Hollywood films: ಇಂಡಿಯನ್ ಬಾಕ್ಸ್ ಆಫೀಸ್ನಲ್ಲಿ ಹಾಲಿವುಡ್ ಸಿನಿಮಾಗಳದ್ದೇ ದರ್ಬಾರ್
ಭಾರತದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ ಹಾಲಿವುಡ್ ಸಿನಿಮಾಗಳು
Team Udayavani, Jul 24, 2023, 12:12 PM IST
ಮುಂಬಯಿ: ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಸದ್ಯ ಹಾಲಿವುಡ್ ಸಿನಿಮಾಗಳದ್ದೇ ಕಾರುಬಾರು. ಕಳೆದ ವಾರ ಹಾಲಿವುಡ್ ನಲ್ಲಿ ʼʼಓಪೆನ್ ಹೈಮರ್ʼʼ ಹಾಗೂ “ಬಾರ್ಬಿ” ಸಿನಿಮಾಗಳು ರಿಲೀಸ್ ಆಗಿದೆ. ಇಂಡಿಯನ್ ಮಾರ್ಕೆಟ್ ನಲ್ಲಿ ಈ ಎರಡೂ ಸಿನಿಮಾಗಳು ಮೊದಲ ವಾರವೇ ಭರ್ಜರಿ ಕಲೆಕ್ಷನ್ ಮಾಡಿದೆ.
ಓಪೆನ್ ಹೈಮರ್:
ಕ್ರಿಸ್ಟೋಫರ್ ನೋಲನ್ ಅವರ ಸಿನಿಮಾಗಳಿಗೆ ಭಾರತದಲ್ಲಿ ಪ್ರತ್ಯೇಕ ಪ್ರೇಕ್ಷಕ ವರ್ಗವೇ ಇದೆ. ಅಣುಬಾಂಬ್ ಸಂಶೋಧಿಸಿರುವ ಪರಮಾಣು ವಿಜ್ಞಾನಿ “ಓಪೆನ್ ಹೈಮರ್” ಅವರ ಕಥೆಯನ್ನೊಳಗೊಂಡಿರುವ ಸಿನಿಮಾ ವರ್ಲ್ಡ್ ವೈಡ್ ಭರ್ಜರಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿಯೂ ಈ ಸಿನಿಮಾ ಕೋಟಿ ಕಮಾಯಿ ಮಾಡಿದೆ. ಮೂರೇ ದಿನದಲ್ಲಿ ಸಿನಿಮಾ 48 ಕೋಟಿ ರೂ.ಕಲೆಕ್ಷನ್ ಮಾಡಿದೆ. ಮೊದಲ ದಿನ 14 ಕೋಟಿ ರೂ.ಗಳಿಸಿದೆ. ಶನಿವಾರ ಹಾಗೂ ಭಾನುವಾರ ಎರಡೂ ದಿನವೂ ತಲಾ 17 ಕೋಟಿ ರೂ.ಯನ್ನು ಕಲೆಕ್ಷನ್ ಮಾಡಿದೆ.
ಓಪನ್ಹೈಮರ್ ಬಾಕ್ಸ್ ಆಫೀಸ್ ಕಲೆಕ್ಷನ್:
ಶುಕ್ರವಾರ: 14.00 ಕೋಟಿ
ಶನಿವಾರ: 17.00 ಕೋಟಿ
ಭಾನುವಾರ: 17.25 ಕೋಟಿ
ಒಟ್ಟು: 48.25 ಕೋಟಿ ರೂ
ಬಾರ್ಬಿ: ಹಾಲಿವುಡ್ ನಲ್ಲಿ ಕಳೆದ ವಾರ ಬಿಡುಗಡೆಯಾದ ಸಿನಿಮಾದಲ್ಲಿ ಮಾರ್ಗಾಟ್ ರಾಬಿ ಮತ್ತು ರಯಾನ್ ಗೊಸ್ಲಿಂಗ್ ಅಭಿನಯದ “ಬಾರ್ಬಿ” ಸಿನಿಮಾವೂ ಒಂದು. ಬಾಕ್ಸ್ ಆಫೀಸ್ ನಲ್ಲಿ “ಓಪನ್ ಹೈಮರ್” ಚಿತ್ರದೊಂದಿಗೆ ತೆರೆಕಂಡು ಪೈಪೋಟಿ ಕೊಟ್ಟ “ಬಾರ್ಬಿ” ಭಾರತದ ಬಾಕ್ಸ್ ಆಫೀಸ್ ನಲ್ಲಿಯೂ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಮೊದಲ ವೀಕೆಂಡ್ ನಲ್ಲಿ ಬಾರ್ಬಿ 18.25 ಕೋಟಿ ರೂ.ಕಲೆಕ್ಷನ್ ಮಾಡಿದೆ.
ಬಾರ್ಬಿ ಡೇ ವೈಸ್ ಬಾಕ್ಸ್ ಆಫೀಸ್ ಕಲೆಕ್ಷನ್:
ಶುಕ್ರವಾರ: 4.50 ಕೋಟಿ
ಶನಿವಾರ: 6.50 ಕೋಟಿ
ಭಾನುವಾರ: 7.25 ಕೋಟಿ
ಒಟ್ಟು: 18.25 ಕೋಟಿ
ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಬಾರ್ಬಿ 40 ಕೋಟಿ ರೂ.ಗಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮಿಷನ್ ಇಂಪಾಸಿಬಲ್ 7: ಇನ್ನು ಹಾಲಿವುಡ್ ಇತ್ತೀಚೆಗೆ ತೆರೆಕಂಡ ಬಿಗೆಸ್ಟ್ ಸಿನಿಮಾವೆಂದರೆ ಅದು ಟಾಮ್ ಕ್ರೂಸ್ ಅವರ “ಮಿಷನ್ ಇಂಪಾಸಿಬಲ್ 7”. ಮೊದಲ ಮೂರು ದಿನ 12.25 ಕೋಟಿ ರೂ.ಗಳಿಸಿದ ಬಳಿಕ ಇದೀಗ ಸಿನಿಮಾ ಒಟ್ಟು 92.50 ಕೋಟಿ ರೂ.ಕಲೆಕ್ಷನ್ ಮಾಡಿ ಮುಂದುವರಿದಿದೆ.
ಮಿಷನ್ ಇಂಪಾಸಿಬಲ್ 7 ಬಾಕ್ಸ್ ಆಫೀಸ್ ಕಲೆಕ್ಷನ್:
ಮೊದಲ ವಾರ: 80.25 ಕೋಟಿ
2ನೇ ಶುಕ್ರವಾರ: 2.50 ಕೋಟಿ
2ನೇ ಶನಿವಾರ: 4.75 ಕೋಟಿ
2ನೇ ಭಾನುವಾರ: 5.00 ಕೋಟಿ
ಒಟ್ಟು: 92.50 ಕೋಟಿ
ಹಾಲಿವುಡ್ ನ ಸತತ ಮೂರು ಸಿನಿಮಾಗಳು ಇಂಡಿಯನ್ ಮಾರ್ಕೆಟ್ ನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಈ ರೀತಿಯ ಕಲೆಕ್ಷನ್ ಮಾಡಿರುವುದು ಬಲು ಅಪರೂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
National Cinema Day: ಈ ದಿನ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.