ಮೌಢ್ಯತೆಯಿಂದ ವೈಜ್ಞಾನಿಕ, ವೈಚಾರಿಕತೆ ಬೆಳೆಯಲು ಸಾಧ್ಯವಿಲ್ಲ: ರಿಜ್ವಾನ್ ಬಾಷ
ಹುಲಿಕಲ್ ನಟರಾಜ್ ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ
Team Udayavani, Jul 23, 2023, 5:53 PM IST
ಕೊರಟಗೆರೆ: ಸಮಾಜದಲ್ಲಿ ಮೌಢ್ಯವು ಪಾರ್ಥೇನಿಯಂಗಿಂತಲೂ ಅಧಿಕವಾಗಿ ಬೆಳೆದು ವೈಜ್ಞಾನಿಕ, ವೈಚಾರಿಕತೆ ಬೆಳೆಯಲು ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣ ವಾಗಿದೆ. ಪೋಷಕರ ಈ ಅಂಧಾನುಕರಣೆಯಿಂದ ಈ ಪ್ರಪಂಚವನ್ನೇ ಕಾಣದ ಕಂದಮ್ಮಗಳು ಬಲಿಯಾಗುತ್ತಿವೆ. ಮೂಢನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡ ಅತಿ ಬುದ್ಧಿವಂತರು ಬಡವರ, ಕೂಲಿ ನಾಲಿ ಮಾಡುವವರ ರಕ್ತ ಹೀರಿ, ಕೈಗೆ ಸಿಕ್ಕಷ್ಟು ಹಣ ದೋಚಿ ತಮ್ಮ ತಿಜೋರಿ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯ ಹೊಸಕೆರೆ ರಿಜ್ವಾನ್ ಬಾಷ ತಿಳಿಸಿದರು.
ಕೊರಟಗೆರೆ ತಾಲೂಕಿನ ದುಡ್ಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳಲ್ಲಿ ಮಾತನಾಡಿ ಕೆಲವು ದೃಶ್ಯ ಮಾದ್ಯಮಗಳ ಅತಿರಂಜನೀಯ ಮೌಢ್ಯಾಚರಣೆ ಜಾಹಿರಾತುಗಳು ಈ ವರ್ಗದ ಜನರ ಶೋಷಣೆಗೆ ಪಣತೊಟ್ಟು ನಿಂತಿವೆ. ಮುಗ್ಧ ಮಕ್ಕಳ ಮನೋಭೂಮಿಯಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮೌಲ್ಯಗಳನ್ನು ಬಿತ್ತುವ ಪ್ರಯತ್ನ ಮಾಡಲಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂಥ ವಿಶಿಷ್ಟ ಮತ್ತು ವಿನೂತನ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ, ವೈಚಾರಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಕುಗ್ರಾಮ ದುಡ್ಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪವಾಡ ರಹಸ್ಯ ಬಯಲು ಮತ್ತು ಕವಿಗಳಿಂದ ಕವಿಗೋಷ್ಠಿ ಏರ್ಪಡಿಸಿರುವುದು ಸ್ವಾಗತಾರ್ಹ. ಕನ್ನಡ ಸಾಹಿತ್ಯ ಪರಿಷತ್ತು ಇಂಥ ಕಾರ್ಯಗಳಿಗೆ ಸ್ಪಂದಿಸಲು ಸದಾ ಸಿದ್ಧವಿರುತ್ತದೆ. ಈ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಅನುಕೂಲವಾಗಲಿ ಎಂದರು.
ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ್ ಮಾತನಾಡಿ ದುಡ್ಡನಹಳ್ಳಿ ಸರ್ಕಾರಿ ಪ್ರೌಢಶಾಲೆ ದಿನೇ ದಿನೇ ಅಭಿವೃದ್ಧಿಯಾಗುತ್ತಿದೆ. ಮುಖ್ಯ ಶಿಕ್ಷಕರು ಅತ್ಯಂತ ಶ್ರಮವಹಿಸಿ ಸಹೋದ್ಯೋಗಿಗಳೊಂದಿಗೆ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಟೊಂಕ ಕಟ್ಟಿ ನಿಂತಿರುವುದು ಇಲಾಖೆಗೆ ಹೆಮ್ಮೆ ತರುವ ವಿಷಯ. ಗುಣಮಟ್ಟದಲ್ಲೂ ಈ ಶಾಲಾ ಮಕ್ಕಳು ಪ್ರಗತಿಯನ್ನು ಸಾಧಿಸಿದ್ದಾರೆ. ಭೌತಿಕವಾಗಿ ಇಲ್ಲಿ ಮಕ್ಕಳಿಗೆ ತುಂಬಾ ಒಳ್ಳೆಯ ಕಲಿಕಾ ಪರಿಸರವಿದೆ. ಉತ್ತಮ ಶಿಕ್ಷಕ ವರ್ಗವಿದೆ. ಎಸ್.ಡಿ.ಎಂಸಿ. ಹಾಗೂ ಗ್ರಾಮಸ್ತರು ಸಹಕರಿಸಿದರೆ ಇನ್ನೂ ಒಳ್ಳೆಯ ಅಭಿವೃದ್ಧಿಯನ್ನು ಕಾಣಬಹುದೆಂದು ಅಭಿಪ್ರಾಯಪಟ್ಟರು.
ನಾಡೋಜ ಕವಿ ಶ್ರೀ.ಸತ್ಯನಾರಾಯಣ ರಾವ್ ರವರು ತಮ್ಮ ಇಳಿವಯಸ್ಸಿನಲ್ಲಿ ತನ್ನ ಶ್ರಮದ ಗಳಿಕೆಯನ್ನು ಸರ್ಕಾರಿ ಶಾಲೆಗಳಿಗೆ ವಿನಿಯೋಗಿಸುತ್ತಿರುವ ವಿಚಾರವನ್ನು ಹಂಚಿಕೊಂಡರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಬೋಧನೆ ಮಾಡುವುದರ ಮೂಲಕ ತಮ್ಮ ಸಾರ್ಥಕ ಸೇವೆ ಸಲ್ಲಿಸಬೇಕೆಂದು ಕಿವಿಮಾತು ಹೇಳಿದರು.
ಪವಾಡ ಭಂಜಕ ಹುಲಿಕಲ್ ನಟರಾಜ್ ರವರು ತಮ್ಮ ಕೈಚಳಕಗಳಿಂದ ಒಂದೊಂದೇ ಪವಾಡಗಳ ರಹಸ್ಯಗಳನ್ನು ಬಿಚ್ಚಿಡುತ್ತಾ ” ದೇಹದ ಮಡಿವಂತಿಕೆಯಿಂದ ಮನಸ್ಸಿನ ಮಡಿವಂತಿಕೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಮೂಲ ನಂಬಿಕೆಗಳಿರಲಿ, ಮೂಢ ನಂಬಿಕೆಗಳು ಬೇಡ. ಸಮಾಧಾನ, ಶಾಂತಿ-ನೆಮ್ಮದಿಗಾಗಿ ಮಾಡುವ ಯಾವುದೇ ಆಚರಣೆ ಮನುಷ್ಯನ ಮನಸ್ಸು ಮತ್ತು ದೇಹಕ್ಕೆ ತೊಂದರೆ ಕೊಡಬಾರದು. ಕಾಣದ ದೆವ್ವಗಳು ಈ ಪ್ರಪಂಚದಲ್ಲಿಲ್ಲ. ಕಾಡುವ ದೆವ್ವಗಳೇ ನಮ್ಮ ನಡುವೆ ಇದ್ದು ತೊಂದರೆ ಕೊಡುತ್ತಿವೆ. ಪಂಚಾಂಗಕ್ಕೆ ಬೆಲೆ ಕೊಡುವ ಬದಲು ಪಂಚೇಂದ್ರಿಯಗಳಿಗೆ ಬೆಲೆಕೊಡಬೇಕಿದೆ. ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಬುದ್ಧಿವಂತಿಕೆ ಹಾಗೂ ಪ್ರಜ್ಞಾವಂತಿಕೆಯನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಂದಿನ ಮಕ್ಕಳೆ ಇಂದಿನ ಪ್ರಜೆಗಳು. ಆ ಮಕ್ಕಳಲ್ಲಿ ವೈಜ್ಞಾನಿಕತೆ- ವೈಚಾರಿಕತೆ ಹೆಚ್ಚು ಹೆಚ್ಚು ಬೆಳೆಯುವಂತಾಗಲಿ. ಪಠ್ಯ ಪುಸ್ತಕಕ್ಕಿಂತ ಬದುಕಿನ ಪುಸ್ತಕಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಕೆಲಸಕ್ಕೆ ಬಾರದ ವ್ಯಕ್ತಿ, ವಸ್ತುಗಳು,ಅಪರಿಚಿತ ವ್ಯಕ್ತಿಗಳಿಂದ ಮಕ್ಕಳು ಸದಾ ಎಚ್ಚರಿಕೆಯಿಂದಿರಬೇಕು.
ಸಾಮಾಜಿಕ ಜಾಲ ತಾಣಗಳಿಗೆ ಹೆಚ್ಚು ದಾಸರಾಗಬಾರದು. ಆ ನಿಟ್ಟಿನಲ್ಲಿ ರಿಜ್ವಾನ್ ಬಾಷ ರವರು ಶಾಲೆಯ ಮಕ್ಕಳಿಗೆ ನಮ್ಮಿಂದ ಪ್ರಾಪಂಚಿಕ ಅರಿವನ್ನು ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂಸಿ.ಅಧ್ಯಕ್ಷೆ ಅನುಸೂಯಮ್ಮ, ಸದಸ್ಯರಾದ ರಾಮಲಕ್ಷ್ಮಯ್ಯ, ಲಕ್ಷ್ಮೀನಾರಾಯಣ. ಮುಖಂಡರಾದ ದಿವಾಕರ್, ಶ್ರೀಕಾಂತ್, ವಿನಯ್ ದುಡ್ಡನಹಳ್ಳಿ, ನಿವೃತ್ತ ಶಿಕ್ಷಕರಾದ ಕುಂಭಿನರಸಯ್ಯ, ಶಿಕ್ಷಣ ಸಂಯೋಜಕರಾದ ಗಂಗಾಧರ್,ಗಂಗಮ್ಮ,ಅನುಸೂಯಾ ದೇವಿ, ಸಿ.ಆರ್.ಪಿ.ಗಳಾದ ಮುತ್ತರಾಜು, ನಾಗೇಶ್,ಶಿಕ್ಷಕರಾದ ಅಶ್ವತ್ಥನಾರಾಯಣ,ಸುಜಾತ, ಅಶೋಕ್ ಪೂಜಾರ್, ಚಿಕ್ಕಪ್ಪಯ್ಯ, ಎಲ್.ಕೃಷ್ಣಪ್ಪ. ರಾಜಶೇಖರಯ್ಯ.ಟಿ. ಮಂಜುಳ ಯು.ಪ್ರಾಥಮಿಕ ಶಾಲಾ ಶಿಕ್ಷಕರಾದ ಚಿಕ್ಕರಂಗಯ್ಯ ,ಹನುಮೇಶ್, ಲೇಪಾಕ್ಷಿ, ರವಿ ಮಲ್ಲೇಶ್ ಪ್ರೌಢಶಾಲಾ ಸಿಬ್ಬಂದಿಗಳಾದ ಸತೀಶ್, ವಿನೋದಮ್ಮ, ಅಡುಗೆ ಸಿಬ್ಬಂದಿ ಗೌರಮ್ಮ, ಅಶ್ವತ್ಥಮ್ಮ, ಪುಟ್ಟಮ್ಮ, ಈರಮ್ಮ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಪೋಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.