ರೈಲ್ವೆ ಹಳೇ ಬೋಗಿಗಳಿಗೆ ರೆಸ್ಟೋರೆಂಟ್ ರೂಪ
Team Udayavani, Jul 25, 2023, 10:28 AM IST
ಬೆಂಗಳೂರು: ಗುಜುರಿಗೆ ಹಾಕುವ ನಿರುಪಯುಕ್ತ ರೈಲು ಬೋಗಿಗಳನ್ನು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ನವೀಕರಿಸಿ ಹವಾನಿಯಂತ್ರಿತ ಆಧುನಿಕ ರೈಲ್ವೆ ಬೋಗಿ ರೆಸ್ಟೋರೆಂಟ್‌ಗಳಾಗಿ ಪರಿವರ್ತಿಸುವ ಮೂಲಕ ನಿರಂತರವಾದ ಆದಾಯ ಗಳಿಸಲು ಮುಂದಾಗಿದೆ.
ಸಾಮಾನ್ಯವಾಗಿ 15 ವರ್ಷಗಳಿಗಿಂತ ಹಳೆಯದಾದ ಬೋಗಿಗಳನ್ನು ಇ- ಹರಾಜಿನ ಮೂಲಕ ಗುಜುರಿಗೆ ಹಾಕಲಾಗುತ್ತಿದೆ. ಇದರಿಂದ ಗರಿಷ್ಠವೆಂದರೂ 5ರಿಂದ 6 ಲಕ್ಷ ರೂ. ಒನ್ ಟೈಮ್ ಪೇಮೆಂಟ್ ಸಿಗುತ್ತದೆ. ಆದರೆ, ಗುಜುರಿಗೆ ಹಾಕುವ ಬೋಗಿಯಿಂದ ಆದಾಯ ಗಳಿಸಲು ದೇಶದ ಹಲವು ನಗರಗಳಲ್ಲಿ ಆರಂಭಿಸಿರುವ ರೈಲ್ ಕೋಚ್ ರೆಸ್ಟೋರೆಂಟನ್ನು ನೈಋತ್ಯ ರೈಲ್ವೆ ವಿಭಾಗದಲ್ಲೂ ತೆರೆಯಲು ಸಿದ್ಧತೆ ನಡೆಸುತ್ತಿದ್ದು, ಅತೀ ಹೆಚ್ಚು ಅಂತರ ಜಿಲ್ಲೆ ಹಾಗೂ ಅಂತಾರಾಜ್ಯ ಪ್ರಯಾಣಿಕರು ಸಂಚರಿಸುವ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ(ಎಸ್‌ಎಂವಿಬಿ) ಬೋಗಿ ರೆಸ್ಟೋರೆಂಟ್ ತೆರೆಯಲು ಮುಂದಾಗಿದೆ.
ಗುಜುರಿ ಬೋಗಿ- ಹೈಟೆಕ್ ಟಚ್!: ಪ್ರಸ್ತುತ ರೈಲು ಬೋಗಿಯ ಹೊರಗಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಒಳಾಂಗಣ ವಿನ್ಯಾಸ ಸಂಪೂರ್ಣವಾಗಿ ಬದಲಾಗಲಿದೆ. ಬೋಗಿಯೊಳಗಿನ ಬೆಡ್ ತೆಗೆದು ಹೋಟೆಲ್ ಶೈಲಿಯ ಆಸನ, ಹವಾನಿಯಂತ್ರಕ ವ್ಯವಸ್ಥೆ, ಒಳಆವರಣಕ್ಕೆ ಹೊಸ ರೂಪ ನೀಡಲಾಗಿದೆ. 2 ನಿಲ್ದಾಣ ಮುಂಭಾಗ ತಲಾ 1 ಬೋಗಿಯ ರೆಸ್ಟೋರೆಂಟ್ ಆರಂಭವಾಗಲಿದೆ.
ನಿರಂತರ ಆದಾಯ!: ಸಾಮಾನ್ಯವಾಗಿ ನಿರುಪಯುಕ್ತ ಖಾಲಿ ಬೋಗಿ ಇ-ಹರಾಜಿನಲ್ಲಿ ಸರಾಸರಿ 5 ರಿಂದ 6 ಲಕ್ಷ ರೂ.ಗೆ ಮಾರಾಟವಾಗುತ್ತದೆ. ಹೊಸ ರೂಪ ನೀಡಿದ ಎರಡು ಬೋಗಿ ರೆಸ್ಟೋರೆಂಟ್‌ಗಳನ್ನು 5 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ವಾರ್ಷಿಕ 1.50 ಕೋಟಿ ರೂ. ಹಾಗೂ 5 ವರ್ಷಕ್ಕೆ ಒಟ್ಟು 7.54 ಕೋಟಿ ರೂ. ಆದಾಯ ರೈಲ್ವೆ ಇಲಾಖೆಗೆ ಲಭಿಸಲಿದೆ.
ಕಾಮಗಾರಿ ಪ್ರಗತಿ: ರೈಲ್ವೆ ಬೋಗಿ ರೆಸ್ಟೋರೆಂಟ್ ತೆರೆಯಲು ನೈಋತ್ಯ ರೈಲ್ವೆ ಜೂನ್‌ನಲ್ಲಿ ಇ-ಟೆಂಡರ್ ಕರೆದಿದ್ದು, ಇದೀಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕೆಎಸ್‌ಆರ್ ಹಾಗೂ ಎಸ್ ಎಂವಿಬಿನ “ಬೋಗಿ ರೆಸ್ಟೋರೆಂಟ್’ಗೆ 2 ಪ್ರತ್ಯೇಕ ಖಾಸಗಿ ಕಂಪನಿಗಳು ಗುತ್ತಿಗೆ ಪಡೆದುಕೊಂಡಿದೆ. ರೈಲ್ವೆ ನಿಲ್ದಾಣ ಹೊರಾಂಗಣದಲ್ಲಿ ಇಲಾಖೆ ಎಂಜಿನಿಯರ್ ನೇತೃತ್ವದಲ್ಲಿ ಟ್ಯಾಂಕ್ ಆಳವಡಿಕೆ ಕಾರ್ಯ ಮುಂದಿನ 60 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ತದನಂತರ ಲೀಸ್‌ಗೆ ಪಡೆದ ಕಂಪನಿ ಬೋಗಿಯೊಳಗೆ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಹಾಗೂ ಮಾರ್ಪಾಡು ಮಾಡಲಿದೆ.
ರೈಲ್ವೆ ಬೋಗಿ ರೆಸ್ಟೋರೆಂಟ್ ಗ್ರಾಹಕರಿಗೆ ಸೇವೆ ಸಲ್ಲಿಸಲು 24/7 ತೆರೆದಿರುತ್ತದೆ. ಇದು ಉತ್ತರ ಹಾಗೂ ದಕ್ಷಿಣ ಭಾರತದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಪ್ರತ್ಯೇಕ ಅಡುಗೆಮನೆಗಳಿಂದ ಒದಗಿಸುತ್ತದೆ. ಮದ್ಯ, ತಂಬಾಕು ಉತ್ಪನ್ನಗಳು, ಸಿಗರೇಟ್ ಮತ್ತಿತರ ರೈಲ್ವೆ ಇಲಾಖೆ ನಿಷೇಧಿಸುವ ವಸ್ತುಗಳನ್ನು ಹೊರತುಪಡಿಸಿ ಗುತ್ತಿಗೆದಾರರು ಎಲ್ಲಾ ರೀತಿಯ ಆಹಾರಗಳನ್ನು ಪೂರೈಸಲಿದ್ದಾರೆ.
ಬೋಗಿ ರೆಸ್ಟೋರೆಂಟ್ ಆದಾಯ ಮತ್ತು ಉದ್ಯೋಗವನ್ನು ಹೆಚ್ಚಿಸುವ ಯೋಜನೆಯ ಒಂದು ಭಾಗ. ಇದು ಅಕ್ಟೋಬರ್ ಅಂತ್ಯಕ್ಕೆ ಕಾರ್ಯಾಚರಿಸಲಿದೆ. ಪ್ರಸ್ತುತ ಟ್ರ್ಯಾಕ್ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಹೊಸ ರೀತಿಯಾದ ಅನುಭವ ಪ್ರಯಾಣಿಕರಿಗೆ ನೀಡಲಿದೆ. ಇದು ಯಶಸ್ವಿಯಾದರೆ ಬೇರೆ ರೈಲು ನಿಲ್ದಾಣದಲ್ಲಿ ಈ ಪ್ರಯೋಗ ಮಾಡಲಾಗುತ್ತದೆ. ●ಕುಸುಮಾ ಹರಿಪ್ರಸಾದ್, ಬೆಂಗಳೂರು ವಿಭಾಗೀಯ ವ್ಯವಸ್ಥಾಪಕಿ ನೈಋತ್ಯ ರೈಲ್ವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.