ಚಾರ್ಮಾಡಿ ಘಾಟಿ ಬಿದಿರುತಳ ಸಮೀಪ ಗುಡ್ಡ ಕುಸಿತ
ಚಾರ್ಮಾಡಿಯಲ್ಲಿ ರಾತ್ರಿ ಸಂಚಾರ ವೇಳೆ ಬೇಕಿದೆ ಎಚ್ಚರ
Team Udayavani, Jul 25, 2023, 5:45 AM IST
ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಬಿದಿರುತಳ ಆಲೇಖಾನ್ ಮಧ್ಯದ ರಸ್ತೆಗೆ ಸೋಮವಾರ ಗುಡ್ಡ ಕುಸಿದು ವಾಹನ ಸಂಚಾರ ಬಾಧಿತವಾಯಿತು.
ಭಾರೀ ಮಳೆಯ ಪರಿಣಾಮ ಈ ಹಿಂದೆ ಮಣ್ಣಿನ ಸವಕಳಿ ಉಂಟಾದ ಗುಡ್ಡದ ಬದಿ ಮತ್ತೆ ಮಣ್ಣು ಕುಸಿಯಿತು. ಕುಸಿತದ ಸ್ಥಳದ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯಾಗುತ್ತಿದ್ದು, ರಸ್ತೆ ಅಗಲ ಕಿರಿದಾಗಿದೆ. ಇದು ಕೂಡ ವಾಹನ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿತು. ಬಳಿಕ ಚಿಕ್ಕಮಗಳೂರು ವಿಭಾಗದ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.
ಎಚ್ಚರ ಅಗತ್ಯ
ಭಾರೀ ಮಳೆಯ ಪರಿಣಾಮ ಈ ಹಿಂದೆ ಸಡಿಲಗೊಂಡ ಪ್ರದೇಶದಲ್ಲಿ ಎಚ್ಚರ ವಹಿಸಬೇಕಾದ ಅನಿವಾರ್ಯ ಇದೆ. ಗುಡ್ಡ ಕುಸಿತ ಪ್ರದೇಶದಲ್ಲಿ ಮಳೆ ನೀರು ರಭಸಕ್ಕೆ ಮತ್ತಷ್ಟು ಕುಸಿತ ಸಂಭವಿಸುವ ಸಾಧ್ಯತೆ ಎದುರಾಗಿದೆ. ಚಾರ್ಮಾಡಿ ಘಾಟಿ ಪರಿಸರದಲ್ಲಿ ಮಳೆ ಸಹಿತ ಮಂಜು ಮುಸುಕಿದ ವಾತಾವರಣವಿದ್ದು, ಮಳೆ ಪ್ರಮಾಣ ಇಳಿಕೆ ಕಾಣುವ ವರೆಗೆ ತೀವ್ರ ಅನಿವಾರ್ಯವಿದ್ದರಷ್ಟೆ ಸಂಚಾರ ಮಾಡುವುದುಉತ್ತಮ. ರಾತ್ರಿ ಸಂಚಾರ ಮೊಟಕುಗೊಳಿಸುವುದು ಸೂಕ್ತ.
ವೀಡಿಯೋ ಅಪಪ್ರಚಾರ
ಈ ನಡುವೆ 2 ವರ್ಷಗಳ ಹಿಂದೆ ಮಹಾರಾಷ್ಟ್ರದ ಘಾಟಿಯೊಂದರ ರಸ್ತೆಯಲ್ಲಿ ಹರಿಯುವ ನೀರಿನ ವೀಡಿಯೋ ತುಣುಕೊಂದನ್ನು ಚಾರ್ಮಾಡಿಯ ದೃಶ್ಯ ಎಂದು ಅಡಿಬರಹ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಯಾರೋ ಕಿಡಿಗೇಡಿಗಳು ಹರಿಯಬಿಟ್ಟಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.