![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 21, 2023, 11:55 AM IST
ದಾಂಡೇಲಿ : ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗು ಸುರಿಯುತ್ತಿರುವ ಮಳೆಯಿಂದಾಗಿ ದಾಂಡೇಲಿ ತಾಲ್ಲೂಕಿನಲ್ಲಿ ಮೂರು ಮನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾದ ಘಟನೆ ನಡೆದಿದೆ.
ದಾಂಡೇಲಿ ನಗರದ ಆಜಾದನಗರದ ನಿವಾಸಿ ನೂರಜಹಾನ ಅಬ್ದುಲ್ ಕರೀಂ ಸವಣೂರು ಅವರು ಮನೆಗೆ ಮಳೆಯಿಂದ ತೀವ್ರ ಹಾನಿಯಾಗಿದೆ. ನಗರದ ಪಟೇಲ್ ನಗರದಲ್ಲಿ ಫರೀದಾ ಹೈದರ ಖಾನ್ ಅತ್ತಾರ ಅವರ ಮನೆಗೂ ಮಳೆಯಿಂದ ಹಾನಿಯಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಇನ್ನೂ ಕೋಗಿಲಬನ/ಬಡಕಾನಶಿರಡಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಬರುವ ಬಡಕಾನಶಿರಡಾ ಗ್ರಾಮದಲ್ಲಿ ಯಶೋದಾ ದತ್ತತ್ರೇಯ ಮಲಿಕ್ ಎಂಬವರ ಮನೆಗೂ ತೀವ್ರ ಹಾನಿಯಾಗಿದೆ.
ಈ ಮೂರು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರ ನಿರ್ದೇಶನದಂತೆ ಗ್ರಾಮ ಲೆಕ್ಕಾಧಿಕಾರಿ ರವಿ ಕಮ್ಮಾರ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ಜಾಸ್ತಿ ಬಳಸಬೇಡ ಎಂದ ಪೋಷಕರು… ಸಿಟ್ಟಿಗೆದ್ದು ಜಲಪಾತಕ್ಕೆ ಜಿಗಿದ ಮಗಳು
You seem to have an Ad Blocker on.
To continue reading, please turn it off or whitelist Udayavani.