Dreams: ಕನಸುಗಳ ನಿಯಂತ್ರಣಕ್ಕೆ ತಲೆಯೊಳಗೆ ಚಿಪ್ ಅಳವಡಿಸಲು ಹೋಗಿ ಆಸ್ಪತ್ರೆ ಸೇರಿದ ಭೂಪ!
Team Udayavani, Jul 21, 2023, 5:13 PM IST
ಮಾಸ್ಕೋ: ಅರೆನಿದ್ರಾವಸ್ಥೆಯಲ್ಲಿ ಮನುಷ್ಯನಿಗೆ ಬೀಳುವ ಕನಸುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ಮಹಾನುಭಾವ ತನಗೆ ಕೇವಲ ಒಳ್ಳೆಯ ಕನಸುಗಳಷ್ಟೇ ಬೀಳಬೇಕು, ಕೆಟ್ಟ ಕನಸುಗಳನ್ನು ನಿಯಂತ್ರಿಸಬೇಕು ಎಂದು ಯೋಚಿಸಿ ತಲೆಗೆ ಚಿಪ್ ಅಳವಡಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾನೆ. ಆದರೆ ಅವನ ಈ ಪ್ರಯೋಗ ಅವನನ್ನೇ ಆಸ್ಪತ್ರೆ ಪಾಲಾಗುವಂತೆ ಮಾಡಿದೆ.
ರಷ್ಯಾದ ನೊವೋಸಿಬಿರ್ಸ್ಕ್ ನಗರದ 40 ವರ್ಷದ ಮೈಕೆಲ್ ರಡುಗಾ ಎಂಬವನು ಕನಸುಗಳನ್ನು ನಿಯಂತ್ರಿಸಬೇಕೆಂಬ ಯೋಜನೆಯಿಂದ ತಲೆಯೊಳಗೆ ಚಿಪ್ ಅಳವಡಿಸಲು ಯೋಚಿಸಿದ್ದ. ಅಲ್ಲದೇ ಈ ಕುರಿತು ತನ್ನ ಟ್ವಿಟರ್ ಖಾತೆಯಲ್ಲೂ ಬರೆದುಕೊಂಡಿದ್ದ. ಈ ಪ್ರಯೋಗಕ್ಕಾಗಿ ತಾನು ಯೂಟ್ಯೂಬ್‌ನಲ್ಲಿ ನ್ಯೂರೋಸರ್ಜನ್‌ಗಳು ಯಾವ ರೀತಿಯಾಗಿ ಶಸ್ತ್ರ ಚಿಕಿತ್ಸೆಗಳನ್ನು ನಡೆಸುತ್ತಾರೆ ಎಂಬ ವಿಡಿಯೋಗಳನ್ನು ನೋಡಿದ್ದೇನೆ ಎಂದು ತಿಳಿಸಿದ್ದ.
ಸುಮಾರು ಒಂದು ವರ್ಷದಿಂದಲೇ ಈ ಕುರಿತು ತಯಾರಿ ನಡೆಸುತ್ತಿದ್ದ ರಡುಗಾ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದ್ದಾನೆ. ಮೊದಲು ಯೋಜನೆಯನ್ನು ಒಬ್ಬ ಪರಿಣಿತ ನ್ಯೂರೋಸರ್ಜನ್ ಒಬ್ಬರಿಂದ ಮಾಡಿಸುವ ಯೋಜನೆ ಹಾಕಿಕೊಂಡಿದ್ದ. ಆದರೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲು ನ್ಯೂರೋಸರ್ಜನ್ ನಿರಾಕರಿಸಿದ್ದಾನೆ. ಹೀಗಾಗಿ ತಾನೇ ಸ್ವತಃ ತಲೆ ಕೊರೆಯುವ ಚಿಂತನೆ ನಡೆಸಿದ್ದಾನೆ.
ತನ್ನ ಯೋಜನೆಯನ್ನು ಪ್ರಯೋಗಿಸುವ ಉದ್ದೇಶದಿಂದ ಮೇ 17 ರಂದು ತಲೆಯನ್ನು ಕೊರೆದು ಎಲೆಕ್ಟ್ರೋಡ್ ಅಳವಡಿಸಲು ಮುಂದಾಗಿದ್ದ. ಆದರೆ ತೀವ್ರ ರಕ್ತಸ್ರಾವದ ಕಾರಣದಿಂದಾಗಿ ಆತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ತನ್ನ ಪ್ರಯೋಗಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ 40 ವರ್ಷದ ರಡುಗಾ ಆಸ್ಪತ್ರೆ ಸೇರಿದ್ದಾನೆ. ರಡುಗಾ ದೇಹದಿಂದ 1 ಲೀಟರ್‌ನಷ್ಟು ರಕ್ತ ನಷ್ಟವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸ್ಟಿಚ್ ಮಾಡಿದ, ಬ್ಯಾಂಡೇಜ್‌ಗಳಿಂದ ಸುತ್ತಿರುವ ತನ್ನ ತಲೆಯ ಚಿತ್ರ ಮತ್ತು ತಲೆಯಲ್ಲಿ ಎಲೆಕ್ಟ್ರೋಡ್ ಅಳವಡಿಸಿರುವ ಎಕ್ಸ್‌ರೇ ಫೋಟೋ ಸಮೇತ ಆತ ಮಾಡಿದ್ದ ಟ್ವೀಟ್ ಈಗ ವೈರಲ್ ಆಗಿದೆ.
ಇದನ್ನೂ ಓದಿ: Madhya Pradesh; ದನ ಬೇಕಾಬಿಟ್ಟಿ ತಿರುಗಾಡಿದ್ರೆ ಮಾಲೀಕನಿಗೆ ಚಪ್ಪಲಿಯಿಂದ 5 ತಪರಾಕಿ!
BRAIN IMPLANT FOR LUCID DREAMING
For the first time in history, we conducted direct electrical stimulation of the motor cortex of the brain during REM sleep, lucid dreams, and sleep paralysis. The results open up fantastic prospects for future dream control technologies. pic.twitter.com/qypqV6ntyV
— Michael Raduga (@MichaelRaduga) June 28, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.