Thieves : ಕಳ್ಳತನ ಮಾಡಲು ಬಂದ ಮನೆಯಲ್ಲಿ ಏನೂ ಸಿಗದ ಕಾರಣ 500 ರ ನೋಟು ಇಟ್ಟು ಹೋದ ಕಳ್ಳರು
Team Udayavani, Jul 24, 2023, 2:57 PM IST
ದೆಹಲಿ: ಕಳ್ಳತನ ಮಾಡಲು ಬಂದ ಮನೆಯಲ್ಲಿ ಏನೂ ಸಿಗದ ಕಾರಣಕ್ಕೆ ಕಳ್ಳರು ನಿರಾಶರಾಗಿ ಮನೆಯಲ್ಲಿ 500 ರೂಪಾಯಿಯ ನೋಟನ್ನು ಇಟ್ಟುಹೋದ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.
ದೆಹಲಿಯ ರೋಹಿಣಿ ಸೆಕ್ಟರ್ 8 ನಲ್ಲಿರುವ ಎಂ ರಾಮಕೃಷ್ಣ ಎನ್ನುವವರ ಮನೆಯ ಮುಖ್ಯ ಗೇಟ್‌ನ ಬೀಗ ಮುರಿದು ಕೆಲ ಕಳ್ಳರು ಕಳ್ಳತನ ಮಾಡಲು ಬಂದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಮನಗಂಡ ಕಳ್ಳರು ಮನೆಯೊಳಗೆ ಹೋಗಿ ಎಲ್ಲಾ ಕಡೆ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಇಡೀ ಮನೆಯಲ್ಲಿ ಏನೂ ಸಿಗದ ಕಾರಣ ಕಳ್ಳರು ವಾಪಾಸ್ ಹೋಗಿದ್ದಾರೆ. ಆದರೆ ವಾಪಾಸ್ ಹೋಗುವ ವೇಳೆ ಕಳ್ಳತನಕ್ಕೆಂದು ಬಂದ ಮನೆಯ ಮುಖ್ಯ ಗೇಟ್ ನಲ್ಲಿ 500 ರೂಪಾಯಿಯ ನೋಟನ್ನು ಇಟ್ಟು ತೆರಳಿದ್ದಾರೆ.
ಜುಲೈ 19ರ ಬುಧವಾರ ಬೆಳಗ್ಗೆ ಗುರುಗ್ರಾಮಕ್ಕೆ ಪತ್ನಿಯೊಂದಿಗೆ ತೆರಳಿದ್ದ ಎಂ ರಾಮಕೃಷ್ಣ ಮನೆಗೆ ಬಂದು ನೋಡುವಾಗ ಮುಖ್ಯ ಗೇಟ್‌ನ ಬೀಗ ಮುರಿದಿರುವುದು ಕಂಡು ಬಂದಿದೆ. ಈ ವೇಳೆ ಮನೆಯ ಒಳಗೆ ಹೋಗಿ ನೋಡಿದ್ದಾರೆ. ಆದರೆ ಮನೆಯಿಂದ ಯಾವ ವಸ್ತು ಕೂಡ ಕಾಣೆಯಾಗಿರಲಿಲ್ಲ. ಮುಖ್ಯ ಗೇಟ್ ನಲ್ಲಿ 500 ರೂಪಾಯಿಯ ನೋಟು ಇರುವುದನ್ನು ಗಮನಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳನ್ನು ಇಟ್ಟಿರಲಿಲ್ಲ ಎಂದು ಎಂ ರಾಮಕೃಷ್ಣ ಪೊಲೀಸರಿಗೆ ತಿಳಿಸಿದ್ದಾರೆ. ದಂಪತಿ ಹಿಂತಿರುಗಿದಾಗ ಅಲ್ಮೇರಾಗಳು ಸಹ ಹಾಗೇ ಇದ್ದವು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC ಅಧ್ಯಕ್ಷ ಪಾಲ್ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್ ಒವೈಸಿ
Maharashtra: ಉದ್ಧವ್ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!
Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್ ಶಾ
Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ
CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!
MUST WATCH
ಹೊಸ ಸೇರ್ಪಡೆ
JPC ಅಧ್ಯಕ್ಷ ಪಾಲ್ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್ ಒವೈಸಿ
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Puttur: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Mangalore: ವಂಚನೆ ಪ್ರಕರಣದಲ್ಲಿ ಭಾಗಿ ಆರೋಪಿಸಿ 30.65 ಲಕ್ಷ ರೂ. ಹಣ ವರ್ಗಾಯಿಸಿ ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.