ಜೆಡಿಎಸ್ ನಲ್ಲಿ ನಡವಳಿಕೆ, ತೀರ್ಮಾನ ಸರಿಯಿಲ್ಲವೆಂದು ಹೊರಗೆ ಬಂದಿದ್ದೇನೆ: ಚೆಲುವರಾಯಸ್ವಾಮಿ
Team Udayavani, Jul 21, 2023, 3:39 PM IST
ಶಿವಮೊಗ್ಗ: ಕುಮಾರಸ್ವಾಮಿ ಅವರ ಪಕ್ಷದಲ್ಲಿ ನಡವಳಿಕೆ, ತೀರ್ಮಾನ ಸರಿ ಇಲ್ಲ ಎಂದು ಹೊರಗೆ ಬಂದಿದ್ದೇನೆ. ನಾನೋಬ್ಬನೇ ಅಲ್ಲ, ಹೆಗಡೆ ಕಾಲದಿಂದಲೂ ಇದು ಪ್ರಾರಂಭವಾಗಿದೆ. ಅಂದಿನಿಂದಲೂ ಪ್ರತಿ ವರ್ಷ ಹತ್ತಾರು ನಾಯಕರು ಪಕ್ಷದಿಂದ ಹೊರ ಬರುತ್ತಿದ್ದಾರೆ. ಪಕ್ಷದ ಈ ಸ್ಥಿತಿಗೆ ಅವರ ಕುಟುಂಬವೇ ಕಾರಣ. ಇದಕ್ಕೆ ಅವರ ಕುಟುಂಬವೇ ಕಾರಣ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ ಪೆನ್ ಡ್ರೈವ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಪೆನ್ ಡ್ರೈವ್ ಬಿಡುಗಡೆ ಮಾಡಲು ಯಾರು ಬೇಡ ಅಂದವರು. ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.
ಸದನದಲ್ಲಿ ಪ್ರಮುಖ ಚರ್ಚೆ ನಡೆಯುವ ವೇಳೆ ಬಿಜೆಪಿ ದೂರ ಉಳಿದಿದೆ. ಬಜೆಟ್ ಬಗ್ಗೆ ಚರ್ಚೆಯಾಗುವ ವೇಳೆ ಹೊರಗೆ ಹೋಗಿದ್ದಾರೆ. ಐಎಎಸ್ ಅಧಿಕಾರಿಗಳ ಬಳಕೆ ಕಾರಣ ಕೊಟ್ಟು, ಹೊರಗೆ ಹೋಗಿದ್ದಾರೆ. ಇದೇ ಮೊದಲ ಬಾರಿಗೆ ಅಧಿವೇಶನ ಮುಗಿದರೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ವಿಪಕ್ಷ ನಾಯಕ ಇಲ್ಲದೇ ಸದನ ನಡೆದಿದೆ. ವಿಪಕ್ಷ ನಾಯಕ ಇಲ್ಲದಿರುವುದು ರಾಷ್ಟ್ರೀಯ ಪಕ್ಷಕ್ಕೆ ಬಂದ ಗತಿಯಿದು ಎಂದರು.
ಇದನ್ನೂ ಓದಿ:ಸೌತ್ ಕೊರಿಯಾದಲ್ಲಿ ನಡೆಯುವ 25ನೇ ಅಂತರಾಷ್ಟ್ರೀಯ ಜಾಂಬೂರಿಗೆ ವಾಮಂಜೂರಿನ ರೆಚೆಲ್ ಕ್ರಾಸ್ತಾ
ವಿಧಾನಸಭಾ ಚುನಾವಣೆಯಲ್ಲಿ ಎರಡು ಪಕ್ಷ ಸೋತು ಸುಣ್ಣವಾಗಿದೆ. ಈಗಾಗಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಮುಂದಾಗಿವೆ. ಈ ಮೈತ್ರಿ ಬಗ್ಗೆ ನನಗೆ ನಂಬಿಕೆ ಇಲ್ಲ. ಕುಮಾರಸ್ವಾಮಿ ಮಾತಿನ ಮೇಲೆ ನಂಬಿಕೆ ಇಲ್ಲ. ಮೈತ್ರಿಯನ್ನು ದೇವೇಗೌಡರು ಸ್ಪಷ್ಟಪಡಿಸಬೇಕು. ಪೆನ್ ಡ್ರೈವ್ ಹೇಳಿಕೆಯಂತೆ ಮೈತ್ರಿ ವಿಚಾರದಲ್ಲಿ ಕುಮಾರಸ್ವಾಮಿ ಉಲ್ಟಾ ಹೊಡೆಯುತ್ತಾರೆ ಎಂದರು.
ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಸತ್ಯಕ್ಕೆ ದೂರವಾದುದು, ಸರಕಾರ ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ತಿಂಗಳಾಗಿದೆ. ಕಳೆದ ಸರಕಾರದ ಅವಧಿಯಲ್ಲಿ ಹೇಗೆ ವರ್ಗಾವಣೆ ಆಗಿದೆಯೋ ಅದೇ ರೀತಿ ವರ್ಗಾವಣೆ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ರೈತ ಆತ್ಮಹತ್ಯೆ ಪ್ರಕರಣ ವಿಚಾರಕ್ಕೆ ಮಾತನಾಡಿದ ಅವರು, ರಾಜ್ಯ ಸರಕಾರ ರೈತರಿಗೆ 5 ಲಕ್ಷ ರೂ ಬಡ್ಡಿ ರಹಿತ ಸಾಲ ಕೊಡುತ್ತಿದೆ. ಆ ಮೂಲಕ ರೈತರಿಗೆ ಧೈರ್ಯ ತುಂಬುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಕೇವಲ 6 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, 18 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸದನದಲ್ಲಿ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದರು.
ರಾಜ್ಯದಲ್ಲಿ 1,500 ಕೋಟಿ ರೂ ಬೆಳೆ ವಿಮೆಗೆ ಮೀಸಲಿಡಲಾಗಿದೆ. ಕೃಷಿ ಇಲಾಖೆಯಿಂದ 900 ಕೋಟಿ, ತೋಟಗಾರಿಕೆ ಇಲಾಖೆಯಿಂದ 600 ಕೋಟಿ ಮೀಸಲು ಇಡಲಾಗಿದೆ. ಬೆಳೆ ವಿಮೆಗೆ 6 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.