Used books factory: ಲಕ್ಷ್ಮೀ ಸದನದಲ್ಲಿ ಸರಸ್ವತಿ ಆರಾಧನೆ!
Team Udayavani, Jul 25, 2023, 1:21 PM IST
ಹುಬ್ಬಳ್ಳಿ: ವಿವಿಧ ದೇಶಗಳಲ್ಲಿ ಸಿಗುವ ಪುಸ್ತಕಗಳು ಬೇಕೆ, ಆಂಗ್ಲ ಭಾಷೆಗಳಲ್ಲಿ ನಿಮಗೆ ಇಷ್ಟವಾದ ಲೇಖಕರ ಪುಸ್ತಕಗಳು ಅತೀ ಕಡಿಮೆ ಬೆಲೆಯಲ್ಲಿ ಬೇಕೆ, ಹಾಗಿದ್ದಲ್ಲಿ ಇಲ್ಲಿನ ಜೆ.ಸಿ.ನಗರದ ಲಕ್ಷ್ಮೀ ಸದನಕ್ಕೆ ಬನ್ನಿ!
ಹೌದು, ಜೆ.ಸಿ.ನಗರದ ಲಕ್ಷ್ಮೀ ಸದನದಲ್ಲಿ ವಿವಿಧ ದೇಶಗಳಿಂದ ತರಿಸಲಾಗಿರುವ ವಿವಿಧ ಲೇಖಕರ ಹಾಗೂ ಆಂಗ್ಲ ಭಾಷೆಗಳ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಮೂಲತಃ ಬೆಂಗಳೂರಿನವರಾಗಿರುವ ಸತೀಶಕುಮಾರ “ಯೂಸ್ಡ್ ಬುಕ್ ಫ್ಯಾಕ್ಟರಿ’ ಎನ್ನುವ ಹೆಸರಿನಡಿ ದೇಶದ ವಿವಿಧ ಭಾಗಗಳಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳುತ್ತಿದ್ದಾರೆ. ಓದುವ
ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಇಂತಹ ಪುಸ್ತಕ ಮಾರಾಟ ಹಾಗೂ ಪ್ರದರ್ಶನ ನಡೆಸಲಾಗುತ್ತಿದೆ. ಅದೀಗ ಹುಬ್ಬಳ್ಳಿಗೂ ಕಾಲಿಟ್ಟಿದೆ.
ಮಾತ್ರವಲ್ಲದೇ Usedbooksfactory.com ಮೂಲಕ ಇಡೀ ದೇಶದಲ್ಲಿ ಪುಸ್ತಕಗಳನ್ನು ಪಸರಿಸುವ ಕೆಲಸ ಮಾಡುತ್ತಿದೆ.
30ರ ವರೆಗೆ ಆಯೋಜನೆ: ನಗರದ ಜೆ.ಸಿ.ನಗರದ ಲಕ್ಷ್ಮೀಸದನದಲ್ಲಿ ಜು.30ರ ವರೆಗೆ ನಡೆಯುವ ಪುಸ್ತಕ ಪ್ರದರ್ಶನ ಹಾಗೂ ಮಾರಾಟದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿದೆ. ಎಲ್ಲವೂ ಆಂಗ್ಲ ಭಾಷೆಯ ಪುಸ್ತಕಗಳಾಗಿದ್ದು, ದೇಶ-ವಿದೇಶಗಳ ಹೆಸರಾಂತ ಲೇಖಕರ ಪುಸ್ತಕಗಳು ಇಲ್ಲಿ ಇಡಲಾಗಿದೆ. ಕೇವಲ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಅಷ್ಟೇ ಅಲ್ಲದೇ ಸಾರ್ವಜನಿಕರು ಇಲ್ಲಿಯೇ ಕುಳಿತು ಓದಿಕೊಂಡು ಹೋಗಬಹುದು. ಅವರಿಗೆ ಇಷ್ಟವಾದಲ್ಲಿ ಪುಸ್ತಕ ಖರೀದಿ ಮಾಡಬಹುದು. ಈಗಾಗಲೇ ಅವರು ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ವಿವಿಧೆಡೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಾಡಿದ್ದಾರೆ.
ಪುಸ್ತಕ ಮಾರಾಟದಲ್ಲಿ ಕೆಟಗರಿ
ಪುಸ್ತಕ ಪ್ರೇಮಿಗಳಿಗೆ ಸತೀಶಕುಮಾರ ಅವರು ವಿಶೇಷ ಪುಸ್ತಕ ಮಾರಾಟ ವ್ಯವಸ್ಥೆ ಕಲ್ಪಿಸಿದ್ದು, ಮೂರು ವಿಭಾಗಗಳಾಗಿ ವಿಂಗಡಣೆ ಮಾಡಿದ್ದಾರೆ. ಚಿಕ್ಕ, ಮಧ್ಯಮ, ದೊಡ್ಡ ಗಾತ್ರದ ಮೂರು ಬಾಕ್ಸ್‌ಗಳಿದ್ದು, ತಲಾ 1199, 1799, 2999 ರೂ. ದರ ನಿಗದಿ ಮಾಡಿದ್ದಾರೆ. ಆಯಾ ಬಾಕ್ಸ್‌ಗೆ ನಿಗದಿಯಾದ ದರ ನೀಡಿ ಅದರಲ್ಲಿ ಹಿಡಿಯುವಷ್ಟು ನಮಗಿಷ್ಟವಾದ ಪುಸ್ತಕವನ್ನು ಜೋಳಿಗೆಗೆ ಹಾಕಿಕೊಳ್ಳಬಹುದಾಗಿದೆ. ಮಧ್ಯಮ ಗಾತ್ರದ ಬಾಕ್ಸ್‌ನಲ್ಲಿ ಕಡಿಮೆ ಎಂದರೂ 17ರಿಂದ 19 ಪುಸ್ತಕಗಳು ತುಂಬಲಿವೆ!
ವೈವಿಧ್ಯಮಯ ಹೊತ್ತಿಗೆಗಳು
ಮಕ್ಕಳಿಗೆ ಬೇಕಾಗುವ ಪುಸ್ತಕಗಳು, ವಯಸ್ಕರು, ಮಹಿಳೆಯರು, ಇತಿಹಾಸ, ಥ್ರಿಲ್ಲರ್ ಹಾಗೂ ಕ್ರೈಂಗೆ ಸಂಬಂಧಿಸಿದ, ಲಿಟರೇಚರ್, ಬಯೋಗ್ರಫಿ, ರೊಮ್ಯಾನ್ಸ್, ಆರ್ಟ್ಸ್, ಟ್ರಾವೆಲ್, ಬಿಜಿನೆಸ್, ಸೆಲ್ಫ್ ಹೆಲ್ಪ್, ಆಟೋ ಬಯೋಗ್ರಫಿ ಮಕ್ಕಳಿಗಾಗಿ ಲೆಫ್ಟ್ ದಿ ಫಿಲ್ಪ್, ಥಿನ್ ಫಂಕ್ಷನ್, ಎನ್‌ಕ್ಲೋಪಿಡಿಯಾ, ಬೋರ್ಡ್ ಬುಕ್ಸ್, ಲರ್ನಿಂಗ್ ಬುಕ್ಸ್ ಸೇರಿದಂತೆ ನೂರಾರು ಬಗೆಯ ಪುಸ್ತಕಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.
ದೇಶ-ವಿದೇಶಗಳಲ್ಲಿ ಲಭ್ಯವಾಗುವ ಪುಸ್ತಕಗಳು ನಮ್ಮ ಕೈಯಲ್ಲಿ ಇಂದು ಸ್ಥಳೀಯವಾಗಿ ಸಿಗುತ್ತಿವೆ ಎಂದರೇ ಅದಕ್ಕೆ usedbooksfactory ಕಾರಣ ಎನ್ನಬಹುದು. ಯುಕೆ, ಯುಎಸ್‌ನಲ್ಲಿ ಲಭ್ಯವಾಗುವ ಪುಸ್ತಕಗಳು ಇಂದು ನಮಗೆ ಇಲ್ಲಿಯೇ ಸಿಗುತ್ತಿವೆ. ಅಷ್ಟೇ ಅಲ್ಲದೇ ಲಕ್ಷ್ಮೀ ಸದನದಲ್ಲಿ ಸರದಿಯಲ್ಲಿ ನಿಂತು ಪುಸ್ತಕ ಖರೀದಿಸಿದ್ದು, ಇನ್ನೂ ಕೂಡಾ ನಮ್ಮಲ್ಲಿ ಪುಸ್ತಕ ಓದುವ ಜನರಿದ್ದಾರೆ ಎಂದು ಸಂತೋಷವಾಯಿತು. ಆದರೆ ಪುಸ್ತಕ ಖರೀದಿಗೆ ಹೋಗುವಾಗ ನಮಗೆ ಇಂತಹದೇ ಪುಸ್ತಕ ಬೇಕೆಂದು ಹೋಗದೇ ಅಲ್ಲಿರುವ ಅತ್ಯುತ್ತಮ ಪುಸ್ತಕಗಳು ನಮ್ಮವಾಗಲಿ ಎಂದುಕೊಂಡು ಖರೀದಿಗೆ ಮುಂದಾಗಬೇಕು.
ಪ್ರಶಾಂತ ಆಡೂರ, ಪುಸ್ತಕ ಪ್ರೇಮಿ
ಜನರು ಓದುವ ಹವ್ಯಾಸ ಕಳೆದುಕೊಂಡಿದ್ದು, ಮರು ಓದುವಂತಾಗಬೇಕು. ಮಕ್ಕಳೊಂದಿಗೆ ಪಾಲಕರು ಕುಳಿತು ಓದಿದಾಗ ಮಕ್ಕಳು ಹೆಚ್ಚಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಆ ಎಲ್ಲ ದೃಷ್ಟಿಯಿಂದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಇಲ್ಲಿ ಇಡಲಾಗಿದೆ. ಜು.21ರಿಂದ ಇಲ್ಲಿಯವರೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡಲಾಗಿದೆ. ಜು.30ರವರೆಗೆ ಈ ಪ್ರದರ್ಶನ ಮಾರಾಟ ನಡೆಯಲಿದೆ.
ಸತೀಶ ಕುಮಾರ, ವ್ಯವಸ್ಥಾಪಕ
*ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.