![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 24, 2023, 8:00 AM IST
ಹೊಸದಿಲ್ಲಿ: ಸದಾ ಭಾರತದ ವಿರುದ್ಧ ದ್ವೇಷ ಕಾರುತ್ತ, ನೆರೆಯ ಚೀನದೊಂದಿಗೆ ಸೇರಿಕೊಂಡು ನಾಟಕವಾಡುತ್ತಿರುವ ಪಾಕಿ ಸ್ಥಾನದ ಸ್ಥಿತಿ ಈಗ ಎಲ್ಲಿಗೆ ಬಂದಿದೆ ಗೊತ್ತಾ? ಅತಿಯಾದ ಹಣದುಬ್ಬರ, ನಿರು ದ್ಯೋಗ, ರಾಜಕೀಯ ಅಸ್ಥಿರತೆ, ಮೂಲ ಭೂತವಾದದ ಪರಿಣಾಮ ಪಾಕಿಸ್ಥಾನವನ್ನು ಈ ವರ್ಷದ 6 ತಿಂಗಳುಗಳಲ್ಲಿ 8.32 ಲಕ್ಷ ಮಂದಿ ತೊರೆದಿದ್ದಾರೆ!
ಅಲ್ಲಿನ ನಾಯಕರಿಗೆ ಆತಂಕ ಮೂಡಿ ಸಿರುವ ಸಂಗತಿ ಯೆಂದರೆ ಈ ಪೈಕಿ 4 ಲಕ್ಷ ಮಂದಿ ಉನ್ನತ ಶಿಕ್ಷಣ ಪಡೆದಿರುವ ವೃತ್ತಿಪರ ವ್ಯಕ್ತಿಗಳು. ಇನ್ನೂ ಗಾಬರಿ ಮೂಡಿಸಿರುವುದೇನೆಂದರೆ 1 ಲಕ್ಷ ಮಂದಿ ಅತ್ಯಂತ ಕುಶಲ ವ್ಯಕ್ತಿಗಳು ಇದರಲ್ಲಿದ್ದಾರೆ. ಪಾಕ್‌ನ ಭವಿಷ್ಯವನ್ನು ರೂಪಿಸಲು ನೆರವಾಗಬೇಕಾದ ಈ ವ್ಯಕ್ತಿಗಳು ತಮ್ಮ ಭವಿ ಷ್ಯದ ಬಗ್ಗೆ ಆತಂಕಪಟ್ಟು ದೇಶವನ್ನೇ ತೊರೆದು ಹೋಗುತ್ತಿದ್ದಾರೆ.
ವೈದ್ಯರು, ದಾದಿಯರು, ಎಂಜಿನಿಯರ್‌ಗಳು, ಐಟಿ ಉದ್ಯೋಗಿಗಳು ಪರಾರಿ ಪರ್ವದಲ್ಲಿ ಸೇರಿಕೊಂಡಿದ್ದಾರೆ. ಮೇಲೆ ನೀಡಲ್ಪಟ್ಟಿರುವ ಅಂಕಿಸಂಖ್ಯೆಗಳು ಅಧಿಕೃತವಾಗಿ ಲಭ್ಯವಾಗಿರುವುದು. ಇನ್ನು ಹಲವರು ಯೂರೋಪ್‌ನ ಹಲವು ದೇಶಗಳಿಗೆ ಅಕ್ರಮ ಮಾರ್ಗವಾಗಿ ಹೋಗು ತ್ತಿ ದ್ದಾರೆ. ವರ್ಷದಿಂದ ವರ್ಷಕ್ಕೆ ಹೀಗೆ ವಲಸೆ ಹೋಗು ವವರ ಸಂಖ್ಯೆ ಏರುತ್ತಲೇ ಇದೆ. ಕಳೆದ ವರ್ಷ 7.65 ಲಕ್ಷ ಮಂದಿ ಪಾಕನ್ನು ತೊರೆದಿದ್ದರು. 2021ರಲ್ಲಿ 2.25 ಲಕ್ಷ ಮಂದಿ ಈ ದಾರಿ ಹಿಡಿದಿದ್ದರು. ಈಗಲೂ ಪರಿಸ್ಥಿತಿ ಸುಧಾರಿಸುವ ಲಕ್ಷಣವಿಲ್ಲ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.