ಮಣಿಪುರ ಸರ್ಕಾರ ವಜಾಕ್ಕೆ ಹೆಚ್ಚಿದ ಒತ್ತಡ

Team Udayavani, Jul 25, 2023, 4:02 PM IST

ಮಣಿಪುರ ಸರ್ಕಾರ ವಜಾಕ್ಕೆ ಹೆಚ್ಚಿದ ಒತ್ತಡ

ಮೈಸೂರು: ಮಣಿಪುರ ಹಿಂಸಾಚಾರ ಮತ್ತು ಜನಾಂಗೀಯ ದಳ್ಳುರಿ ಶಮ ನಕ್ಕೆ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸ ಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೈಸೂರಿನಲ್ಲಿ ಪ್ರತಿಭಟಿಸಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೋಮವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದ ರೈತ ಹೋರಾಟಗಾರರು, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೇಷದ ಹಿಂಸಾಚಾರ ಹಾಗೂ ಕುಕಿ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಬೆತ್ತಲೆಗೊಳಿಸಿ ಅತ್ಯಾಚಾರ ನಡೆಸಿರುವ ಘಟನೆಗಳು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು ಎಂದು ದೂರಿದರು.

ಕಳೆದ 83 ದಿನಗಳಂದಲೂ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಘಟಕಗಳನ್ನು ಅವಲೋಕಿಸಿದರೆ ನಮ್ಮ ದೇಶದಲ್ಲಿ ನಾಗರಿಕ ಆಡಳಿತ ಇದೆಯೋ, ಇಲ್ಲವೋ ಎಂಬ ಆತಂಕ ಮತ್ತು ಅನುಮಾನಗಳು ಮೂಡಿದೆ. ಮಣಿಪುರದ ಜನಾಂಗೀಯ ದಳ್ಳುರಿಯನ್ನು ಶಮನ ಮಾಡುವ ಬದಲು ನಮ್ಮ ಒಕ್ಕೂಟ ಸರ್ಕಾರ ಮತ್ತು ಅಲ್ಲಿನ ರಾಜ್ಯ ಸರ್ಕಾರ ಪೋಷಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾನವ ಹಕ್ಕುಗಳ ಉಲ್ಲಂಘನೆ: ಈ ಹಿಂಸಾಚಾರಗಳ ಬಗ್ಗೆ ನಮ್ಮ ದೇಶದ ಸುಪ್ರಿಂಕೋರ್ಟ್‌ ಮಧ್ಯೆ ಪ್ರವೇಶಿಸಿದ ನಂತರ ನಮ್ಮ ಪ್ರಧಾನಿಗಳು ಘಟನೆ ಬಗ್ಗೆ ಮಾತನಾಡಿದ್ದಾರೆ. ಮಣಿಪುರ ದಲ್ಲಿ ಸಂಪೂರ್ಣ ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಹಿಂಸಾಚಾರವನ್ನು ತಡೆಗಟ್ಟದೆ ಮತ್ತಷ್ಟು ಪೋಷಿಸು ತ್ತಿದೆ ಎಂದು ಆರೋಪಿಸಿದರು.

ಈ ಸಂಬಂಧ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅಲ್ಲಿನ ಸರ್ಕಾರವನ್ನು ವಜಾ ಮಾಡಿ, ತಮ್ಮ ಆಡಳಿತ ಜಾರಿಗೊಳಿಸಿ ಶಾಂತಿ, ಸುವ್ಯವಸ್ಥೆ ಮರುಸ್ಥಾ ಪಿಸುವಂತೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಬೊಕ್ಕಳ್ಳಿ ನಂಜುಂಡಸ್ವಾಮಿ, ನಾಗನಹಳ್ಳಿ ವಿಜಯೇಂದ್ರ, ನೇತ್ರಾವತಿ, ಹೆಜ್ಜಿಗೆ ಪ್ರಕಾಶ್‌, ಎನ್‌. ಪುನೀತ್‌ ಸೇರಿದಂತೆ ಹಲವರು ಇದ್ದರು.

ಟಾಪ್ ನ್ಯೂಸ್

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

Mandya: ಕೆಎಸ್‌ಆರ್ ಟಿಸಿ ಬಸ್-‌ ಟೆಂಪೋ ಡಿಕ್ಕಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Mandya: ಕೆಎಸ್‌ಆರ್ ಟಿಸಿ ಬಸ್-‌ ಟೆಂಪೋ ಡಿಕ್ಕಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Amit Shah: ಖರ್ಗೆ ಹೇಳಿಕೆ ಅವರ ಮೋದಿ ದ್ವೇಷ ತೋರಿಸುತ್ತದೆ..: ಸಚಿವ ಅಮಿತ್‌ ಶಾ

Amit Shah: ಖರ್ಗೆ ಹೇಳಿಕೆಯು ಕಾಂಗ್ರೆಸ್‌ ನ ಮೋದಿ ದ್ವೇಷ ತೋರಿಸುತ್ತದೆ..: ಸಚಿವ ಅಮಿತ್‌ ಶಾ

INDvsBAN; ಮುಗಿಯಿತು ಮಳೆಯಾಟ, ಇನ್ನು ಟೆಸ್ಟ್‌ ಪಂದ್ಯಾಟ; ಕಾನ್ಪುರದಲ್ಲಿ ಪಂದ್ಯಾರಂಭ

INDvsBAN; ಮುಗಿಯಿತು ಮಳೆಯಾಟ, ಇನ್ನು ಟೆಸ್ಟ್‌ ಪಂದ್ಯಾಟ; ಕಾನ್ಪುರದಲ್ಲಿ ಪಂದ್ಯಾರಂಭ

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

3

Influencer: ತನ್ನನ್ನು ತಾನೇ ಮದುವೆಯಾಗಿದ್ದ 26ರ ಯುವತಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahisha

Mysuru: ಮಹಿಷಾ ಪ್ರತಿಮೆ ಪುಷ್ಪಾರ್ಚನೆಗೆ ಪೊಲೀಸರ ತಡೆ: ಆಕ್ರೋಶ

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

1-bahga

K.S.Bhagawan ವಿವಾದ;ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು…

Yadhu

Udupi: ಚಾಮುಂಡಿ ಬೆಟ್ಟದ ಮೇಲೆ ಮಹಿಷ ದಸರಾ ಸರಿಯಲ್ಲ: ಸಂಸದ ಯದುವೀರ್‌

Mysore

Mysuru ಸಾಂಸ್ಕೃತಿಕ ನಗರಿಯಲ್ಲಿ ರೇವ್‌ ಪಾರ್ಟಿ: ಪೊಲೀಸ್‌ ದಾಳಿ, 50ಕ್ಕೂ ಹೆಚ್ಚು ಮಂದಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

Dadasaheb Phalke: ಸ್ಟಾರ್ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ನಕ್ಸಲೈಟ್ ಆಗಿದ್ದ ಈ ನಟ!

Mandya: ಕೆಎಸ್‌ಆರ್ ಟಿಸಿ ಬಸ್-‌ ಟೆಂಪೋ ಡಿಕ್ಕಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Mandya: ಕೆಎಸ್‌ಆರ್ ಟಿಸಿ ಬಸ್-‌ ಟೆಂಪೋ ಡಿಕ್ಕಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Amit Shah: ಖರ್ಗೆ ಹೇಳಿಕೆ ಅವರ ಮೋದಿ ದ್ವೇಷ ತೋರಿಸುತ್ತದೆ..: ಸಚಿವ ಅಮಿತ್‌ ಶಾ

Amit Shah: ಖರ್ಗೆ ಹೇಳಿಕೆಯು ಕಾಂಗ್ರೆಸ್‌ ನ ಮೋದಿ ದ್ವೇಷ ತೋರಿಸುತ್ತದೆ..: ಸಚಿವ ಅಮಿತ್‌ ಶಾ

INDvsBAN; ಮುಗಿಯಿತು ಮಳೆಯಾಟ, ಇನ್ನು ಟೆಸ್ಟ್‌ ಪಂದ್ಯಾಟ; ಕಾನ್ಪುರದಲ್ಲಿ ಪಂದ್ಯಾರಂಭ

INDvsBAN; ಮುಗಿಯಿತು ಮಳೆಯಾಟ, ಇನ್ನು ಟೆಸ್ಟ್‌ ಪಂದ್ಯಾಟ; ಕಾನ್ಪುರದಲ್ಲಿ ಪಂದ್ಯಾರಂಭ

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.