ದಾವಣಗೆರೆಯಲ್ಲಿ ನಿಧಿ ಶೋಧನೆಗೆ ಹೊಂಚು: ಆರು ಜನರ ಬಂಧನ
Team Udayavani, Jul 23, 2023, 6:31 PM IST
ದಾವಣಗೆರೆ:ರಸ್ತೆ ಬದಿ ದರೋಡೆ, ಪುರಾತನ ದೇವಸ್ಥಾನಗಳಲ್ಲಿ ನಿಧಿ ಶೋಧನೆಗೆ ಹೊಂಚು ಹಾಕಿದ್ದ ಆರು ಜನರನ್ನು ಬಂಧಿಸಿರುವ ಜಗಳೂರು ಪೊಲೀಸರು ಕಾರು, ದರೋಡೆಗೆ ಬಳಸುತ್ತಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಗಳೂರು ಪಟ್ಟಣದ ಪಿ. ಕಲ್ಲೇಶಿ(೪೮), ದಾವಣಗೆರೆಯ ಆಜಾದ್ ನಗರದ ದಿವಾನ್‌ಸಾಬ್, ಹುಬ್ಬಳ್ಳಿಯ ಮಲ್ಲಿಕರ‍್ಜುನ ಅಲಿಯಾಸ್ ಮಲ್ಲೇಶಿ(೩೦), ಹನುಮಂತ(೩೩), ಅಮೀರ್‌ಖಾನ್ ಪಠಾಣ್(೩೦), ಇಳಕಲ್‌ನ ಮರ‍್ತಾಜಸಾಬ್(೩೮) ಬಂಧಿತರು.
ಜಗಳೂರು ಠಾಣಾ ಪಿಎಸ್‌ಐ ಎಸ್.ಡಿ. ಸಾಗರ್ ಮತ್ತವರ ತಂಡ ರಾತ್ರಿ ಗಸ್ತು ನಡೆಸುತ್ತಿದ್ದಾಗ ಲಿಂಗಣ್ಣಹಳ್ಳಿ ರಸ್ತೆಯಲ್ಲಿ ರಸೆಯ ಬದಿಯಲ್ಲಿ ಜನವಸತಿ ಇಲ್ಲದ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಇಬ್ಬರು ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಪೊಲೀಸ್ ಜೀಪ್ ನೋಡಿ ಓಡಿಹೋಗಲು ಪ್ರಯತ್ನಿಸಿದವರನ್ನು ಬೆನ್ನತ್ತಿ ಹಿಡಿದು ವಿಚಾರಿಸಿದಾಗ ದರೋಡೆಗೆ ಹೊಂಚು ಹಾಕುತ್ತಿರುವ ವಿಷಯ ಗೊತ್ತಾಯಿತು. ಇಬ್ಬರು ನೀಡಿದ ಸುಳಿವಿನ ಮೇಲೆ ಇತರರನ್ನು ವಶಕ್ಕೆ ತೆಗೆದುಕೊಳ್ಳ ಲಾಯಿತು.
ನಿಧಿ ಪತ್ತೆಗಾಗಿ ಬಂಧಿತ ಆರೋಪಿತರು ರಸ್ತೆ ದರೋಡೆ ಹಾಗೂ ಪುರಾತನ ದೇವಸ್ಥಾನಗಳನ್ನು ಪತ್ತೆಮಾಡಿ ನಿಧಿಗಾಗಿ ಶೋಧನಡೆಸಿ ದರೋಡೆ ಮಾಡಲು ಬಂದಿರುವುದು ಗೊತ್ತಾಯಿತು.ಜು. ೨೧ ರ ರಾತ್ರಿ ಜಗಳೂರು ತಾಲೂಕಿನ ಬಿದರಕೆರೆ ಸಂತೆ ಮುದ್ದಾಪುರ ಗ್ರಾಮಗಳ ಮಧ್ಯದಲ್ಲಿ ಬರುವ ಬೇಡಿ ಆಂಜನೇಯಸ್ವಾಮಿ ಗುಡಿಯ ಮುಂಭಾಗದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ಬಸವಣ್ಣನಮರ‍್ತಿಯನ್ನು ಕಿತ್ತಿ ಪಕ್ಕದಲ್ಲಿಟ್ಟು ನಿಧಿಗಾಗಿ ಶೋಧನೆ ಮಾಡಿರುವುದನ್ನು ಒಪ್ಪಿ ಕೊಂಡಿದ್ದಾರೆ.
ಆರೋಪಿತರಿಂದ ಕಾರು, ಕಬ್ಬಿಣದ ಸುತ್ತಿಗೆ, ಹ್ಯಾಂಡ್‌ಗ್ಲೌಸ್, ಕಟ್ಟಿಂಗ್ ಪ್ಲೇಯರ್, ಕಬ್ಬಿಣದ ಪ್ಲಾಟ್ಚಿಸೆಲ್, ಪ್ಲಾಸ್ಟಿಕ್ ಹಗ್ಗ, ಗುಟಕಾ ಕಂಪನಿಯ ಖಾಲಿಬ್ಯಾಗ್, ಎರಡು ಪಾಕೇಟ್ ಕಾರದ ಪುಡಿ, ಮೂರು ಮೊಬಲ್, ೨ ಸಾವಿರ ನಗದು, ಟರ‍್ಚ್, ರೇಡಿಯಂ ಕಟ್ಟರ್ ಚಾಕು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಮತ್ತೊಬ್ಬ ಆರೋಪಿ ಭರತೇಶ್ ಎಂಬು ವ್ಯಕ್ತಿ ಭಾಗಿಯಾಗಿರುವುದಾಗಿ ತಿಳಿದುಬಂದಿದ್ದು, ಪತ್ತೆ ಕರ‍್ಯ ಮುಂದುವರೆದಿರುತ್ತದೆ. ೬ ಜನ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಜಗಳೂರು ಪೊಲೀಸ್ ಠಾಣೆ ಪಿಐ ಎಂ. ಶ್ರೀನಿವಾಸರಾವ್, ಪಿಎಸ್‌ಐ ಎಸ್.ಡಿ. ಸಾಗರ್, ಸಿಬ್ಬಂದಿಗಳಾದ ನಾಗಭೂಷಣ. ಆರ್, ಪಂಪಾನಾಯ್ಕ, ಬಸವಂತಪ್ಪ, ಮಾರೆಪ್ಪ, ಬಸವರಾಜ, ದಿನೇಶ್, ಚಂದ್ರಶೇಖರ್, ರಾಜಪ್ಪ, ನಾಗರಾಜ, ಗಿರೀಶ್ ಅವರಿಗೆ ಜಿಲ್ಲಾ ರಕ್ಷಣಾಧಿಕಾರಿ ಡಾಣ ಕೆ. ಅರುಣ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.