ಕಬಿನಿ ಜಲಾಶಯ ಭರ್ತಿಗೆ 7 ಅಡಿ ಬಾಕಿ


Team Udayavani, Jul 24, 2023, 1:33 PM IST

ಕಬಿನಿ ಜಲಾಶಯ ಭರ್ತಿಗೆ 7 ಅಡಿ ಬಾಕಿ

ಎಚ್‌.ಡಿ.ಕೋಟೆ: ಕಳೆದ ಒಂದು ವಾರದಿಂದ ಕೇರಳದ ವೈನಾಡು ಸೇರಿದಂತೆ ಕಬಿನಿ ಹಿನ್ನೀರು ವ್ಯಾಪ್ತಿ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕುಗೊಂಡು ಎಡಬಿಡದೆ ಸುರಿಯುತ್ತಿರುವ ಪರಿಣಾಮ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡು ಹೆಚ್ಚು ನೀರು ಹರಿದು ಬರುತ್ತಿದ್ದು ಜಲಾಶಯ ಭರ್ತಿಗೆ 7 ಅಡಿಗಳಷ್ಟು ಬಾಕಿ ಯಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಜಲಾಶಯದ ಸಂಗ್ರಹ ನೀರಿನ ಮಟ್ಟ 2276.77 ಅಡಿಗೆ ಏರಿಕೆ ಕಂಡಿದ್ದು, ಈಗಲೂ ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮಳೆ ಆರ್ಭಟಿಸುತ್ತಿದ್ದು ಜಲಾಶಯಕ್ಕೆ 17.412 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೆಚ್ಚಿನ ಮಳೆಯಾಗುತ್ತಿರುವುದರಿಂದ ರಾತ್ರಿ ವೇಳೆಗೆ ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಜಲಾಶಯದ ಪಕ್ಕದ ಸುಭಾಷ್‌ ವಿದ್ಯುತ್‌ ಘಟಕದ ಮೂಲಕ 2,500 ಕ್ಯೂಸೆಕ್‌ ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿದೆ. ಒಳ ಹರಿವು ಧಿಡೀರ್‌ ಹೆಚ್ಚಾದಲ್ಲಿ ಹೆಚ್ಚಿನ ನೀರನ್ನು ಹೊರ ಹರಿವು ಹೆಚ್ಚಿಸಲಾಗುವುದು ಎಂದು ಕಬಿನಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಇದೇ ದಿನ ಭರ್ತಿಗೊಂಡಿದ್ದ ಜಲಾಶಯ: ಸತತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಂಡು 2276.77 ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಇದೇ ದಿನ ಜಲಾಶಯ ಗರಿಷ್ಠ ಮಟ್ಟ 2284 (19.52)ಟಿಎಂಸಿ ತಲುಪಿ ಜಲಾಶಯ ಭರ್ತಿಯಾಗಿ ಜಲಾಶಯದಿಂದ 11 ಸಾವಿರ ಕ್ಯೂಸೆಕ್‌ ನೀರನ್ನು ಮುಂಭಾಗದ ನದಿಗೆ ಹರಿಸಲಾಗಿತ್ತು. ಆದರೆ ಈ ಭಾರಿ ಪೂರ್ವ ಮುಂಗಾರು ಕೈಕೊಟ್ಟು ಮುಂಗಾರು ಕೂಡ ತಡವಾದ ಕಾರಣ ಜಲಾಶಯ ಕನಿಷ್ಠಮಟ್ಟ ಡೆಡ್‌ ಸ್ಟೋರೇಜ್‌ ತಲುಪಿದ್ದರ ಪರಿಣಾಮ ರಾಜ್ಯದ ಜನರ ಕುಡಿಯುವ ನೀರಿಗೂ ತಾತ್ವರ ಎದುರಾಗಿ, ಅಚ್ಚುಕಟ್ಟು ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಮುಂಗಾರು ತಡವಾಗದರೂ ಚುರುಕುಗೊಂಡು ಕೇರಳದ ವೈನಾಡು ಸೇರಿ ಜಲಾಶ ಯದ ಹಿನ್ನೀರು ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಯಾದ ಪರಿಣಾಮ ಜಲಾಶಯ ಭರ್ತಿಗೆ ಸನಿಹವಾಗಿದೆ.

ಖಾರೀಫ್‌ ಬೆಳೆಗೆ ನೀರು ? ಸಾಧ್ಯತೆ, ರೈತರ ಮುಖದಲ್ಲಿ ಮಂದಹಾಸ: ಜಲಾಶಯ ಭರ್ತಿ ಯಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ಬಲದಂಡೆ ನಾಲೆಯ 1.15 ಲಕ್ಷ ಎಕ್ಟೇರ್‌, ಎಡದಂಡೆ ನಾಲೆಯ 3 ಸಾವಿರ ಎಕ್ಟೇರ್‌ ಪ್ರದೇಶದ ರೈತರ ಗದ್ದೆಗಳ ಖಾರೀಫ್‌ ಬೆಳೆಗೆ ನೀರು ಸಿಗುವ ಸಾಧ್ಯತೆ ಅಶಾಭಾವನೆ ಮೂಡಿದೆ, ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳ ನಿಲ್ಲದ ಕಣ್ಣಮುಚ್ಚಾಲೇ: ಇನ್ನೂ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಮಾತ್ರ ಬಾಕಿಯಿದೆ, ಹಿನ್ನೀರು ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯದಿಂದ ಸುಭಾಷ್‌ ವಿದ್ಯುತ್‌ ಘಟಕದ ಮೂಲಕ 2.5 ಸಾವಿರ ಕ್ಯೂಸೆಕ್‌ಗೂ ನೀರನ್ನು ಮುಂಭಾಗದ ನದಿಗೆ ಹರಿಸಲಾಗುತ್ತಿದೆ, ಅದರೆ ಇದೇ ಪ್ರಮಾಣದ ನೀರು ಹರಿಸಬಹುದಾದ ಸಾಮರ್ಥ್ಯ ಇರುವ ಬಲದಂಡೆ ನಾಲೆ ಮೂಲಕ ಹರಿಸಿದರೇ ಅಚ್ಚುಕಟ್ಟು ಪ್ರದೇಶದ ಕೆರೆ ಕೆಟ್ಟೆಗಳು ತುಂಬಿ ಆದೆ ನೀರು ಕಿರು ನಾಲೆಗಳ ಮೂಲಕ ಮುಂಭಾಗದ ನದಿ ಸೇರುತ್ತದೆ. ಹೀಗೆ ಮಾಡಿದರೆ ನದಿಗೂ ನೀರು ಹರಿಸದಂತಾಗುತ್ತದೆ, ಕೆರೆ ಕಟ್ಟೆಗಳು ತುಂಬಿ ರೈತರ ಹೊಲ ಗದ್ದೆಗಳಲ್ಲಿರುವ ಕಳವೆ ಬಾವಿಗಳ ಅಂತರ್ಜಲದ ಪ್ರಮಾಣವೂ ವೃದ್ಧಿಯಾಗುತ್ತದೆ, ಅದರೆ ಇಲ್ಲಿನ ಅಧಿಕಾರಿಗಳು ಸುಭಾಷ್‌ ಪವರ್‌ನ ಅಧಿಕಾರಿಗಳು ನೀಡುವ ಹಣದಾಸೆಗೆ ಜೋತು ಬಿದ್ದು ಸುಭಾಷ್‌ ವಿದ್ಯುತ್‌ ಘಟಕದ ಮೂಲಕ ನೀರು ಹರಿಸುವ ಮೂಲಕ ರೈತರ ಹಿತ ಕಾಯುತ್ತಿಲ್ಲ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಆರೋಪಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೇರಳದ ವೈನಾಡು ಮತ್ತು ಕಬಿನಿ ಅಣೆಕಟ್ಟು ಹಿನ್ನೀರು ವ್ಯಾಪ್ತಿಯಲ್ಲಿ ಕಳೆದ ಒಂದು ವಾರ ದಿಂದ ಸತತ ಮಳೆ ಆರ್ಭಟಿಸುತ್ತಿದೆ, ಜಲಾ ಶಯ ಇನ್ನೂ ಮೂರ್‍ನಾಲ್ಕು ದಿನದಲ್ಲಿ ಭರ್ತಿ ಆಗಲಿದೆ, ಈ ಬಾರಿ ಖಾರೀಫ್‌ ಬೆಳೆಗೆ ನೀರು ಸಿಗುವ ಸಾಧ್ಯತೆ ಇರುವುದರಿಂದ ಸಹಜವಾಗಿ ಅಚ್ಚುಕಟ್ಟು ರೈತರಾದ ನಮಗೆ ಖುಷಿ ಇದೆ. ● ಪುಟ್ಟಬಸವನಾಯ್ಕ, ರೈತ

ಕೇರಳದ ವೈನಾಡು ಪ್ರದೇಶ ಸೇರಿದಂತೆ ಹಿನ್ನಿರು ವ್ಯಾಪ್ತಿಯಲ್ಲೂ ಒಂದು ವಾರ ದಿಂದಲೂ ಸತತ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 13 ಸಾವಿರ ಕ್ಯೂಸೆಕ್‌ ಗೂ ಹೆಚ್ಚಿನ ನೀರು ಬರುತ್ತಿರುವುದರಿಂದ ಸಂಗ್ರಹ ಮಟ್ಟ 2276.77 ಅಡಿಗಳಿಗೆ ಏರಿಕೆಯಾಗಿದೆ. ಇದೆ ರೀತಿ ಮಳೆಯಾದರೆ ಜಲಾಶಯ ನಾಲ್ಕೈದು ದಿನಗಳಲ್ಲಿ ಭರ್ತಿಯಾಗುವ ಸಾಧ್ಯತೆಯಿದೆ. ● ಜನಾರ್ದನ್‌. ಸಹಾಯಕ ಕಾರ್ಯಪಾಲ

-ಬಿ.ನಿಂಗಣ್ಣಕೋಟೆ

ಟಾಪ್ ನ್ಯೂಸ್

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.