ಏರ್‌ಪೋರ್ಟ್‌ ಮಾರ್ಗ ವರ್ಷಾಂತ್ಯಕೆ ಟೆಂಡರ್‌


Team Udayavani, Jul 24, 2023, 10:42 AM IST

ಏರ್‌ಪೋರ್ಟ್‌ ಮಾರ್ಗ ವರ್ಷಾಂತ್ಯಕೆ ಟೆಂಡರ್‌

ಬೆಂಗಳೂರು: ಅತ್ತ “ನಮ್ಮ ಮೆಟ್ರೋ’ ಯೋಜನೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗ ವೇಗ ಪಡೆದುಕೊಂಡ ಬೆನ್ನಲ್ಲೇ ಇತ್ತ ಅದೇ ದಿಕ್ಕಿಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಯ ಕಾರಿಡಾರ್‌-1 ಚುರುಕು ಗೊಳ್ಳು ತ್ತಿದ್ದು, ವರ್ಷಾಂತ್ಯಕ್ಕೆ ಈ ಸಂಬಂಧ ಟೆಂಡರ್‌ಗೆ ಸಿದ್ಧತೆ ನಡೆದಿದೆ.

ಉದ್ದೇಶಿತ ಯೋಜನೆಗೆ ಅಗತ್ಯವಿರುವ ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು ನಡೆಸಿರುವ ಕೆ-ರೈಡ್‌ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ), 7,438 ಕೋಟಿ (800 ಮಿಲಿಯನ್‌ ಯೂರೋ) ಹಣವನ್ನು ಜರ್ಮನಿಯ ಕೆಎಫ್ಡಬ್ಲ್ಯು, ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ ಮತ್ತು ಲಗ್ಜೆಂಬರ್ಗ್‌ನಿಂದ ದೀರ್ಘಾವಧಿ ಸಾಲ ಪಡೆಯುತ್ತಿದೆ. ಬರುವ ಸೆಪ್ಟೆಂಬರ್‌ನಲ್ಲಿ ಈ ಸಂಬಂಧದ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಲಾಗುತ್ತಿದೆ. ಈ ಒಡಂಬಡಿಕೆಯಿಂದ ಲಭ್ಯವಾಗುವ ಹಣದಲ್ಲಿ ಕಾರಿಡಾರ್‌ 1 (ಬೆಂಗಳೂರು ನಗರ-ಯಲಹಂಕ- ದೇವನ ಹಳ್ಳಿ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಮತ್ತು 3 (ಕೆಂಗೇರಿ- ಬೆಂಗಳೂರು ನಗರ- ವೈಟ್‌ ಫೀಲ್ಡ್‌) ಮಾರ್ಗಕ್ಕೆ ಹೆಚ್ಚಿನ ಪಾಲು ಬಳಕೆಯಾಗಲಿದೆ. ಈ ಸಾಲವನ್ನು ಪೂರೈಸುವ ವಿದೇಶಿ ಹಣಕಾಸು ಏಜೆನ್ಸಿಗಳು ಈಗಾಗಲೇ 2 ಬಾರಿ ಭೇಟಿ ನೀಡಿ, ಪೂರಕವಾಗಿ ಸ್ಪಂದಿಸಿವೆ.

ಸೆಪ್ಟೆಂಬರ್‌ನಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ಬೆಂಗಳೂರಿಗೆ ಭೇಟಿ ನೀಡುತ್ತಿವೆ. ಇದರೊಂದಿಗೆ ಸಂಪನ್ಮೂಲ ಕ್ರೋಡೀಕರಣದ ಅಡತಡೆಗಳು ನಿವಾ ರಣೆಯಾದಂತೆ ಆಗಲಿದೆ. ಈ ಪ್ರಕ್ರಿಯೆ ಮುಗಿ ಯುತ್ತಿದ್ದಂತೆ ಟೆಂಡರ್‌ ಪ್ರಕ್ರಿಯೆಗೆ ಸಿದ್ಧತೆಗಳು ಆರಂಭಗೊಳ್ಳಲಿವೆ. ಹೆಚ್ಚು-ಕಡಿಮೆ ಡಿಸೆಂಬರ್‌ ಒಳಗೆ ಸಿವಿಲ್‌ ಟೆಂಡರ್‌ ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಕೆ-ರೈಡ್‌ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ವಿಮಾನ ಪ್ರಯಾಣಿಕರು ಸೇರಿದಂತೆ ನಿತ್ಯ ಬಂದಿಳಿಯುವ ಹಾಗೂ ಹೋಗುವವರ ಸಂಖ್ಯೆ 1.50 ಲಕ್ಷ. ಟರ್ಮಿನಲ್‌-2 ಸಂಪೂರ್ಣ ಕಾರ್ಯಾರಂಭವಾದಲ್ಲಿ ಈ ಸಂಖ್ಯೆ 2 ಲಕ್ಷದ ಗಡಿ ದಾಟಲಿದೆ. ಉಳಿ ದಂತೆ ಮಾರ್ಗದುದ್ದಕ್ಕೂ ಬರುವ ವಸತಿ ಪ್ರದೇಶಗಳ ಜನ ಕೂಡ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಒಂದೆಡೆ ಈ ವಿಮಾನ ನಿಲ್ದಾಣ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದರೆ, ಮತ್ತೂಂದೆಡೆ ಉಪನಗರ ರೈಲು ಬರಲು ಸಿದ್ಧವಾಗುತ್ತಿದೆ. ಇವೆರಡರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. 2

ಲಕ್ಷಕ್ಕೂ ಅಧಿಕ ಜನರಿಗೆ ಅನುಕೂಲ: ವಿಮಾನ ನಿಲ್ದಾಣ ಮಾರ್ಗವು ಹೆಬ್ಟಾಳ ಫ್ಲೈಓವರ್‌ ಮೇಲಿನ ಒತ್ತಡ ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಲಿದೆ. ಉಪನಗರ ರೈಲು ಯೋಜನೆ ಬಹುತೇಕ ಮಾರ್ಗವು ರಸ್ತೆಯಿಂದ ಹೊರಗೆ ಬರಲಿದ್ದು, ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗುವುದಿಲ್ಲ. ಯಶವಂತಪುರ ರೈಲು ನಿಲ್ದಾಣ ಮತ್ತು ಸಿಟಿ ರೈಲು ನಿಲ್ದಾಣದ ಮೂಲಕ ಈ ಮಾರ್ಗ ಹಾದು ಹೋಗುವುದರಿಂದ ತುಮಕೂರು-ಮೈಸೂರು ಕಡೆಯಿಂದ ಬರುವ ಪ್ರಯಾಣಿಕರಿಗೂ ಅನುಕೂಲ. ಇಂತಹ ಹತ್ತುಹಲವು ಕಾರಣಗಳಿಂದ ಉಪನಗರ ರೈಲು ಯೋಜನೆ ಮಹತ್ವ ಪಡೆದುಕೊಂಡಿದೆ. ವರ್ಷಾಂತ್ಯ ದೊಳಗೆ ಟೆಂಡರ್‌ ಕರೆಯಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಸಿ4ಸಿ ಸಂಸ್ಥೆಯ ಸಂಚಾಲಕ ಹಾಗೂ ಉಪನಗರ ರೈಲು ಹೋರಾಟಗಾರ ರಾಜಕುಮಾರ್‌ ದುಗರ್‌ ಹೇಳುತ್ತಾರೆ.

“ವಾಸ್ತವವಾಗಿ ಕಾರಿಡಾರ್‌-1 ಮೊದಲ ಆದ್ಯತೆ ಆಗಿತ್ತು. ಆದರೆ, ಹಲವು ಕಾರಣಗಳಿಂದ ಕೊನೇ ಆದ್ಯತೆ ಆಗಿರುವುದು ಬೇಸರದ ಸಂಗತಿ. ಈಗಲಾದರೂ ಚುರುಕುಗೊಂಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಉಳಿದ ಕಾರಿಡಾರ್‌ಗಳು ಮುಗಿಯುವವರೆಗೆ ಉದ್ದೇಶಿತ ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿಗೆ ಕೈಹಾಕದಿರುವುದು ಅಥವಾ “ನಮ್ಮ ಮೆಟ್ರೋ’ ಯೋಜನೆಯೊಂದಿಗೆ ತಳುಕುಹಾಕಿ ಇದನ್ನು ನಿರ್ಲಕ್ಷಿಸುವುದು ಸರಿ ಅಲ್ಲ’ ಎಂದೂ ಅವರು ತಿಳಿಸುತ್ತಾರೆ.

ಎರಡು ಡಿಪೋಗಳು; ಭಿನ್ನ ವಿನ್ಯಾಸ: ಉಪನಗರ ರೈಲು ಯೋಜನೆಯಲ್ಲಿ ದೇವನಹಳ್ಳಿ ಮತ್ತು ಸೋಲದೇವನಹಳ್ಳಿ ಸೇರಿ ಎರಡು ಡಿಪೋಗಳು ತಲೆಯೆತ್ತಲಿವೆ. ಯಾವ ಮೂಲೆಯಿಂದ ಮತ್ತು ಯಾವ ಕಾರಿಡಾರ್‌ನಿಂದಾದರೂ ಎರಡೂ ಡಿಪೋಗಳಿಗೆ ರೈಲುಗಳು ಹೋಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ. ಪ್ರಸ್ತುತ “ನಮ್ಮ ಮೆಟ್ರೋ’ದಲ್ಲಿ ಪೀಣ್ಯ ಮತ್ತು ಬೈಯಪ್ಪನಹಳ್ಳಿ ಸೇರಿ ಎರಡು ಡಿಪೋಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಆಯಾ ಕಾರಿಡಾರ್‌ನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ರೈಲು ಆಯಾ ಕಾರಿಡಾರ್‌ನಲ್ಲಿ ಬರುವ ಡಿಪೋಗೆ ಮಾತ್ರ ಹೋಗುವಂತೆ ವಿನ್ಯಾಸ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಪನಗರ ರೈಲು ಯೋಜನೆ ಡಿಪೋಗಳು ತುಸು ಭಿನ್ನ ಎನ್ನಲಾಗಿದೆ.

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.