ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಲಹಿರು ತಿರಿಮನ್ನೆ ವಿದಾಯ
Team Udayavani, Jul 24, 2023, 12:10 AM IST
ಕೊಲಂಬೊ: ಶ್ರೀಲಂಕಾ ಪರ 44 ಟೆಸ್ಟ್, 127 ಏಕದಿನ ಹಾಗೂ 26 ಟಿ20 ಪಂದ್ಯಗಳನ್ನು ಆಡಿದ ಅಗ್ರ ಕ್ರಮಾಂಕದ ಬ್ಯಾಟರ್ ಲಹಿರು ತಿರಿಮನ್ನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.
“ಕ್ರಿಕೆಟನ್ನು ನಾನು ಅತ್ಯಂತ ಪ್ರೀತಿಯಿಂದ ಆಡಿದ್ದೇನೆ. ಈ ಕ್ರೀಡೆಯನ್ನು ಗೌರವಿಸಿದ್ದೇನೆ. ತಾಯಿನೆಲಕ್ಕೆ ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಿದ್ದೇನೆ. ಆಟಗಾರನಾಗಿ ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನೇ ಮಾಡಿದ್ದೇನೆ’ ಎಂದು ಲಹಿರು ತಿರಿಮನ್ನೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡು ವಿದಾಯ ಸಾರಿದ್ದಾರೆ.
“ಇದೊಂದು ಕಠಿನ ನಿರ್ಧಾರ. ಇದಕ್ಕೆ ಕೆಲವು ಅನಿರೀಕ್ಷಿತ ಹಾಗೂ ಅನಿವಾರ್ಯ ಕಾರಣಗಳೂ ಇದ್ದವು. ಅದನ್ನೆಲ್ಲ ಇಲ್ಲಿ ಉಲ್ಲೇಖೀಸಲಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ, ತರಬೇತುದಾರರು, ಸಹ ಆಟಗಾರರು, ಫಿಸಿಯೋ, ಆಡಳಿತ ಮಂಡಳಿ ನೀಡಿದ ಸಹಕಾರವನ್ನು ನಾನು ಮರೆಯುವುದಿಲ್ಲ. ಇವರೆಲ್ಲರಿಗೂ ಧನ್ಯವಾದಗಳು’ ಎಂಬುದಾಗಿ ತಿರಿಮನ್ನೆ ಹೇಳಿದ್ದಾರೆ.
ಭಾರತದೆದುರಿನ 2022ರ ಬೆಂಗ ಳೂರು ಟೆಸ್ಟ್ ಪಂದ್ಯವೇ ಇವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಇವರ ಅಂತಾರಾಷ್ಟ್ರೀಯ ಪದಾರ್ಪಣೆ ಕೂಡ ಭಾರತದ ವಿರುದ್ಧವೇ ಆಗಿತ್ತು. ಅದು ಮಿರ್ಪುರ್‌ನಲ್ಲಿ ನಡೆದ 2010ರ ಏಕದಿನ ಪಂದ್ಯವಾಗಿತ್ತು.
ತಿರಿಮನ್ನೆ ಸಾಧನೆ
44 ಟೆಸ್ಟ್‌ಗಳಿಂದ 2,088 ರನ್ (3 ಶತಕ), 127 ಏಕದಿನ ಪಂದ್ಯಗಳಿಂದ 3,194 ರನ್ (4 ಶತಕ) ಹಾಗೂ 26 ಟಿ20 ಪಂದ್ಯಗಳಿಂದ 291 ರನ್ ಬಾರಿಸಿದ್ದು ತಿರಿಮನ್ನೆ ಸಾಧನೆಯಾಗಿದೆ. ಕೆಲವು ಏಕದಿನ ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸುವ ಅವಕಾಶವೂ ಇವರಿಗೆ ಒದಗಿ ಬಂದಿತ್ತು. ಏಷ್ಯಾ ಕಪ್, ಟಿ20 ವಿಶ್ವಕಪ್ ವಿಜೇತ ಲಂಕಾ ತಂಡದ ಸದಸ್ಯನಾಗಿದ್ದುದು ಇವರ ಹೆಗ್ಗಳಿಕೆ. ಏಕದಿನದಲ್ಲಿ ಇವರ ಅತ್ಯುತ್ತಮ ಬ್ಯಾಟಿಂಗ್ 2015ರಲ್ಲಿ ಕಂಡುಬಂದಿತ್ತು. ಅಂದು ವಿಶ್ವಕಪ್ ಶತಕವೂ ಸೇರಿದಂತೆ 861 ರನ್ ಬಾರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.