೇ ಭಗವಾನ್‌ ಮಹಾವೀರ ಅಭಯಾರಣ್ಯದಲ್ಲಿ ಬರುವ ಮಯಡಾ ಕುಳೆ ಜಲಪಾತ, ನೇತ್ರಾವಳಿ ಅಭಯಾರಣ್ಯದಲ್ಲಿ ಬರುವ ಭಾಟಿ ನೇತ್ರಾವಳಿ, ಖೋತಿಗಾಂವ ಅಭಯಾರಣ್ಯದಲ್ಲಿ ಬರುವ ಕುಸ್ಕೆ ಖೋತಿಗಾಂವ ಈ ಜಲಪಾತಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.

ಕುಸ್ಕೆ ಫಾಲ್ಸ್‌: ಖೋತಿಗಾಂವ ಅಭಯಾರಣ್ಯದಲ್ಲಿ ಬರುವ ಕುಸ್ಕೆ ಜಲಪಾತಕ್ಕೆ ದಕ್ಷಿಣ ಗೋವಾದ ಕಾಣಕೋಣ ನಗರದಿಂದ ಖೋತಿಗಾಂವ ವನ್ಯಜೀವಿ ಅಭಯಾರಣ್ಯದ ಮೂಲಕ ಕುಸ್ಕೆ ಗ್ರಾಮದ ಮೂಲಕ ತೆರಳಬಹುದಾಗಿದೆ. ಸುಮಾರು 1.5 ಕಿ.ಮೀ ಚಾರಣದ ಮೂಲಕ ಜಲಪಾತದ ಕೆಳಭಾಗಕ್ಕೆ ಹೋಗಬಹುದು. ಇಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರ ವರೆಗೆ ಮಾತ್ರ ವೀಕ್ಷಣೆಗೆ ಅವಕಾಶವಿದೆ.

ತಾಂಬಡಿ ಸುರ್ಲಾ: ತಾಂಬಡಿ ಸುರ್ಲಾ ಜಲಪಾತವು ಗೋವಾದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ. ಇಲ್ಲಿನ ಸುಂದರ ಹಚ್ಚ ಹಸಿರಿನ ಬೆಟ್ಟಗಳ ಮಧ್ಯೆ ಸುಂದರ ಜಲಪಾತ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಈ ಜಲಪಾತ ದಟ್ಟ ಕಾಡಿನ ನಡುವೆ ಇದೆ. ಹೀಗಾಗಿ ಸ್ಥಳೀಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಉತ್ತಮ. ಒಂದೂವರೆ ಗಂಟೆಯಷ್ಟು ಇಲ್ಲಿನ ಚಾರಣ ಕೈಗೊಂಡರೆ ಇಲ್ಲಿ ತೆರಳಬಹದು. ಈ ಜಲಪಾತವು ಗೋವಾ ರಾಜಧಾನಿ ಪಣಜಿಯಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ದಟ್ಟ ಕಾಡಿನಲ್ಲಿ ಈ ಜಲಪಾತ ಇರುವುದರಿಂದ ಕಾಡುಪ್ರಾಣಿಗಳಿಂದ ಕೂಡ ಎಚ್ಚರಿಕೆ ಅಗತ್ಯ. ತಾಂಬಡಿ ಸುರ್ಲಾ ಜಲಪಾತಕ್ಕೆ ತೆರಳುವ ಮುನ್ನ ಅಲ್ಲಿಯೇ ಇರುವ ಪ್ರಸಿದ್ಧ ಏಕಶಿಲೆಯ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿದರೆ, ದೇವಸ್ಥಾನದ ಬಳಿಯಿಂದಲೇ ಜಲಪಾತಕ್ಕೆ ತೆರಳುವ ಮಾರ್ಗ ಕೂಡ ಸುಲಭವಾಗಲಿದೆ.

ಚರಾಯನೆ: ಚರಾಯನೆ ಜಲಪಾತ ಗೋವಾದ ವಾಳಪೈ ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಚಾರಣಕ್ಕೆ ಹಾಗೂ ಸಾಹಸ ಉತ್ಸಾಹಿಗಳಿಗೆ ಈ ಜಲಪಾತ ಹೇಳಿಮಾಡಿಸಿದ ಸ್ಥಳ. ಈ ಜಲಪಾತಕ್ಕೆ ತಲುಪಬೇಕಾದರೆ ಸುಂದರ ಪರಿಸರದ ಮೂಲಕ ಟ್ರೆಕ್ಕಿಂಗ್‌ ಮೂಲಕವೇ ಸಾಗಬೇಕು. ಈ ಜಲಪಾತ ಪ್ರವಾಸಿಗರನ್ನು ಮಂತ್ರಮುಗªಗೊಳಿಸುತ್ತದೆ.

ಟ್ವಿನ್‌ ಜಲಪಾತ: ಈ ಜಲಪಾತವು ಗೋವಾ ರಾಜಧಾನಿ ಪಣಜಿಯಿಂದ 29 ಕಿ.ಮೀ ದೂರದಲ್ಲಿದೆ. ಪೋಂಡಾ ನಗರದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಇದು ಪೋಂಡಾ ಸಮೀಪದ ಬೋರಿಮ್‌ನ ಶಿರಶಿರೆಮ್‌ನಲ್ಲಿದೆ.

ಮೈನಾಪಿ ಜಲಪಾತ: ಈ ಜಲಪಾತವು ಗೋವಾದ ನೇತ್ರಾವಳಿ ನಗರದ ಸಮೀಪದಲ್ಲಿದೆ. ಈ ಜಲಪಾತದ ಮಾರ್ಗವು ಅತ್ಯಂತ ಕಷ್ಟಕರವಾಗಿದೆ. ನೇತ್ರಾವಳಿ ಪಟ್ಟಣದಿಂದ ದಟ್ಟ ಕಾಡಿನ ಮೂಲಕ ಮಧ್ಯ ಮಧ್ಯ ಐದಾರು ಸಣ್ಣ ಹಳ್ಳ ಕೊಳ್ಳಗಳನ್ನು ದಾಟಿ ಸುಮಾರು ಒಂದು ತಾಸು ಚಾರಣ ಮಾಡಿ ಈ ಜಲಪಾತದ ಬಳಿ ತಲುಪಬಹುದಾಗಿದೆ.

ಭಾಟಿ ಜಲಪಾತ: ಈ ಜಲಪಾತವು ದಕ್ಷಿಣ ಗೋವಾದ ಸಾಂಗೆಮ್‌ನಲ್ಲಿದೆ. ಮಡಗಾಂವ್‌ನಿಂದ 45 ಕಿ.ಮೀ ದೂರದಲ್ಲಿದೆ. ಮುಖ್ಯ ರಸ್ತೆಯಿಂದ ಕಾಲ್ನಡಿಗೆಯಲ್ಲಿ ಸಾಗಿದರೆ ಕೇವಲ 5 ನಿಮಿಷದಲ್ಲಿ ಜಲಪಾತದ ಬಳಿ ತಲುಪಬಹುದಾಗಿದೆ.

ಮಳೆಗಾಲದ ಜಲಪಾತಗಳು ಗೋವಾ ಬೆಳಗಾವಿ ಮಾರ್ಗ ಚೋರ್ಲಾ ಘಾಟ್‌ನಲ್ಲಿ ಮಳೆಗಾಲದ ಸಂದರ್ಭದಲ್ಲಿ ಸೃಷ್ಟಿಯಾಗುವ ಹತ್ತಾರು ಸುಂದರ ಜಲಪಾತಗಳಿವೆ. ಈ ಜಲಪಾತಗಳ ವೀಕ್ಷಣೆಗೆ ಮಳೆಗಾಲದ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿನ ಹತ್ತಾರು ಜಲಪಾತಗಳು ಪ್ರವಾಸಿಗರ ಕಣ್ಮನ ಸೆಳೆಯುವುದಂತೂ ಖಂಡಿತ.

ಟಾಪ್ ನ್ಯೂಸ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.