Hindu Temple: ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಧ್ವಂಸಗೊಳಿಸಿದ ಯುವಕ, ವಿಗ್ರಹಗಳಿಗೆ ಹಾನಿ
Team Udayavani, Jul 22, 2023, 2:08 PM IST
ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿರುವ ಹಿಂದೂ ದೇವಸ್ಥಾನವನ್ನು ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಗುರುವಾರ ರಾತ್ರಿ ಬ್ರಾಹ್ಮಣ ಬಾರಿಯಾ ಜಿಲ್ಲೆಯಲ್ಲಿ 36 ವರ್ಷದ ವ್ಯಕ್ತಿಯೊಬ್ಬ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾನೆ. ಈ ಘಟನೆಯ ನಂತರ ಹಿಂದೂ ಸಮುದಾಯದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ದುರ್ಗಾ ದೇವಸ್ಥಾನ ಇಲ್ಲಿನ ನಿಯಮತ್ಪುರ ಗ್ರಾಮದಲ್ಲಿದೆ. ಆರೋಪಿ ಯಾಕೆ ದೇವಸ್ಥಾನವನ್ನು ಧ್ವಂಸಗೊಳಿಸಿದ್ದಾನೆ ಎಂಬುದು ಪೊಲೀಸರ ತನಿಖೆ ಬಳಿಕ ಗೊತ್ತಾಗಲಿದೆ.
ದೇವಸ್ಥಾನ ಧ್ವಂಸಗೊಳಿಸಿರುವ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು ಬಳಿಕ ಅಲ್ಲಿನ ಸಿಸಿಟಿವಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಲಾಯಿತು.
ಘಟನೆ ಕುರಿತು ದೇವಸ್ಥಾನದ ಅಧ್ಯಕ್ಷ ಜಗದೀಶ್ ದಾಸ್ ದೇವಸ್ಥಾನ ಧ್ವಂಸಗೊಳಿಸಿರುವುದು ಹಿಂದೂ ಸಮುದಾಯದ ಜನರಲ್ಲಿ ನೋವು ಉಂಟುಮಾಡಿದೆ ಅಲ್ಲದೆ ಆರೋಪಿ ಯುವಕನಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.
ಆರೋಪಿ ಖಲೀಲ್ ಮಿಯಾ ನಿಯಾಮತ್ಪುರ ಗ್ರಾಮದಲ್ಲಿರುವ ತನ್ನ ಸಹೋದರಿಯ ಮನೆಗೆ ಬಂದಿದ್ದ ಎನ್ನಲಾಗಿದ್ದು ಈತ ದುರ್ಗಾ ದೇವಸ್ಥಾನದ ಒಳಗಿದ್ದ ಐದರಿಂದ ಆರು ವಿಗ್ರಹಗಳನ್ನು ಒಡೆದು ಹಾಕಿದ್ದಾನೆ ಎನ್ನಲಾಗಿದೆ. ಪೊಲೀಸರು ಯುವಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Bihar: ಹನುಮಾನ್ ದೇವಾಲಯದ ಆವರಣದಲ್ಲಿ ಗೋಮಾಂಸ ಪತ್ತೆ, ಬಿಗಿ ಬಂದೋಬಸ್ತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.