ಜಿಮ್‌ಗೆ ಹೋಗುವ ಬದಲು ಜಮೀನಿಗೆ ಹೋಗಿ: ಚನ್ನವೀರ ಮಹಾಸ್ವಾಮೀಜಿ
Team Udayavani, Jul 23, 2023, 6:04 PM IST
ಪಿರಿಯಾಪಟ್ಟಣ: ಮನುಷ್ಯನ ಬದುಕು ಸುಂದರವಾಗಿರಬೇಕಾದರೆ ಅವನಿಗೆ ಅಕ್ಷರ ಮತ್ತು ಆರೋಗ್ಯ ಸೇವೆಗಳು ಸಮರ್ಪಕವಾಗಿ ಸಿಗುವಂತಾಗಬೇಕು ಆಗ ಮಾತ್ರ ಆತ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಹಾವೇರಿ ಜಿಲ್ಲೆ ವಿರಕ್ತಮಠದ ಮ.ನಿ.ಪ್ರ.ಚನ್ನವೀರಸ್ವಾಮೀಜಿ ನುಡಿದರು.
ಪಟ್ಟಣದ ಗೋಣಿಕೊಪ್ಪಲು ರಸ್ತೆಯ ಲೋಕೋಪಯೋಗಿ ಕಚೇರಿ ಮುಂಭಾಗದಲ್ಲಿ ಭಾನುವಾರ ನೂತನವಾಗಿ ನಿರ್ಮಾಣಗೊಂಡಿರುವ ದೀಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ರೋಗ ರುಜಿನಗಳು ಮನುಷ್ಯನಿಗೆ ಸಹಜ. ರೋಗ ಬಂದ ನಂತರ ವೈದ್ಯರನ್ನು ಕಾಣುವುದು ಇದ್ದೇ ಇರುತ್ತದೆ. ಆದರೆ ರೋಗವೇ ಬರದಂತೆ ಬದುಕು ನಡೆಸುವುದನ್ನು ಇಂದು ಎಲ್ಲರೂ ಕಲಿಯಬೇಕು. ಮುನ್ನೆಚ್ಚರಿಕೆಯಿಂದಲೇ ಆರೋಗ್ಯ ರಕ್ಷಿಸಿಕೊಳ್ಳುವುದಕ್ಕೆ ಒತ್ತು ನೀಡಬೇಕು. ಜಿಮ್‌ಗೆ ಹೋಗುವವರಿಗಿಂತಲೂ ಜಮೀನಿಗೆ ಹೋಗುವವರು ಹೆಚ್ಚು ಆರೋಗ್ಯದಿಂದ ಇದ್ದಾರೆ. ರೋಗಕ್ಕಿಂತ ಮುಖ್ಯವಾಗಿ ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಬೇಕು. ವೈದ್ಯರು ರೋಗಿಗೆ ಮಾನಸಿಕ ಸ್ಥೈರ್ಯ ತುಂಬಬೇಕು. ಕಾಯ ಸದೃಢವಾಗಿರಬೇಕು, ಮನಸ್ಸು ಪ್ರಸನ್ನವಾಗಿರಬೇಕು. ಹೃದಯ ದ್ವೇಷದಿಂದ ಮುಕ್ತವಾಗಿದ್ದಾಗ ಮಾತ್ರ ನಿಜವಾದ ಆರೋಗ್ಯ ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಇಂದು ವ್ಯಾಪಾರದ ಸರಕುಗಳಾಗಿದ್ದು, ಅಕ್ಷರ ಇವುಗಳನ್ನು ಕೊಂಡುಕೊಳ್ಳುವ ಅವಶ್ಯಕತೆ ಒದಗಿ ಬಂದಿದ್ದು, ಬಡವರಿಗೆ ನಿರೀಕ್ಷಿತ ಮಟ್ಟದಲ್ಲಿ ಇವುಗಳು ಸಿಗುತ್ತಿಲ್ಲ, ಆದ್ದರಿಂದ ಆರೋಗ್ಯ ಮತ್ತು ಶಿಕ್ಷಣ ಸೇವೆಗಳು ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು. ಮನುಷ್ಯ ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ನಿರಂತರವಾಗಿ ಆತ ತಪಾಸಣೆಗೆ ಒಳಗಾಗಬೇಕು. ಜನತೆ ಇಂದು ಹಣಕ್ಕೆ ಹೆದರುವುದಿಲ್ಲ ಬದಲಾಗಿ ಆರೋಗ್ಯಕ್ಕೆ ಹೆದರುವ ಸಂದರ್ಭ ಬಂದಿದೆ, ಹಾಗಾಗಿ ಸರ್ಕಾರ ಯಶಸ್ವಿನಿ ಯೋಜನೆಯಡಿ 80 ಲಕ್ಷ ಜನರಿಗೆ ರೂ. 70 ಸಾವಿರ ಓಪನ್ ಹಾರ್ಟ್ ಸರ್ಜರಿಗಾಗಿ ಮತ್ತು ರೂ 50 ಸಾವಿರಕ್ಕೆ ಸ್ಟಂಟ್ ಹಾಕಿಸಿಕೊಳ್ಳಲು ಧನ ಸಹಾಯ ನೀಡುತ್ತಿದೆ. ಉಳ್ಳವರು ಸಿದ್ದರಾಮಯ್ಯನವರ ಸರ್ಕಾರದ ಭಾಗ್ಯಗಳನ್ನು ಬಿಟ್ಟಿ ಭಾಗ್ಯಗಳು ಎಂದು ಗೇಲಿ ಮಾಡುತ್ತಿದ್ದಾರೆ ಆದರೆ ಇಂದ ಮೂಲ ಭೂತ ಸೌಲಭ್ಯಗಳು ಬಡವರ್ಗದ ಜನತೆಗೆ ಅಗತ್ಯ ಸೇವೆಗಳಾಗಿವೆ. ಬಡವರಿಗೆ ಇಂಥ ಸೇವೆಗಳನ್ನು ನೀಡುವುದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ ಈ ಯೋಜನೆಗಳನ್ನು ಗೇಲಿ ಮಾಡುವವರು ಸರ್ಕಾರಕ್ಕೆ ವಾಪಾಸ್ ನೀಡಬಹುದು ಎಂದರು.
ಕೆ.ಆರ್.ನಗರ ಕಾಗಿನೆಲೆ ಶಾಖ ಮಠದ ಶ್ರೀ ಶಿವಾನಂದಪುರಿ ಮಹಾಸ್ವಾಮಿಜಿ ಮಾತನಾಡಿ, ಮನುಷ್ಯನಿಗೆ ಅಧಿಕಾರ, ಸಂಪತ್ತು ಮತ್ತು ಪ್ರಸಿದ್ಧಿಯಿಂದ ಬದುಕು ಸಂಪೂರ್ಣವಾಗದು. ನಿರೋಗಿ ಕಾಯದಿಂದಲೇ ನಿಜವಾದ ಸುಖ ಸಾಧ್ಯ. ಆದ್ದರಿಂದ ಋಷಿಮುನಿಗಳು ಮತ್ತು ಶರಣರು ಬಹಳ ಹಿಂದೆಯೇ ಆರೋಗ್ಯದ ಪರಿಕಲ್ಪನೆ ಕೊಟ್ಟಿದ್ದಾರೆ. ಮನಸ್ಸಿನಿಂದ ಸದೃಢ ಮತ್ತು ದೈಹಿಕವಾಗಿ ಕಟ್ಟುಮಸ್ತಾದವನು ಮಾತ್ರ ಆರೋಗ್ಯದಿಂದ ಇರಲು ಸಾಧ್ಯ ಎಂದರು
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಆಸ್ಪತ್ರೆಗಳು ಮತ್ತು ವೈದ್ಯರು ಬಡವರಿಗೆ ಉತ್ತಮ ಆರೋಗ್ಯ ಕಲ್ಪಿಸುವುದಕ್ಕೆ ಶ್ರಮಿಸಬೇಕು. ದೇಹಕ್ಕೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಿದರೆ ಸಾಲದು. ಮನಸ್ಸಿಗೂ ಇಂದು ಹೆಚ್ಚಿನ ಚಿಕಿತ್ಸೆಗಳು ಅಗತ್ಯವಿದೆ. ದೇಹ-ಮನಸ್ಸು ಸರಿಯಾಗಿರಲು ಸಜ್ಜನರ ಮಾತು ಮತ್ತು ಸರ್ಜನ್ರ ಮಾತುಗಳನ್ನು ಕೇಳಬೇಕು. ಯುಕ್ತವಾದ ಆಹಾರ, ನಿದ್ಧೆ ಮತ್ತು ಮನಸ್ಸಿನಿಂದ ಮಾತ್ರ ಆರೋಗ್ಯ ಸಾಧ್ಯ. ದುಡಿದು ಉಣ್ಣಬೇಕು. ಕಾಯಕದ ಬದುಕಿನಿಂದ ಮಾತ್ರ ನೆಮ್ಮದಿ ಸಾಧ್ಯ. ಪಿರಿಯಾಪಟ್ಟಣ ನಗರ ಇಂದಿಗೂ ಒಂದು ಹಳ್ಳಿಯಂತೆ ಇದೆ. ಇಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಆಸ್ಪತ್ರೆಯನ್ನು ಆರಂಭಿಸಿದ್ದೇವೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಪಶುಪಾಲನಾ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ರವರು ಆಸ್ಪತ್ರೆಯನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲೋಹಿತ್, ಉದ್ಯಮಿ ಹೆಚ್.ಡಿ.ಗಣೇಶ್, ವಕೀಲ ಬಿ.ವಿ.ಜವರೇಗೌಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಈಚೂರು ಲೋಕೇಶ್, ಹುಣಸೂರು ಹೂಡಾ ಅಧ್ಯಕ್ಷ ಗಣೇಶ್ ಕುಮಾರ್ ಸ್ವಾಮಿ, ಉಪನ್ಯಾಸಕ ಎನ್.ನಂಜುಂಡಸ್ವಾಮಿ, ಮುಖಂಡರಾದ ರಹಮತ್ ಜಾನ್ ಬಾಬು, ವಿಜಯಕುಮಾರ್, ಪುಟ್ಟಯ್ಯ, ರಾಜಶೇಖರ್, ಸತ್ತಾರ್, ರವಿ, ಪ್ರಕಾಶ್, ಹೆಚ್.ಕೆ.ಮಂಜುನಾಥ್, ಮಹಮದ್ ಶಫೀ, ಡಾ.ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.