![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 25, 2023, 5:36 AM IST
ಸಿದ್ದಾಪುರ: ಶೇಡಿಮನೆ ಗ್ರಾಮದ ಅರಸಮ್ಮಕಾನು ಬಡಾಬೈಲು ದರ್ಖಾಸ್ತು ವಿಮಲಾ ಗೋಪಾಲ ಶೆಟ್ಟಿ ದಂಪತಿಯ ಮಗಳು ರಚನಾ(13) ತನ್ನ ಮನೆಯ ಗದ್ದೆಯ ಸಮೀಪದ ಹೊಳೆಯಲ್ಲಿ ಜ.23ರಂದು ಆಕಸ್ಮಿಕವಾಗಿ ಕಾಲು ಜಾರಿ, ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತ ಪಟ್ಟಿದ್ದಾಳೆ.
ರಚನಾ 4ನೇ ತರಗತಿ ಓದಿದ್ದು, ಮಾನಸಿಕ ಸಮಸ್ಯೆಯಿಂದ ಶಾಲೆಯನ್ನು ಬಿಟ್ಟಿರುತ್ತಾಳೆ. ಹೊಳೆ ಸಮೀಪದ ಗದ್ದೆಯಲ್ಲಿ ಅಜ್ಜಿ ಸಾಧಮ್ಮ ಶೆಟ್ಟಿ ಅವರೊಂದಿಗೆ ದನ ಕರುಗಳನ್ನು ಮೇಯಿಸಲು ಹೋಗಿದ್ದಳು. ಗದ್ದೆ ಹತ್ತಿರದ ಹೊಳೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಹೊಳೆಯಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರುತ್ತಾಳೆ. ಸ್ಥಳೀಯರ ಸಹಕಾರದೊಂದಿಗೆ ಹೊಳೆ ಭಾಗದಲ್ಲಿ ಹುಡುಕಾಡಿದರು, ರಚನಾ ಸಿಕ್ಕಿರಲಿಲ್ಲ.
ಸುಮಾರು ಎರಡು ಕಿ.ಮೀ ದೂರದ ಶೇಡಿಮನೆ ಗ್ರಾಮದ ಮೂಡುಬೈಲು ಎಂಬಲ್ಲಿ ಹೊಳೆಯಲ್ಲಿ ಮರಕ್ಕೆ ಮೃತಳ ಶರೀರ ಸಿಲುಕಿಗೊಂಡಿರುವುದು ಪತ್ತೆಯಾಗಿದೆ. ಕೆಲವು ದಿನಗಳಿಂದ ವಿಪರೀತ ಮಳೆೆಯಿಂದ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿರುವುದರಿಂದ ಮೃತ ದೇಹವನ್ನು ಸುಮಾರು 2 ಕಿ.ಮೀ ದೂರದವರೆಗೆ ಕೊಚ್ಚಿಕೊಂಡು ಹೋಗಿದೆ. ಚಿಕ್ಕಮ್ಮ ಜಯಲಕ್ಷ್ಮೀ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.