India- America ದಲಿತ ಹೋರಾಟಗಾರ ಮಿಲಿಂದ್ ಮಕ್ವಾನ ನಿಧನ
Team Udayavani, Jul 25, 2023, 6:13 AM IST
ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರಮುಖ ದಲಿತಪರ ಹೋರಾಟಗಾರ ಮಿಲಿಂದ್ ಮಕ್ವಾನ (54) ಅವರು ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ.
ಕ್ಯಾಲಿಫೋರ್ನಿಯ ವಿಧಾನಸಭೆಯಲ್ಲಿ ಜಾರಿಗೆ ತರಲು ಮುಂದಾಗಿರುವ ಜಾತಿ ತಾರತಮ್ಯ ವಿರೋಧಿ ಮಸೂದೆಯನ್ನು ಮಿಲಿಂದ್ ತೀವ್ರವಾಗಿ ಖಂಡಿಸಿದ್ದರು. “ಇದು ಅಮೆರಿಕದಲ್ಲಿರುವ ಇತರೆ ಹಿಂದೂಗಳು ಹಾಗೂ ದಲಿತರ ನಡುವೆ ತಾರತಮ್ಯ ಮೂಡಿಸಲಿದೆ’ ಎಂದು ಹೇಳಿದ್ದ ಅವರು ಇತ್ತೀಚೆಗೆ ಈ ವಿಚಾರವಾಗಿ ಸಿಟಿ ಕೌನ್ಸಿಲ್ ಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದ್ದರು.
ಮಿಲಿಂದ್ ಅವರು ಹಿಂದೂ ಸ್ವಯಂಸೇವಕ್ ಸಂಘ (ಎಚ್‌ಎಸ್‌ಎಸ್)ದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. “ಸೇವಾ ಇಂಟರ್‌ನ್ಯಾಷನಲ್ ಅಮೆರಿಕ’ದಲ್ಲಿ ಸಕ್ರಿಯ ಸ್ವಯಂಸೇವಕರಾಗಿದ್ದರು. ಜತೆಗೆ “ಅಂಬೇಡ್ಕರ್-ಪುಲೆ ನೆಟÌರ್ಕ್ ಆಫ್ ಅಮೆರಿಕನ್ ದಲಿತ್ಸ್ ಆ್ಯಂಡ್ ಬಹುಜನ್ಸ್’ ಸಂಸ್ಥೆಯ ಸದಸ್ಯರಾಗಿದ್ದರು. ಅಮೆರಿಕದಲ್ಲಿ ಭಾರತೀಯ ದಲಿತರ, ಶೋಷಿತರ ಪರವಾದ ಹೋರಾಟಗಳು, ಸಮಾವೇಶಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಮಿಲಿಂದ್ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.