ಜೀವನದಲ್ಲಿ ಜಿಗುಪ್ಸೆ: ವಿವಾಹಿತೆ ನೇಣಿಗೆ ಶರಣು
Team Udayavani, Jul 22, 2023, 4:20 PM IST
ಕುಷ್ಟಗಿ: ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ವಿವಾಹಿತೆ ಗಂಡನ ಮನೆಯಲ್ಲಿ ಶನಿವಾರ ನೇಣಿಗೆ ಶರಣಾದ ಘಟನೆ ನಡೆದಿದೆ.
ಲಕ್ಷ್ಮಿ ಪರಶುರಾಮ ಹೊನ್ನಳ್ಳಿ (20) ವರ್ಷ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು ಆಕೆಗೆ ಆಗಾಗ್ಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಹೊಟ್ಟೆ ನೋವು ಸಹಿಸದ ಲಕ್ಷ್ಮೀ ಶನಿವಾರ ಗಂಡನ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಮನೆಯ ಬೆಳಕಿಂಡಿಯ ಸರಳಿಗೆ ನೇಣು ಹಾಕಿಕೊಂಡಿದ್ದಾಳೆ.
ನಂತರ ನೇಣಿಗೆ ಶರಣಾದ ಲಕ್ಷ್ಮಿಯನ್ನು ಕುಷ್ಟಗಿ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಶವಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಹನುಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸೈ ಅಶೋಕ ಬೇವೂರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toxic: ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧವೂ ಕ್ರಮ: ಅರಣ್ಯ ಸಚಿವ ಖಂಡ್ರೆ
Sports; ‘ಟಾಪ್’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?
Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ
Voter List: ಕರಡು ಮತದಾರರ ಪಟ್ಟಿ ಪ್ರಕಟ: 221 ಕ್ಷೇತ್ರಗಳಲ್ಲಿ 5.44 ಕೋಟಿ ಮತದಾರರು
Mangaluru: ಉಪಕರಣಗಳ ಸಹಿತ ಮೊಬೈಲ್ ಟವರ್ ಕಳವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.