ಭಾರತದ ಅಮ್ಮನಿಗಾಗಿ ದುಬೈನಿಂದ ಟೊಮೆಟೊ ತಂದ ಮಗಳು!
Team Udayavani, Jul 22, 2023, 6:47 PM IST
ಬೆಂಗಳೂರು: ಹೊರದೇಶಗಳಿಂದ ನಿಮ್ಮ ಕುಟುಂಬದವರೋ, ಸ್ನೇಹಿತರೋ ಬಂದರೆ ನಿಮಗೆ ಉಡುಗೊರೆಯಾಗಿ ಏನನ್ನು ತರಬಹುದು? ಒಡವೆಯೋ, ವಸ್ತ್ರವೋ, ಸುಗಂಧ ದ್ರವ್ಯವನ್ನೋ ಅಲ್ಲವೇ? ಆದರೆ, ಇತ್ತೀಚೆಗಷ್ಟೇ ದುಬೈನಿಂದ ಭಾರತಕ್ಕೆ ಬಂದ ಮಹಿಳೆಯೊಬ್ಬರು ತಮ್ಮ ತಾಯಿಗೆ ಉಡುಗೊರೆಯಾಗಿ 10 ಕೆ.ಜಿ. ಟೊಮೆಟೊ ತುಂಬಿದ ಸೂಟ್ಕೇಸ್ ವೊಂದನ್ನು ತಂದುಕೊಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಭಾರೀ ವೈರಲ್ ಆಗಿದೆ.
ಹೌದು, ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ದಿನವೂ ಟೊಮೆಟೊ ಬಗ್ಗೆ ಒಂದಿಲ್ಲೊಂದು ಸುದ್ದಿಯಾಗುತ್ತಲೇ ಇದೆ. ಅದೇ ರೀತಿ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ವಿಷಯ ಕೂಡ ನೆಟ್ಟಿಗರ ಗಮನ ಸೆಳೆದಿದೆ. ಪೋಸ್ಟ್ ಪ್ರಕಾರ, ಬಳಕೆದಾರರ ಸಹೋದರಿ ದುಬೈನಿಂದ ರಜೆಗೆಂದು ತವರು ಮನೆಗೆ ಆಗಮಿಸುತ್ತಿದ್ದರು. ಈ ವೇಳೆ ತಾಯಿಗೆ ಏನಾದರೂ ತರಬೇಕೇ ಎಂದು ಕೇಳಿದ್ದಾರೆ.
ತಾಯಿ ಟೊಮೆಟೊ ತರುವಂತೆ ಹೇಳಿದ್ದಾರೆ. ಈ ಹಿನ್ನೆಲೆ ಮಗಳು 10 ಕೆಜಿ ಟೊಮೆಟೊ ತಂದಿದ್ದಾರೆ ಎನ್ನಲಾಗಿದೆ. ಪೋಸ್ಟ್ಗೆ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ಈ ಮಗಳಿಗೆ “ಈ ವರ್ಷದ ಅತ್ಯುತ್ತಮ ಮಗಳು’ ಪ್ರಶಸ್ತಿಯನ್ನು ನೀಡಬೇಕೆಂದು ಹೇಳಿದ್ದರೆ, ಇನ್ನೂ ಹಲವರು ಟೊಮೆಟೊ ಚಿನ್ನಕ್ಕಿಂತಲೂ ಅಮೂಲ್ಯವೆಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.