ಎಮರ್ಜಿಂಗ್‌ ಏಷ್ಯಾ ಕಪ್‌ ಕ್ರಿಕೆಟ್‌: ಭಾರತ-ಪಾಕ್‌ ಫೈನಲ್‌ ಸಮರ

Team Udayavani, Jul 22, 2023, 7:30 AM IST

1-sdsa-dsa-das-dasd

ಕೊಲಂಬೊ: ಎಮರ್ಜಿಂಗ್‌ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ ಹೋರಾಟದಲ್ಲಿ ಭಾರತ ಮತ್ತು ಪಾಕಿಸ್ಥಾನ “ಎ’ ತಂಡಗಳು ಗೆಲುವು ಸಾಧಿಸಿ ಫೈನಲಿಗೇರಿವೆ. ರವಿವಾರ ನಡೆಯುವ ಫೈನಲ್‌ನಲ್ಲಿ ಈ ಎರಡು ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

ಭಾರತ “ಎ’ಗೆ ಗೆಲುವು
ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ “ಎ’ ತಂಡವು ಬಾಂಗ್ಲಾದೇಶ “ಎ’ ತಂಡವನ್ನು 51 ರನ್ನುಗಳಿಂದ ಸೋಲಿಸಲು ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ “ಎ’ ತಂಡವು ನಾಯಕ ಯಶ್‌ ಧುಲ್‌ ಅವರ ಅರ್ಧಶತಕ ಹಾಗೂ ಅಭಿಷೇಕ್‌ ಶರ್ಮ ಅವರ 34 ರನ್‌ ನೆರವಿನಿಂದ 49.1 ಓವರ್‌ಗಳಲ್ಲಿ 211 ರನ್ನಿಗೆ ಆಲೌಟಾಯಿತು. ಮಹೆದಿ ಹಸನ್‌, ತಂಝೆಮ್‌ ಹಸನ್‌ ಮತ್ತು ರಕಿಬುಲ್‌ ಹಸನ್‌ ತಲಾ ಎರಡು ವಿಕೆಟ್‌ ಕಿತ್ತರು.

ಬಾಂಗ್ಲಾದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಮೊಹಮ್ಮದ್‌ ನೈಮ್‌ ಮತ್ತು ತಂಝಿದ್‌ ಹಸನ್‌ ಮೊದಲ ವಿಕೆಟಿಗೆ 12.4 ಓವರ್‌ಗಳಲ್ಲಿ 70 ರನ್‌ ಪೇರಿಸಿದಾಗ ಬಾಂಗ್ಲಾ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಆದರೆ ಈ ಜೋಡಿ ಮುರಿದ ಬಳಿಕ ತಂಡ ಕುಸಿಯತೊಡಗಿತ್ತು. ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದರಿಂದ ಬಾಂಗ್ಲಾ 34.2 ಓವರ್‌ಗಳಲ್ಲಿ 160 ರನ್ನಿಗೆ ಆಲೌಟಾಯಿತು.

ಪಾಕಿಸ್ಥಾನಕ್ಕೆ ಜಯ
ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ಥಾನ “ಎ’ ತಂಡವು ಶ್ರೀಲಂಕಾ “ಎ’ ತಂಡವನ್ನು 60 ರನ್ನುಗಳಿಂದ ಸೋಲಿಸಿ ಫೈನಲ್‌ ಹಂತಕ್ಕೇರಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ಥಾನ “ಎ’ ತಂಡವು ಒಮೈರ್‌ ಯೂಸುಫ್ (88) ಮತ್ತು ಮೊಹಮ್ಮದ್‌ ಹ್ಯಾರಿಸ್‌ (52) ಅವರ ಅರ್ಧಶತಕದಿಂದಾಗಿ 50 ಓವರ್‌ಗಳಲ್ಲಿ 322 ರನ್‌ ಗಳಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ಅರ್ಷದ್‌ ಇಕ್ಬಾಲ್‌ ಅವರ ದಾಳಿಗೆ ಕುಸಿದ ಶ್ರೀಲಂಕಾ “ಎ’ ತಂಡವು 45.4 ಓವರ್‌ಗಳಲ್ಲಿ 262 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಅವಿಷ್ಕಾ ಫೆರ್ನಾಂಡೊ ಮತ್ತು ಸಹಾನ್‌ ಅರಚ್ಚಿಗೆ ಅವರು ತಲಾ 97 ರನ್‌ ಗಳಿಸಿದ್ದರು. ಬಿಗು ದಾಳಿ ಸಂಘಟಿಸಿದ ಅರ್ಷದ್‌ ಇಕ್ಬಾಲ್‌ ತನ್ನ 7.4 ಓವರ್‌ಗಳ ದಾಳಿಯಲ್ಲಿ 37 ರನ್ನಿಗೆ 5 ವಿಕೆಟ್‌ ಕಿತ್ತು ಗೆಲುವಿನ ರೂವಾರಿಯಾಗಿ ಮೂಡಿಬಂದರು.

ಟಾಪ್ ನ್ಯೂಸ್

Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Udupi: ವ್ಯಾಪಕ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ.. ವಿದ್ಯಾರ್ಥಿಗಳು ಸೇರಿ ಸ್ಥಳೀಯರ ರಕ್ಷಣೆ

Udupi: ಭಾರಿ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ… ವಿದ್ಯಾರ್ಥಿಗಳ ರಕ್ಷಣೆ

10

ಸಾಕುನಾಯಿ ಹುಟ್ಟುಹಬ್ಬಕ್ಕೆ 2.5 ಲಕ್ಷ ರೂ. ಮೌಲ್ಯದ ಗೋಲ್ಡ್‌ ಚೈನ್‌ ಗಿಫ್ಟ್‌ ಕೊಟ್ಟ ಮಹಿಳೆ

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Team India: How much money is given to whom by BCCI in ₹125 crore?

Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India: How much money is given to whom by BCCI in ₹125 crore?

Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?

1-paris

Paris Olympics; ಅಲ್ಡ್ರಿನ್‌, ಅಂಕಿತಾ ಧ್ಯಾನಿಗೆ ಒಲಿಂಪಿಕ್ಸ್‌ ಟಿಕೆಟ್‌

1-eweweqw

Wrestling; ವಿನೇಶ್‌ ಫೋಗಾಟ್‌ ಗೆ ಸ್ವರ್ಣ ಪದಕ

1-a-chinna

Asian ಪೆಸಿಫಿಕ್‌ ಬೆಂಚ್‌ ಪ್ರಸ್‌ ಚಾಂಪಿಯನ್‌ಶಿಪ್‌: ವಿಜಯ ಕಾಂಚನ್‌ಗೆ 2 ಚಿನ್ನ

1-a-abhay-aaa-euro

Copa America Football: ಬಲಿಷ್ಠ ಬ್ರಝಿಲ್‌ಗೆ ಉರುಳಾದ ಉರುಗ್ವೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Udupi: ವ್ಯಾಪಕ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ.. ವಿದ್ಯಾರ್ಥಿಗಳು ಸೇರಿ ಸ್ಥಳೀಯರ ರಕ್ಷಣೆ

Udupi: ಭಾರಿ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ… ವಿದ್ಯಾರ್ಥಿಗಳ ರಕ್ಷಣೆ

10

ಸಾಕುನಾಯಿ ಹುಟ್ಟುಹಬ್ಬಕ್ಕೆ 2.5 ಲಕ್ಷ ರೂ. ಮೌಲ್ಯದ ಗೋಲ್ಡ್‌ ಚೈನ್‌ ಗಿಫ್ಟ್‌ ಕೊಟ್ಟ ಮಹಿಳೆ

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.