ಸುಪುಷ್ಟ ವಾಚಿಕವೇ ಕಲಾಧರ್ಮ


Team Udayavani, Jul 23, 2023, 6:40 AM IST

yakshagaan

ಯಕ್ಷಗಾನ ಬಯಲಾಟ ಮತ್ತು ತಾಳಮದ್ದಲೆ – ಈ ಎರಡೂ ಪ್ರಕಾರಗಳ ವಾಚಿಕಕ್ಕೆ ಪ್ರತ್ಯೇಕವಾದೊಂದು ಅಸ್ತಿತ್ವ ಇದೆ ಎಂದರೆ ತಪ್ಪಲ್ಲ. ತಾಳಮದ್ದಲೆಯಂತೂ ಮಾತೇ ಪ್ರಧಾನವಾದ ಯಕ್ಷಗಾನದ ಉಪ ಪ್ರಕಾರ. ಇಲ್ಲಿಯ ವಾಚಿಕವು ಮಾತುಗಳಲ್ಲಿ ಪುರಾಣ ಲೋಕ, ಪುರಾಣ ಪಾತ್ರಗಳನ್ನು ಕಟ್ಟಿಕೊಡುವುದರ ಸೌಂದರ್ಯವನ್ನು ತಾಳಮದ್ದಲೆಗಳನ್ನು ಕೇಳಿದವರೇ ಬಲ್ಲರು. ಹಾಗೆಯೇ ಯಕ್ಷಗಾನ ಬಯಲಾಟದ ವಾಚಿಕಕ್ಕೂ ಪ್ರತ್ಯೇಕವಾದ ಅಸ್ತಿತ್ವ ಇದೆ.

ಹಿಂದೆ ನಡೆಯುತ್ತಿದ್ದ ಪೂರ್ಣ ರಾತ್ರಿಯ ಯಕ್ಷಗಾನ ಬಯಲಾಟಗಳ ಒಂದೊಂದು ಪ್ರಸಂಗಗಳಲ್ಲಿ ಕೂಡ ಹತ್ತಾರು ಪಾತ್ರಗಳು ರಂಗವನ್ನೇರುತ್ತಿದ್ದವು. ಎಷ್ಟು ಸಣ್ಣ ಪಾತ್ರವೇ ಇರಲಿ; ರಂಗದ ಮೇಲೆ ತೂಕದ ಮಾತು ಆಡುವುದು ಯಕ್ಷಗಾನ ಬಯಲಾಟದ ಮೂಲಗುಣ; ಅಂತಸ್ಸತ್ವ. ಲಘು ಮಾತುಗಳಿಗೆ ರಂಗದ ಮೇಲೆ ಆಸ್ಪದವೇ ಇಲ್ಲ. ಅನುಚಿತ ಮಾತುಗಳು ಬಂದರೆ ಭಾಗವತರು ಒಂದೋ ರಂಗದಲ್ಲಿಯೇ ಬೈದಾರು ಅಥವಾ ನಿರ್ದಿಷ್ಟ ಪಾತ್ರಧಾರಿಯನ್ನು ನೆನಪಿಟ್ಟುಕೊಂಡು ಪ್ರಸಂಗವಾದ ಬಳಿಕ ಚೌಕಿಯಲ್ಲಿ ಬಳಿಗೆ ಕರೆದು ಬುದ್ಧಿಮಾತು ಹೇಳಿಯಾರು. ಅಗರಿ ಶ್ರೀನಿವಾಸ ಭಾಗವತರು, ಬಲಿಪರು, ಮಂಡೆಚ್ಚರಂತಹ ಮೇರು ಭಾಗವತರು ಹೀಗೆ ಕಲಾವಿದರ ವಾಚಿಕವನ್ನು ಬೆಳೆಸಿದ ನಿದರ್ಶನಗಳಿಗೆ ಸಾಕ್ಷಿಯಾದ ಅನೇಕರಿದ್ದಾರೆ. ಪ್ರಸ್ತುತ ಕಲಾ ವ್ಯವಸಾಯದಲ್ಲಿ ಇರುವ ಕೆಲವರಾದರೂ ಕಲಾವಿದರಿಗೆ ಇಂತಹ ಸೌಭಾಗ್ಯ ದೊರಕಿದ್ದೀತು.

ಹಾಸ್ಯಗಾರನಾದರೂ ಹಾಸ್ಯ ಲೇಪಿತ ಮಾತುಗಳಲ್ಲಿ ಅಡಕವಾದಂತೆ ಘನವಾದ ವಿಚಾರವನ್ನು ಮಂಡಿಸುವುದು ಯಕ್ಷಗಾನ ಬಯಲಾಟಕ್ಕೇನೇ ವಿಶೇಷವಾದುದು. ಇದಕ್ಕೆ ಉದಾಹರಣೆಯಾಗಿ ಮಿಜಾರು ಅಣ್ಣಪ್ಪನವರು, ವೇಣೂರು ಸುಂದರ ಆಚಾರ್ಯ, ವಿಟ್ಲ ಜೋಶಿಯವರಂಥವರನ್ನು ಸ್ಮರಿಸಿಕೊಳ್ಳ ಬಹುದು. ಇವು ಕೇವಲ ಒಂದೆರಡು ಹೆಸರುಗಳು ಮಾತ್ರ; ಪ್ರತಿಯೊಬ್ಬ ಹಾಸ್ಯಗಾರನೂ ಕಲಾವಿದನೂ ತನ್ನದೇ ಆದ ರೀತಿಯಲ್ಲಿ ಈ ರೀತಿಯ ಮಾತುಗಾರಿಕೆಯನ್ನು ಸಿದ್ಧಿಸಿಕೊಂಡವರಾಗಿದ್ದರು.

ಯಕ್ಷಗಾನ ಬಯಲಾಟದ ಮಾತುಗಾರಿಕೆಯ ಇನ್ನೊಂದು ಗಮನಾರ್ಹ ವೈಶಿಷ್ಟé ಎಂದರೆ ಪಾತ್ರಧಾರಿಯ ಔಪಚಾರಿಕ ವಿದ್ಯಾಭ್ಯಾಸಕ್ಕೂ ರಂಗದಲ್ಲಿ ಆಡುವ ಸುಪುಷ್ಟ ಕನ್ನಡದ ಮಾತುಗಳಿಗೂ ಸಂಬಂಧವೇ ಇಲ್ಲ ಎಂಬುದು. ಕರಾವಳಿಯ ಯಕ್ಷಗಾನದಲ್ಲಿ ಕಲಾವ್ಯವಸಾಯದಲ್ಲಿ ತೊಡಗಿಕೊಂಡ ಬಹುತೇಕ ಕಲಾವಿದರ ಮನೆಮಾತು ತುಳು ಎಂಬುದನ್ನು ಗಣನೆಗೆ ತೆಗೆದುಕೊಂಡರೆ ಈ ವಿಚಾರವು ಹೆಚ್ಚು ಸ್ಪಷ್ಟವಾಗಿ ಅರಿವಿಗೆ ನಿಲುಕುತ್ತದೆ. ಕರಾವಳಿಯ ಉತ್ತರ ಭಾಗ, ಉತ್ತರ ಕನ್ನಡದಲ್ಲಿ ಪ್ರಚಲಿತವಿರುವ ಬಡಗು ತಿಟ್ಟಿನ ಕಲಾವಿದರು ಬಹುತೇಕರು ಕನ್ನಡ ಮನೆಮಾತಿನವರು. ಹೀಗಾಗಿ ತೆಂಕುತಿಟ್ಟಿನ ವಿಚಾರದಲ್ಲಿ ಈ ಅಂಶ ಇನ್ನಷ್ಟು ಗಮನಾರ್ಹ.

ಈಗೊಂದು ದಶಕದ ಹಿಂದಿನವರೆಗೆ ರಂಗವನ್ನು ಅಲಂಕರಿಸುತ್ತಿದ್ದ ಅನೇಕ ಕಲಾವಿದರು ಹೆಚ್ಚು ತರಗತಿ ಕಲಿತವರಲ್ಲ. ಬಣ್ಣದ ಮಾಲಿಂಗನಂಥವರು ಶಾಲೇಗೇ ಹೋದವರಲ್ಲ. ಇಲ್ಲಿ ಬಣ್ಣದ ಮಾಲಿಂಗನವರು ಎಂಬ ಹೆಸರು ಒಂದು ತಲೆಮಾರು ಅಥವಾ ಒಂದು ಪೀಳಿಗೆಯ ಮಹಾನ್‌ ಕಲಾವಿದರನ್ನು ಹೆಸರೆತ್ತಿ ಕೊಂಡಾಡಲು ಒಂದು ಉದಾ ಹರಣೆ ಮಾತ್ರ. ಹಗಲಿನಲ್ಲಿ ಗದ್ದೆ ಉಳುಮೆ ಮಾಡುತ್ತಿದ್ದ ಮಾಲಿಂಗನವರು ಸರಿರಾತ್ರಿ ಯಲ್ಲಿ ದಶಶಿರನಾಗಿಯೋ ಶುಂಭ ನಾಗಿಯೋ ಭೀಮನಾಗಿಯೋ ಶುದ್ಧ ಕನ್ನಡದಲ್ಲಿ ಆಡುತ್ತಿದ್ದ ಮಾತುಗಳು ಸುವಾಸನೆಯ ಮಲ್ಲಿಗೆ ಹೂವು ಅರಳಿದಂತೆ ಇರುತ್ತಿದ್ದವು ಎನ್ನುವುದನ್ನು ಮರೆಯಲಾಗದು.

ಯಕ್ಷಗಾನ ಬಯಲಾಟ ಅಥವಾ ತಾಳಮದ್ದಲೆಯ ವಾಚಿಕಕ್ಕೆ ಒಂದು ಪ್ರತ್ಯೇಕ ಅಸ್ತಿತ್ವ ಇದೆ ಎಂದು ಆಗಲೇ ಹೇಳಿದ ಹಾಗೆ ಈ ಒಂದೊಂದು ಆಖ್ಯಾನಗಳ ಪ್ರದರ್ಶನವನ್ನು ಲಿಖೀತ ರೂಪಕ್ಕೆ ಇಳಿಸುವುದು ಸಾಧ್ಯವಾದರೆ ಅದು ಒಂದೊಂದು ಗ್ರಂಥವಾಗಿ ನಿಲ್ಲಬಲ್ಲಷ್ಟು ಶಕ್ತ. ಆದರೆ ಹಾಗೆ ಮಾಡಲಾಗದು. ಯಾಕೆ ಎಂದರೆ ಪ್ರತಿಯೊಂದು ಪ್ರದರ್ಶನವೂ ಇನ್ನೊಂದಕ್ಕಿಂತ ಭಿನ್ನ. ಎಷ್ಟು ಭಿನ್ನ ಎಂದರೆ, “ಲಿಖೀತ’ ಅಥವಾ “ಲಿಪಿ’ಯ ಮಿತಿ ಎಷ್ಟು ಎಂಬುದನ್ನು ಮನಗಾಣಿಸುವಷ್ಟು! ಶೇಣಿಯವರು ತಾಳಮದ್ದಲೆಯ ಒಂದು ಕೂಟದಲ್ಲಿ ರಾವಣನನ್ನು ಒಂದು ಬಗೆಯಲ್ಲಿ ಕಟೆದು ನಿಲ್ಲಿಸಿದರೆ ಇನ್ನೊಂದು ಕೂಟದಲ್ಲಿ ಇನ್ನೊಂದು ರೀತಿಯಲ್ಲಿ ಪ್ರತಿಪಾದಿಸುತ್ತಿದ್ದರು.

ಬಯಲಾಟದಲ್ಲಿ ಇರುವ ವಾಚಿಕದ ಸೀಮಿತ ಅವಕಾಶದಲ್ಲಿಯೇ ಪಾತ್ರಗಳನ್ನು ಒಂದೊಂದು ದಿನ ಒಂದೊಂದು ರೀತಿಯಲ್ಲಿ ಮಂಡಿಸುವ ಕಲಾವಿದರೂ ಹಿಂದೆ ಇದ್ದರು, ಈಗಲೂ ಇದ್ದಾರೆ.

ಮಾತೇ ಮೊದಲು, ಅಕ್ಷರ ಆ ಬಳಿಕದ್ದು. ಯಕ್ಷಗಾನ ವಾಚಿಕದ ಸುಪುಷ್ಟತೆ ಇದಕ್ಕೆ ಸ್ಪಷ್ಟ ನಿದರ್ಶನ. ಹಿಂದೆ ಆಗಿಹೋದ ಮಹಾನ್‌ ಕಲಾವಿದರು ಇದನ್ನು ಶ್ರುತಪಡಿಸಿದ್ದಾರೆ. ಕಲಾವ್ಯವಸಾಯದಲ್ಲಿ ತೊಡಗಿಸಿಕೊಂಡಿರುವ ಈಗಿನ ಕಲಾವಿದರು ಕೂಡ ಇದನ್ನು ಪಾಲಿಸಬೇಕಾದದ್ದು ಧರ್ಮ.

   ಮಧ್ಯಮ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.